
ಸುದ್ದಿ ಬೆಳಕು ವಾರ್ತೆ
ವಡಿಗೇರಾ: ಗ್ರಾಮೀಣ ಭಾಗದಲ್ಲಿ ನಿರಂತರ ಅಕುಶಲ ಕೂಲಿ ಕೆಲಸ ಒದಗಿಸಲು, ವಿಕಾಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕ ಮಿಷನ್ ಯೋಜನೆಯಡಿ ಸಾವಿರಾರು ಜನರು ಕೂಲಿ ಕೆಲಸ ಮಾಡುತ್ತಿದ್ದು, ಸರ್ಕಾರದ ನಿಗದಿಪಡಿಸಿದ ಕಾಮಗಾರಿಗಳಲ್ಲಿ ಗುಣಮಟ್ಟ ಆಸ್ತಿ ಸೃಜನೆಗೆ ತಾವೇಲ್ಲರು ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಶ್ರೀ ಸಿ.ಬಿ ದೇವರಮನೆ ತಿಳಿಸಿದರು.
ತಾಲ್ಲೂಕಿನ ತುಮಕೂರು, ಬಿಳ್ಹಾರ ಹಾಗೂ ಐಕೂರು ಗ್ರಾಮಗಳಿಗೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು, ಗ್ರಾಮದ ಹೊರವಲಯದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೈಗೊಂಡ ಗೋ ಕಟ್ಟೆ ಕಾಮಗಾರಿ ಹಾಗೂ ಟ್ರಂಚೆಸ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಅನುಮೋದನೆಗೊಂಡ ಪತ್ರಿಕೆಯಲ್ಲಿನ ತಾಂತ್ರಿಕ ಮಾನದಂಡಗಳು ಪರಿಶೀಲಿಸಿ, ನಿಯಮಾನುಸಾರ ಕಾಮಗಾರಿ ಗುಣಮಟ್ಟ, ಕಾಮಗಾರಿ ಅಳತೆ ಹಾಗೂ ಕಾರ್ಮಿಕರ ಹಾಜರಾತಿ ಪರಿಶೀಲಿಸಿ, ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರು ಕಾಮಗಾರಿ ಭೌತಿಕ ಗುಣಮಟ್ಟ ಕಾಪಾಡಲು, ತಮಗೆ ಸೂಚಿಸಿದ ಮಾಪಕದ ಪ್ರಕರಾ ಕೆಲಸ ನಿರ್ವಹಿಸಲು ಸೂಚಿಸಿದರು. ಈಗಾಗಲೇ ಬರ ಆವರಿಸಿದ ಹಿನ್ನಲೆ ನಿರಂತರ ಕೆಲಸ ಕೊಡಲು ಇಲಾಖೆ ಸಿದ್ಧವಿದ್ದು, ತಾವು ನಿರ್ಲಕ್ಷ್ಯ ವಹಿಸದೆ, ನಿಗದಿತ ಸಮಯಕ್ಕೆ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಿ ತಾಂತ್ರಿಕ ಮಂಜೂರಾತಿ ಪ್ರಕಾರ ಕೆಲಸ ನಿರ್ವಹಿಸಬೇಕಿದ ಎಂದರು.
ಇದೆ ವೇಳೆ ಮಾನ್ಯರು ಬಿಳ್ಹಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಟ್ರಂಚೆಸ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಜಾಬ್ ಕಾರ್ಡ್ ಮೇಳ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೇ ಅಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಮೇಳ ನಡೆಯುತ್ತಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ, ಗ್ರಾಮದಲ್ಲಿ ಯಾರೂ ಇದುವರೆಗೆ ಜಾಬ್ ಕಾರ್ಡ್ ಹೊಂದಿಲ್ಲ, ಅಂತಹ ಕುಟುಂಬದಗಳು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಹೊಸ ಗ್ಯಾರಂಟಿ ಕಾರ್ಡ್ ಪಡೆಯಲು ತಿಳಿಸಿದರು. ಅಲ್ಲದೆ ಗ್ಯಾರಂಟಿ ಕಾರ್ಡ್ ಹೊಂದಿ ಕೆಲಸಕ್ಕೆ ಬಾರದ ಕಾರ್ಮಿಕರು ಕೂಡ ವಿಬಿ-ಜಿ ರಾಮ್-ಜಿ ಯೋಜನೆ ಕೆಲಸದಲ್ಲಿ ಭಾಗಿಯಾಗಲು ತಿಳಿಸಿದರು. ತಾವು ಈಗಾಗಲೇ ಕೆಲಸಕ್ಕೆ ಬಂದ ಕಾರ್ಮಿಕರು ನಿರಂತರ ಬರಬೇಕು, ಪ್ರತಿ ಕಾರ್ಮಿಕರಿಗೆ ದಿನಕ್ಕೆ 382 ರೂ, ಕೂಲಿ ಮೊತ್ತ ಹಾಗೂ ವಾರ್ಷಿಕ 125 ದಿನಗಳ ನಿರಂತರ ಕೆಲಸ ಮಾಡಬಹುದಾಗಿದೆ ಎಂದರು.

ಅಲ್ಲದೆ ಟ್ರಂಚೆಸ್, ಗೋ ಕಟ್ಟೆ ಕಾಮಗಾರಿಗಳಲ್ಲಿ ಅಂತರ್ಜಲ ಶಕ್ತಿ ಹೆಚ್ಚಿಸಿದಲ್ಲಿ, ಅಕ್ಕ-ಪಕ್ಕದ ರೈತರ ಜಮೀನುಗಳಿಗೆ ನೀರಿನ ತೇವಾಂಶ ಹೆಚ್ಚಾಗಿ ಕೃಷಿ ಚಟುವಟಿಕೆಗಳು ಇನ್ನಷ್ಟು ಹೆಚ್ಚಾಗಲಿವೆ, ಇದರಿಂದ ಪರಿಸರ ಸಂರಕ್ಷಣೆ, ಪರಿಸರ ಸಮತೋಲನ ಹಾಗೂ ಜೀವ ವೈವಿಧ್ಯತೆಯ ವೃದ್ಧಿಯಾಗಿ ಗ್ರಾಮೀಣ ಜನರು ಸಾಮಾಜಿಕ, ಆರ್ಥಿಕವಾಗಿ ಸಭಲವಾಗಲು ಸಹಕಾರಿಯಾಗಲಿದೆ ಎಂದರು.
ಕೆಲಸದ ಸ್ಥಳದಲ್ಲಿ ನೀರು, ನೆರಳು ಹಾಗೂ ಅಗತ್ಯ ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿ, ಗ್ರಾಮೀಣ ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ಸಹಿಸಲು ಸೂಚಿಸಿದರು. ಇನ್ನೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿದ್ದರೆ, ವೈಯಕ್ತಿಕ ಕಾಮಗಾರಿಗಳಾದ ಕುರಿ ಶೇಡ್, ಕೋಳಿ ಶೇಡ್ ಹಾಗೂ ಜಾನುವಾರಗಳ ಶೇಡ್ ಸೇರಿದಂತೆ ಇತರ ಹಲವಾರು ಯೋಜನೆಗಳ ಪಡೆಯಬಹುದಾಗಿದೆ ಎಂದು ತಿಳಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಾಲ್ಲೂಕಿನಲ್ಲಿ ತಾಂತ್ರಿಕ ಅನುಮೋದನೆಗೊಂಡ ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸಿ, ಗ್ರಾಮೀಣ ಭಾಗದ ಜನರು ಗುಳೆ ಹೋಗದಂತೆ ತಡೆಗಟ್ಟಲು, ನಿರಂತರ ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೆಲಸ ಒದಗಿಸಿ ನಿಗದಿತ ಮಾನದಿನಗಳ ಗುರಿ ತಲುಪಲು ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಶಶಿಧರ ಹಿರೇಮಠ, ಡಿಎಮ್ ಐಎಸ್ ರಾಘವೇಂದ್ರ, ಟಿಐಇಸಿ ಪರಶುರಾಮ, ಪಿಡಿಓ ಮಲ್ಲಿಕಾರ್ಜುನ, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಟಿಎಇ, ಬಿಎಫ್ ಟಿ, ಜಿಕೆಮ್ ಸೇರಿದಂತೆ ಕೂಲಿಕಾರರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.












Leave a Reply