ಗೊರಬಾಳ ಗಣೇಶೋತ್ಸವದ ವಿಶೇಷತೆ: 17 ವರ್ಷಗಳಿಂದ ಗ್ರಾಮೀಣ ಶೈಲಿಯ ಪ್ರಸಾದದ ಪರಂಪರೆ

Posted by

ಸುದ್ದಿ ಬೆಳಕು ವಾರ್ತೆ

ಇಳಕಲ್ : ಸಮೀಪದ ಗೊರಬಾಳ ಗ್ರಾಮದಲ್ಲಿ ಪ್ರತಿ ವರ್ಷ ಗಣೇಶನ ಹಬ್ಬ ಬಂದರೆ ಗ್ರಾಮದ ಯುವಕರೆಲ್ಲರಿಗೂ ಹಬ್ಬವೊ ಹಬ್ಬ ಎನ್ನುವಂತೆ ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ಬಾಸವಾಗುತ್ತದೆ ಸುಮಾರು ಎಂಟು ಕಮಿಟಿಯವರು ಸಾರ್ವಜನಿಕ ಗಣಪ ಪ್ರತಿಷ್ಠಾಪನೆ ಮಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮಹಿಳೆಯರಿಗೆ ಯುವಕ ಯುವತಿಯರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ವಿಶೇಷ ಆಟೋಟಗಳನ್ನು ಆಯೋಜನೆ ಮಾಡಿ ಮನರಂಜನೆ ನೀಡುವುದರ ಮೂಲಕ ಗ್ರಾಮದ ಎಲ್ಲಾ ಗಣೇಶನ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಾಡುವ ಹೊಣೆ ಗುರು ಹಿರಿಯರನ್ನು ಮಹಿಳೆಯರನ್ನು ಯುವಕ ಯುವತಿಯರನ್ನು ಹಾಗೂ ಮಕ್ಕಳನ್ನು ರಂಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶೇಷ ಮತ್ತು ವಿಭಿನ್ನವಾಗಿ ಗಣೇಶನ ಹಬ್ಬವನ್ನು ಇಡೀ ಗ್ರಾಮಕ್ಕೆ ಗ್ರಾಮವೇ ಹಬ್ಬದ ವಾತಾವರಣದಂತೆ ನಿರ್ಮಿಸಿ ತುಂಬಾ ಅಚ್ಚುಕಟ್ಟಾಗಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ವಿವಿಧ ಕಡೆ ಎಂಟು ದಿವಸ ಮಹಿಳೆಯರು ತಾಯಂದಿರು ಕಾಯಿಪಲ್ಲೆ ಹೆಚ್ಚುವ ಕಾಯಕದಲ್ಲಿ ತೊಡಗಿದರೆ ಕಾರ್ಯಕ್ರಮ ಜವಾಬ್ದಾರಿ ಹಿರಿಯರಿಗೆ ಅಡುಗೆ ವ್ಯವಸ್ಥೆ ಮಾಡಿಸುವ ಜವಾಬ್ದಾರಿ ಯುವಕರೆಲ್ಲರೂ ದವಸ ಧಾನ್ಯ ಸಾಮಗ್ರಿಗಳನ್ನು ತಂದು ಅಡುಗೆ ಮಾಡಿಸುವ ಕಾಯಕದಲ್ಲಿ ಒಂದು ವಾರ ಬಿಜಿ ಆಗುತ್ತಾರೆ. ಈ ರೀತಿಯಾಗಿ ವಿಶೇಷವಾಗಿ ಆಚರಿಸುವ ಗಣೇಶನ ಹಬ್ಬವನ್ನು ಗೊರಬಾಳದ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ಯುವಕ ಮಿತ್ರರು ನಶಿಸುತ್ತಿರುವ ಗ್ರಾಮೀಣ ಶೈಲಿಯ ಪ್ರಸಾದವನ್ನೇ ಊಟಕ್ಕೆ ಮಾಡಿಸುವ ಪರಂಪರೆ ರೂಡಿಸಿಕೊಂಡು ಬಂದಿದ್ದು ಕಳೆದ 17 ವರ್ಷಗಳಿಂದಲೂ ಒಂದೊಂದು ವಿಶೇಷ ಮತ್ತು ವಿಭಿನ್ನವಾಗಿ ಗಣೇಶನ ಹಬ್ಬ ಆಚರಿಸುತ್ತಾ ಬಂದಿದ್ದು ಇದಕ್ಕೆ ವ್ಯತರಿಕ್ತ ವೆಂಬಂತೆ ಈ ವರ್ಷವೂ ಗಣಪನಿಗೆ ಇಷ್ಟವಾದ ಪುಂಡಿಪಲ್ಲೆ ಮತ್ತು ಖಡಕ್ ರೊಟ್ಟಿ ಹಾಗೂ ಬೆಲ್ಲದ ಬುಂದೆ. ಅನ್ನ ಸಾರು ಅಡುಗೆ ಮಾಡಿಸಿ ವಿಶೇಷತೆ ಮೆರೆದರು.

You Might Also Like

Leave a Reply

Your email address will not be published. Required fields are marked *

Suddi Belaku