
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಜಿಲ್ಲಾ ನ್ಯಾಯಾಲಯದ ಆದೇಶದಂತೇ ಸಂತ್ರಸ್ತರಿಗೆ ಪರಿಹಾರ ಹಣ ನೀಡುವ ಮೂಲಕ
ಜಪ್ತಿಯಾದ ಸಾಮಾನುಗಳನ್ನು ಕೂಡಲೇ ಬಿಡಿಸಿಕೊಂಡು ನಗರದ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗದಂತೇ ಕ್ರಮ ಜರುಗಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಅವರು,ಡಿಸಿ ಮತ್ತು ಪೌರಾಯುಕ್ತರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಾರ್ವಜನಿಕರ ಜೀವನಾಡಿಯಂತೆಯೇ ಕೆಲಸ ಮಾಡುವ ನಗರಸಭೆ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕೋರ್ಟ್ ನಿಯಮಗಳು ಸರಿಯಾಗಿ ಪಾಲಿಸಿದರೇ ಇಂತಹ ಕೆಟ್ಟ ಘಳಿಗೆ ಬರಬಾರದು. ನಿತ್ಯವೂ ನೂರಾರು ಜನರು ವಿವಿಧ ಕೆಲಗಳಿಗೆ ನಗರಸಭೆಯನ್ನೇ ನಂಬಿರುತ್ತಾರೆ. ಕಾರಣ, ಜನರ ಕಷ್ಟ ಅರ್ಥ ಮಾಡಿಕೊಂಡು ಕೂಡಲೇ ಸೂಕ್ತಕ್ರಮಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.











Leave a Reply