ಮಳೆಗಾಗಿ ಮೈಲಾರಲಿಂಗೇಶ್ವರನ ಮೊರೆ ಹೋದ ರಾಮಸಮುದ್ರ ಗ್ರಾಮಸ್ಥರು: ಭಜನೆ ಮಾಡುತ್ತಾ ಪಾದಯಾತ್ರೆ

Posted by

ಮೈಲಾಪುರದ ದೇಗುಲದಲ್ಲಿ ವಿಶೇಷ ಪೂಜೆ | ಅನ್ನದಾತರ ಬದುಕು ಹಸನಾಗಲಿ ಎಂದು ವರುಣನಲ್ಲಿ ಪ್ರಾರ್ಥನೆ

ಸುದ್ದಿ ಬೆಳಕು ವಾರ್ತೆ

ಯಾದಗಿರಿ :  ಮುಂಗಾರು ಮಳೆಗಾಗಿ ಕಾದು ಕುಳಿತಿರುವ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮಸ್ಥರು ವರುಣನ ಕೃಪೆಗಾಗಿ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭಜನೆ ಮಾಡುತ್ತಾ ಪಾದಯಾತ್ರೆ ನಡೆಸಿದರು.
ಮಳೆಗಾಗಿ ಪ್ರಾರ್ಥಿಸಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೊರಟ ನೂರಾರು ಭಕ್ತರ ತಂಡವು, ದಾರಿಯುದ್ದಕ್ಕೂ ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಮಾಡುತ್ತಾ ಮೈಲಾಪುರದ ದೇಗುಲವನ್ನು ತಲುಪಿತು. ದೇವಾಲಯದ ಆವರಣದಲ್ಲಿ ಮಳೆಗಾಗಿ ವಿಶೇಷ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಮೈಲಾರಲಿಂಗೇಶ್ವರನಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು, “ರಾಜ್ಯದಲ್ಲಿ ಸಮೃದ್ಧಿಯಾಗಿ ಮಳೆಯಾಗಲಿ. ಬೆಳೆಗಳು ಉತ್ತಮವಾಗಿ ಬಂದು ಅನ್ನದಾತರ ಬದುಕು ಹಸನಾಗಲಿ” ಎಂದು ಭಕ್ತಿಯಿಂದ ಪ್ರಾರ್ಥಿಸಿದರು. ಮಳೆ ಕೊರತೆಯಿಂದ ಆತಂಕದಲ್ಲಿರುವ ರೈತರು ಇದೀಗ ದೇವರ ಮೊರೆ ಹೋಗಿದ್ದಾರೆ. ಈ ಪಾದಯಾತ್ರೆಯಲ್ಲಿ ಗ್ರಾಮದ ಮುಖಂಡರು, ರೈತರು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku