
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಸರಕಾರಿ ಕೆಲಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಸಾರ್ವಜನಿಕರ ಪ್ರೀತಿ ಗಳಿಸಲು ಸಾಧ್ಯ ಎಂದು ಯಾದಗಿರಿ ನಗರಸಭೆ ಪೌರಾಯುಕ್ತರಾದ ಉಮೇಶ ಚವ್ಹಾಣ ಅವರು ಹೇಳಿದರು.
ಇಲ್ಲಿನ ನಗರಸಭೆಯಲ್ಲಿ ಎಲೆಕ್ಟ್ರೀಕಲ್ ಗ್ರೇಡ್-೧ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ, ಪ್ರಸ್ತುತ ಕಲಬುರಗಿ ಜಿಲ್ಲೆಯ ಸೇಡಂ ನಗರಸಭೆಗೆ ಕಿರಿಯ ಅಭಿಯಂತರರಾಗಿ ಬಡ್ತಿ ಹೊಂದಿರುವ ಅಂಬಿಕೇಶ್ವರ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಅಂಬಿಕೇಶ್ವರ ಅವರು ಯಾದಗಿರಿಯಲ್ಲಿ ಸೇವೆ ಸಲ್ಲಿಸುವಾಗ ನಗರದ ಸಮಸ್ಯೆಗಳಿಗೆ ಅತ್ಯಂತ ಉತ್ತಮವಾಗಿ ಸ್ಪಂದಿಸಿದ್ದಾರೆ.

ಕಛೇರಿಯ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಸರಕಾರಿ ನೌಕರರು ಜನಮಾನಸದಲ್ಲಿ ನೆಲೆಸುವಂತಹ ಕೆಲಸ ಮಾಡಬೇಕು, ಇದರಿಂದ ನಾವು ಮಾಡುವ ಕೆಲಸದಲ್ಲಿ ನಮಗೆ ನೆಮ್ಮದಿ ಸಿಗುತ್ತದೆ. ಮುಂಬರುವ ದಿನಗಳಲ್ಲೂ ಇದೇ ರೀತಿ ಜನಪರ ಕೆಲಸ ಮಾಡಿ ಒಳ್ಳೆಯ ಅಧಿಕಾರಿ ಎನಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿ ಅಶ್ವಿನಿ, ಶಂಭುಲಿಂಗ್, ಲೋಕೇಶ್ವರಿ, ರಮೇಶ್, ರವಿದಾಸನ್, ಸಿದ್ದಾರ್ಥ ಹಾಗೂ ನಗರಸಭೆ ಮಾಜಿ ಸದಸ್ಯರಾದ ಅಬ್ದುಲ್ ವಹಾಬ್, ಶರೀಫ್ ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.











Leave a Reply