ಬರಗಾಲ ಸಮಸ್ಯೆ ಆಲಿಸುವಲ್ಲಿ ತಾಳ್ಮೆ ಕಳೆದುಕೊಂಡ ಸಚಿವ ಪಾಟೀಲ್

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ತ್ರೆöಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ನಗರಕ್ಕೆ ಆಗಮಿಸಿದ ರಾಜ್ಯ ವೈಧ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉಧ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಜಿಲ್ಲೆಯ ವಿವಿಧ ಸಂಘಟನೆಗಳ, ಹೋರಾಟಗಾರರ ಜೊತೆ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಛೇರಿಯಲ್ಲಿ ಜಿಲ್ಲೆಯ ಬರಗಾಲ ಸಮಸ್ಯೆ ಆಲಿಸುವಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ಜರುಗಿತು.
ಸರ್ವ ಸಂಘಟನೆಗಳ ಒಕ್ಕೂಟದ ನಿಯೋಗದ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ ರಾಮಸಮುದ್ರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರು ಕಛೇರಿಯಲ್ಲಿ ಜಿಲ್ಲೆಯ ೫ ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿ ರೈತರು ಸಾಲದ ಸುಳಿಗೆ ಸಿಲುಕಿ ಸಂಕಷ್ಟದಲ್ಲಿದ್ದಾರೆ, ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಜಿಲ್ಲಾಡಳಿತ ಸರ್ಕಾರಕ್ಕೆ ವಾಸ್ತವಿಕ ಬರ ವರಧಿ ಸಲ್ಲಿಸಿದರು, ಇನ್ನೂ ಏಕೆ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಪ್ರಸ್ತಾಪಿಸುತ್ತಿದ್ದಂತೆ ವಿಚಲಿತರಾದ ಸಚಿವ ಪಾಟೀಲ್, ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮಗಳಂತೆ ಕೆಲ ತಾಲ್ಲೂಕುಗಳನ್ನು ಕೈ ಬಿಟ್ಟಿದ್ದಾರೆ, ಅದರಲ್ಲಿ ನನ್ನ ಮತಕ್ಷೇತ್ರ ಸೇಡಂ ಕೂಡ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಲೆ ಆಕ್ರೋಶಗೊಂಡ ಸಂಘಟನೆಗಳ ಮುಖಂಡರು ನಿಮಗೆ ಯಾದಗಿರಿ ಜಿಲ್ಲೆಯ ಬಗ್ಗೆ ನಿಜವಾದ ಕಾಳಜಿಯಿಲ್ಲ, ನೀವು ಉಡಾಫೆ ಉತ್ತರ ಕೊಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.


ನಾವೂ ಈ ಹಿಂದೆ ಜಿಲ್ಲಾ ಕೇಂದ್ರ ಬಂದ್ ಮಾಡಿ, ಪ್ರತಿಭಟನೆ ಮಾಡಿದ ಸಮಯದಲ್ಲಿ ಸರ್ಕಾರಕ್ಕೆ ಗಡುವು ನೀಡಿ, ನೀವೂ ಇಂದು ಕೆಡಿಪಿ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದೇವು, ಆದರೆ ನೀವೂ ಏನು ಕೆಲಸ ಮಾಡಿದ್ದೀರಿ ಎಂದು ಏರು ಧ್ವನಿಯಲ್ಲಿ ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಟ್ಟಿನಿಂದಲೇ ಸಚಿವರು ಮುಖಂಡರ ಕೈಯಲ್ಲಿದ್ದ ಮನವಿ ಪತ್ರವನ್ನು ಕಸಿದುಕೊಂಡು ನಾನು ಕೂಡ ಮುಖ್ಯಮಂತ್ರಿಗಳ ಹಾಗೂ ಕಂದಾಯ ಸಚಿವರ ತಂದಿದ್ದೇನೆ, ಸೆ. ೧೬ರಂದು ಕೆಲ ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಸಿಟ್ಟಿನಿಂದಲೇ ಉತ್ತರಿಸಿ, ತೆರಳಿದರು,
ಇದರಿಂದ ಸಮಾಧಾನಗೊಳ್ಳದ ಮುಖಂಡರು ಸೆ.೧೭ ಒಳಗಾಗಿ ಬರ ಪಟ್ಟಿಗೆ ಜಿಲ್ಲೆಯ ತಾಲ್ಲೂಕುಗಳನ್ನು ಸೇರಿಸದಿದ್ದರೆ ಅಂದು ನಡೆಯುವ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಂದು ಕಪ್ಪು ಭಾವುಟ ಪ್ರದರ್ಶನ ಮಾಡಿ, ಪ್ರತ್ಯೇಕ ರಾಜ್ಯ ಧ್ವಜವನ್ನು ಹಾರಿಸುತ್ತೇವೆ ಎಂದು ಎಚ್ಚರಿಸಿದರು,
ಅಲ್ಲದೇ ಇಂತಹ ಸಚಿವರನ್ನು ಸರ್ಕಾರ ತಕ್ಷಣವೇ ಬೇರೆ ಜಿಲ್ಲೆಗೆ ಬದಲಾವಣೆ ಮಾಡಲು ಆಗ್ರಹಿಸುತ್ತೇವೆ, ಜಿಲ್ಲೆಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲು ಸರ್ವರು ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಅವರ ಜೊತೆಯಲ್ಲಿದ್ದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ರಾಜಾ ವೇಣುಗೋಪಾಲ ನಾಯಕ ಅವರು ಪರಿಸ್ಥಿತಿ ತಿಳಿಗೊಳಿಸಿದರು.
ಸರ್ವ ಸಂಘಟನೆ ಸಮಿತಿಯ ಮುಖಂಡರಾದ ಮೈಲಾರಪ್ಪ ಜಾಗೀರ್ದಾರ್. ಕರ್ನಾಟಕ ಜನ ಸೇನಾ ರಾಜ್ಯಾಧ್ಯಕ್ಷರು, ಅಶೋಕ ಐಕೂರ ವರ್ತೂರು ಪ್ರಕಾಶ್ ಯುವ ಘರ್ಜನೆ ಜಿಲ್ಲಾಧ್ಯಕ್ಷರು, ಸೈದಪ್ಪ ಕೂಲೂರುಕರ ದಲಿತ ಸೇನೆ. ರವಿ ಕೆ. ಮುದ್ನಾಳ, ನಮ್ಮ ಕರೆವೆ ಜಿಲ್ಲಾಧ್ಯಕ್ಷರು ಯಾದಗಿರಿ. ವಿಶ್ವರಾಧ್ಯ ದಿಮ್ಮಿ. ಅನಿಲ್ ಕುಮಾರ್ ಕರಾಟೆ, ನಮ್ಮ ಕರ್ನಾಟಕ ಸೆನೆ ಜಿಲ್ಲಾಧ್ಯಕ್ಷರು. ರಾಜಾಹುಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾಧ್ಯಕ್ಷರು, ಅಜಯ್ ಮಾಸನ್, ಸಿದ್ದು ತಂಗಡಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು, ನವ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷರು, ಮಾಸ್ಟರ್. ದೀಪಕ್ ಒಡೆಯರ್. ಭೀಮ ಪೂಜಾರಿ ನಮ್ಮ ಕರ್ನಾಟಕ ಸೇನೆ ಪ್ರಧಾನ ಕಾರ್ಯದರ್ಶಿ. ಬಂಗಾರು ಬಂಜಾರ ಸಮಾಜ ಜಿಲ್ಲಾಧ್ಯಕ್ಷರು. ನಿಜಲಿಂಗಪ್ಪ ಕೆಆರ್‌ಎಸ್ ಪಕ್ಷ ಜಿಲ್ಲಾಧ್ಯಕ್ಷರು. ಆನಂದ್ ಹಾಸನಾಳ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ. ಗೌತಮ್ ಅರಿಕೇರಿ ವರ್ತೂರು ಪ್ರಕಾಶ್ ಯುವ ಘರ್ಜನೆ ಜಿಲ್ಲಾ ಉಪಾಧ್ಯಕ್ಷರು. ಸಿಮೆನ್ ತುಮಕೂರು. ಹಲವರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku