ಹಿಂದಿ ಮಾತನಾಡಲಿಲ್ಲವೆಂದು ಯಾದಗಿರಿ ಮೂಲದ ಡೆಲಿವರಿ ಯುವಕನಿಗೆ ಹಲ್ಲೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕನ್ನಡ ಬದಲಾಗಿ ಹಿಂದಿ ಮಾತನಾಡುವಂತೆ ಬೆದರಿಸಿ ಯಾದಗಿರಿ ಮೂಲದ ಡೆಲೆವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದ, ಹಲ್ಲೆಕೋರನ್ನು ಕೂಡಲೇ ಕಠಿಣ ಶಿಕ್ಷೆಗೆ ಒಳ ಪಡಿಸಬೇಕೆಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಶ್ವನಾಥ್ ನಾಯಕ ಒತ್ತಾಯಸಿದರು.
ಯಾದಗಿರಿ ಜಿಲ್ಲೆ ಶಹಾಪುರ ಮೂಲದ ಬಸವರಾಜ್ ಹಲ್ಲೆಗೊಳಗಾದ ಡೆಲಿವರಿ ಯುವಕ ಆ.8ರಂದು ಮುಂಜಾನೆ 4 ಗಂಟೆ ವೇಳೆಗೆ ಅಟ್ಟೂರು ಸಮೀಪದ ಸಂತೋಷ್‌ ನಗರದಲ್ಲಿ ಹಲ್ಲೆ ಕೃತ್ಯಕ್ಕೆ ಒಳಗಾಗಿದ್ದು,
ಈಗಾಗಲೇ ಬಸವರಾಜ್ ಅವರನ್ನು ಥಳಿಸಿದ ದೂರಿನ ಮೇರೆಗೆ ಬಿಹಾರ ಮೂಲದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಕೂಡಲೆ ಅವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಿವಂತೆ ಜಯ ಕರ್ನಾಟಕ ಸಂಘಟನೆ ಆರೋಪಿಸಿ,

ಬೆಂಗಳೂರು ನಗರದಲ್ಲಿ ಕೆಲ ವರ್ಷಗಳಿಂದ ವಾಸವಾಗಿರುವ ಬಸವರಾಜ್, ಬಿಎಡ್ ವ್ಯಾಸಂಗ ಪದವೀಧರ ಇದರೊಂದಿಗೆ ಪಾರ್ಟ್ ಟೈಂನಲ್ಲಿ ಜೆಪ್ಪೋ ಫುಡ್ ಡೆಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ದಿನ ಬೆಳಗ್ಗೆ ಡೆಲೆವರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ನೆರೆ ರಾಜ್ಯದ ನೆಲಸಿಗರು,ಹಿಂದಿಯಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿ, ಆಗ ಡೆಲಿವರಿ ಯುವಕ ಬಸವರಾಜ್ ಗೆ ಬೇರೆ ರಾಜ್ಯದವರಿಂದ ನಿದ್ದಿಸಿದ್ದು,
ಹಿಂದಿ ಬರುವುದಿಲ್ಲ ಕನ್ನಡದಲ್ಲಿ ಮಾತನಾಡಿ ಎಂದು,
ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಸಂತ್ರಸ್ತ ಕೂಡಲೇ ತನ್ನ ಸ್ನೇಹಿತ ಅಶೋಕ್ ಎಂಬವರಿಗೆ ಕರೆ ಮಾಡಿ ಘಟನೆ ಸ್ಥಳಕ್ಕೆ ಕರೆಯಿಸಿಕೊಂಡ. ಬಳಿಕ ಹಲ್ಲೆ ಕೊರರನ್ನು ಕರೆಯಿಸಿ, ರಸ್ತೆಯಲ್ಲಿ ಬಿದ್ದಿದ್ದ ಕೋಲಿನಿಂದ ಏಕಾಏಕಿ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕೆಳಗೆ ಬಿದ್ದಾಗ ಕೆಲ ಯುವತಿ ಸ್ನೇಹಿತರು ಸೇರಿ ಎಲ್ಲರೂ ಕಾಲಿನಲ್ಲಿ ಒದ್ದು ನನಗೂ ಮತ್ತು ಸ್ನೇಹಿತನಿಗೂ ಗಾಯಗೊಳಿಸಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ ಈ ಪ್ರಕರಣ ಕುರಿತು ಸರಕಾರ ಕೂಡಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ನಗರದಲ್ಲಿ ಉಗ್ರ ಹೊರಟ ಮಾಡಲಾಗುವುದೆಂದು ಎಂದು ಎಚ್ಚರಿಸಿದರು.

You Might Also Like

Leave a Reply

Your email address will not be published. Required fields are marked *

↑
Suddi Belaku