ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘಕ್ಕೆ ಅವಿರೋಧ ಆಯ್ಕೆ

Posted by

ಸುದ್ದಿ ಬೆಳಕು ವಾರ್ತೆ

ಹುಣಸಗಿ : ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಣಸಗಿ ತಾಲೂಕಾ ಘಟಕದ ಗೌರವ ಅಧ್ಯಕ್ಷರಾಗಿ ನಾಗಣ್ಣ ಸಾಹು ದಂಡಿನ್, ಅಧ್ಯಕ್ಷರಾಗಿ ನೀಲಕಂಠ ಚಿಂಚೋಳಿ ಅವರು ಅವಿರೋಧ ಆಯ್ಕೆ ಯಾದರು.

ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಬಣಜಿಗ ಸಮುದಾಯದ ಏಳಿಗೆಗಾಗಿ ಶೈಕ್ಷಣಿಕ, ಆರ್ಥಿಕ ಸ್ವಾವಲಂಬನೆ ಮತ್ತು ರಾಜಕೀಯ ಪ್ರಾತಿನಿಧ್ಯ ಒಗ್ಗೂಡಿಸುವುದು ಅತ್ಯಗತ್ಯ. ಸಮಾಜದ ಸಂಘಟನೆ, ಯುವಜನರಿಗೆ ಉದ್ಯೋಗಾವಕಾಶ ಹಾಗೂ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಮೂಲಕ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ನೀಲಕಂಠ ಚಿಂಚೋಳಿ ಮಾತನಾಡಿ, ಸಮಾಜದ ಹಿರಿಯರ ಮಾರ್ಗ ದರ್ಶನದಲ್ಲಿ ಸಮಾಜಕ್ಕೆ ಯುವಶಕ್ತಿಯಾಗಿ ಸಂಘಟನೆ ಮಾಡುತ್ತೇನೆ. ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಪ್ರತಿಯೊಬ್ಬರನ್ನೂ ವಿಶ್ವಾಸ ಪೂರ್ವಕವಾಗಿ ಸಮಾಜ ಸಂಘಟನೆಯಲ್ಲಿ ತೊಡಗಬೇಕು. ಸಮಾಜ ಬೆಳೆಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಶಹಾಪುರ ತಾಲೂಕಿನ ಬಣಜಿಗ ಸಮಾಜದ ಅಧ್ಯಕ್ಷರಾದ ಮಹೇಶ್ ಆನೆಗುಂದಿ, ಬಸವರಾಜ ಮೇಲಿನಮನಿ, ಚಂದ್ರಶೇಖರ್ ದಂಡಿನ, ಸಿದ್ರಾಮಪ್ಪ ಮುದಗಲ್, ಬಸವ ರಾಜ ಮರೋಳ, ರವಿಕುಮಾ‌ರ್ ಬಂಟನೂರ ಅವರು ಮಾತನಾಡಿದರು.

ಸಭೆಯಲ್ಲಿ ಮುಖಂಡರಾದ ರಾಚಪ್ಪ ಪಟ್ಟಣಶೆಟ್ಟಿ, ಬಸವರಾಜ್ ಬಳಿ, ತಿಪ್ಪಣ್ಣ ಚಂದಾ, ಮಲ್ಲಣ್ಣ ಬ್ಯಾಕೋಡ, ಆರ್‌.ಸಿ. ಪಾಟೀಲ, ಗುರಣ್ಣ ಚಿಂಚೋಳಿ, ತಿಪ್ಪಣ್ಣ ಚಂದಾ, ಸುರೇಶ ತಂಬಾಕಿ, ಮಹಾದೇವಪ್ಪಗೌಡ ಬಿರಾದಾರ, ಶಿವಲಿಂಗ ಪಾಲ್ಕಿ, ಮಹಾಲಿಂಗೇಶ ಪಟ್ಟಣಶೆಟ್ಟಿ, ವೀರೇಶ ಚಿಂಚೋಳಿ, ಚಂದ್ರಶೇಖರ್‌ ದಂಡಿನ, ಸಿದ್ರಾಮಪ್ಪ ಮುದಗಲ್, ಮಹಾದೇವ ಚಂದಾ, ಶರಣು ದಂಡಿನ, అనిల ಬಳಿ, ನೀಲಕಂಠ ಹೊನಕಲ್, ಶರಣು ವೈಲಿ, ಬಸವರಾಜ ವೈಲಿ, ಶಿವು ಪಡಶೆಟ್ಟಿ, ಶಿವಲಿಂಗ ಪಟ್ಟಣಶೆಟ್ಟಿ, ಗುಂಡು ಅಂಗಡಿ, ರಮೇಶ್ ವಾಲಿ, ಸೂಗುರೇಶ್ ಮುದನೂರ, ಮಂಜುನಾಥ್ ಬಳಿ, ಮಂಜುನಾಥ್ ನೂಲಿನ, ಶಿವು ಶೇವಟಿ, ಚನ್ನಕುಮಾರ ಬ್ಯಾಕೋಡ, ಪ್ರಭು ನೂಲಿನ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಶಿವಕುಮಾರ ಬಂಡೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿರೇಶ್‌ ಬ್ಯಾಕೋಡ ವಂದಿಸಿದರು.

You Might Also Like

Leave a Reply

Your email address will not be published. Required fields are marked *

Suddi Belaku