ಸಾಮಾಜಿಕ ಕಾರ್ಯಗಳಿಂದ ಸಮಾಜದಲ್ಲಿ ಬದಲಾವಣೆ : ಪಾಟೀಲ್

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರು, ಇನ್ನೂ ಸಾಧಿಸಬೇಕಾದುದ್ದು ಬಹಳಷ್ಟಿದೆ, ಸರ್ಕಾರದ ಕಾರ್ಯಕ್ರಮಗಳ ಜೊತೆಗೆ ಖಾಸಗಿ ಸಂಘ-ಸAಸ್ಥೆಗಳು ಪ್ರಾಮಾಣಿಕವಾಗಿ ಕೈ ಜೋಡಿಸಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಬದಲಾವಣೆಯ ಗುರಿ ತಲುಪಲು ಸಾಧ್ಯ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಶಾಂತಗೌಡ ಪಾಟೀಲ್ ಹೇಳಿದರು.
ನಗರದ ಡಿಡಿಯು ಶಾಲೆಯ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರುಚಿ ಟ್ರಸ್ಟ್ನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ವಿಧ್ಯಾವಂತ ಯುವಕರು ತಂಡ ಕಟ್ಟಿಕೊಂಡು ಸಕರಾತ್ಮಕ ಚಿಂತನೆಗಳೊAದಿಗೆ ತಮ್ಮ –ತಮ್ಮ ಭಾಗಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಬದುಕು ಕಟ್ಟಿಕೊಳ್ಳಲು ಅಗತ್ಯ ಮಾರ್ಗದರ್ಶನ, ಸಹಾಯ, ಸಹಕಾರ ನೀಡಬೇಕು, ಅಂದಾಗ ಮಾತ್ರ ಯಶಸ್ಸು ಸಾಧಿಸುವ ಜೊತೆಗೆ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ರುಚಿ ಟ್ರಸ್ಟ್ನ ಮುಖ್ಯಸ್ಥರಾದ ರುದ್ರಮುನಿ ಸ್ವಾಮಿ ದಂಪತಿಗಳು ಕಳೆದ 2 ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಅಭಿಯಾನ ನಡೆಸುವ ಮೂಲಕ ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಡಲು ಪ್ರಾಮಾಣಿಕ ಕೆಲಸ ಮಾಡಿದ್ದಾರೆ, ರುಚಿ ಟ್ರಸ್ಟ್ ಸ್ಥಾಪನೆ ಮೂಲಕ ಕಳೆದ 1 ವರ್ಷದಿಂದ ಜಿಲ್ಲಾ ಕೇಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲಿ ಎಂಬ ಮಹತ್ವದ ಉದ್ದೇಶದಿಂದ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತರಾದ ಮಲ್ಲಿಕಾರ್ಜುನರಡ್ಡಿ ಹತ್ತಿಕುಣಿ ಮಾತನಾಡಿ, ಇಂದು ನಾವೇಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವುದು ಅವಶ್ಯಕವಾಗಿದೆ, ಅದರಿಂದ ಮಾತ್ರ ನಮಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಶೈಕ್ಷಣಿಕವಾಗಿ ಜಿಲ್ಲೆಯೂ ಅಭಿವೃದ್ಧಿ ಸಾಧಿಸಬೇಕು, ಈ ವರ್ಷ ಜಿಲ್ಲೆಯ 4 ವಿಧ್ಯಾರ್ಥಿಗಳು ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವುದು ಒಳ್ಳೇಯ ಬೆಳವಣಿಗೆ, ಜಿಲ್ಲೆಯಲ್ಲಿ ಮಾನವ ಸಂಪನ್ಮೂಲಕ್ಕೆ ಯಾವುದೇ ಕೊರತೆಯಿಲ್ಲ, ಕಾರಣ ಟ್ರಸ್ಟ್ನವರು ಕ್ರೀಯಾಶೀಲವಾಗಿ ತಂಡ ರಚಿಸಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ಅಂದಾಗ ಮಾತ್ರ ನಿಮ್ಮ ಗುರಿ ತಲುಪಲು ಸಾಧ್ಯ, ಸಮಾಜದಲ್ಲಿ ನಿಮ್ಮ ಚಟುವಟಿಕೆಗಳಿಗೆ ಎಲ್ಲಾ ಸಮುದಾಯದಿಂದ ಸಹಕಾರ ಸಿಗುತ್ತದೆ ಎಂದು ಸಲಹೆ ನೀಡಿದರು,
ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಮುಖ್ಯಸ್ಥರಾದ ಹೆಚ್.ಎಸ್ ರೆಡ್ಡಿ ಮಾತನಾಡಿ, ಯಾವುದೇ ಮಹತ್ವದ ಸಾಧನೆ ಮಾಡಬೇಕಾದರೆ ಮೊದಲು ನಮ್ಮ ಆರೋಗ್ಯ ಸಧೃಢವಾಗಿರಬೇಕು, ಪರೋಪಕಾರಿಯಾಗಿ ಬಾಳುವ ಮನೋಗುಣ ಹೊಂದುವ ಮೂಲಕ ಅಚಲ ನಿರ್ಧಾರದೊಂದಿಗೆ ಕೆಲಸ ಮಾಡಿದಾಗ ಅದು ಇತರರಿಗೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು,
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಈಗಾಗಲೇ ಬೆಂಗಳೂರಿನಲ್ಲಿ ಸಹಸ್ರಾರು ಮಹಿಳೆಯರಿಗೆ ಹಾಗೂ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರು ದೈನಂದಿನ ಬದುಕಿನಲ್ಲಿ ಕ್ರೀಯಾಶೀಲರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿ ಕೆಲಸ ಮಾಡುತ್ತಿದೆ, ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು,
ಸಮಾರಂಭದಲ್ಲಿ ಸಾಹಿತಿ ಅಮರಗುಂಡಪ್ಪ ಹೂಗಾರ ರಾಯಚೂರ ರಚಿಸಿದ “ನಿಂದೆಲ್ಲ ಗೊತ್ತಾದಣ್ಣ” ಎಂಬ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಲಾಯಿತು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರುದ್ರಮುನಿ ಸ್ವಾಮಿ ಮಾತನಾಡಿ, ಟ್ರಸ್ಟ್ನ ಚಟುವಟಿಕೆಗಳನ್ನು ವಿವರಿಸಿ, ಆ ಕೆಲಸಗಳಿಂದ ನನಗೆ ಗೌರವ, ಆತ್ಮತೃಪ್ತಿ ಸಿಕ್ಕಿದೆ ಎಂದು ತಿಳಿಸಿ, ಮುಂದಿನ ತಮ್ಮ ಸಂಕಲ್ಪಗಳನ್ನು ವಿವರಿಸಿದರು,
ವೇದಿಕೆ ಮೇಲೆ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಪೂಜಾರಿ ರಾಮಸಮುದ್ರ, ಸಾಹಿತಿ ಅಮರಗುಂಡಪ್ಪ ಹೂಗಾರ ಉಪಸ್ಥಿತರಿದ್ದರು.
ಗುರುಪ್ರಸಾದ್ ವೈಧ್ಯ ಸ್ವಾಗತಿಸಿ, ನಿರೂಪಿಸಿದರೇ, ಸುಭಾಷ ಮಾಳಿಕೇರಿ ವಂದಿಸಿದರು.

Leave a Reply

Your email address will not be published. Required fields are marked *

↑
Suddi Belaku