ರೋಗಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ: ವೈದ್ಯರಿಗೆ ಶಾಸಕ ತುನ್ನೂರ ಕಿವಿಮಾತು

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ವೈದ್ಯರು ಎಂದರೇ ಎರಡನೇ ದೇವರು ಎಂಬ ಭಾವನೇ ಜನರಲ್ಲಿ‌ ಇದೆ. ಕಾರಣ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಪ್ರೀತಿ,ವಿಶ್ವಾಸದಿಂದ ಕಂಡು ಮಾತಾಡಿಸಿದರೇ ಅವರ ಅರ್ಧ ರೋಗ ಕಡಿಮೆಯಾಗುತ್ತದೆ.ಈ ನಿಟ್ಟಿನಲ್ಲಿ ಸ್ಪಂದಿಸುವ‌ ಕೆಲಸ ವೈದ್ಯರು ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕವು ಭಾನುವಾರ ಸಂಜೆ ಇಲ್ಲಿನ ಎನ್ ವಿಎಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅತ್ಯಾಧುನಿಕ ಉಪಕರಣಗಳು ಬಂದಿದ್ದು, ರೋಗ ಯಾವುದೇ ಇದ್ದರೂ ಗುಣಪಡಿಸುವ ಶಕ್ತಿ ವೈದ್ಯರಿಗೆ ಇದೆ. ಈ ನಿಟ್ಟಿನಲ್ಲಿ ಬೆ ರೋಗಿಗಳ ಬಗ್ಗೆ ಸ್ವಲ್ಪ ಗಮನ ಹರಿಸಿ ಚಿಕಿತ್ಸೆ ನೀಡಿದರೇ ಉಪಕಾರದ ಕೆಲಸ ಆಗುತ್ತದೆ ಎಂದರು.
ಇಂದು ವೈದ್ಯರ ಸಂಖ್ಯೆ ಪ್ರತಿವರ್ಷವೂ ಹೆಚ್ಚುತ್ತಲ್ಲೇ ಇದೆ. ಮುಂದೇ ಪ್ರತಿ ಮನೆಯಲ್ಲಿ ಒಬ್ಬ ವೈದ್ಯ ಸಿಗಬಹುದು, ಅದರಲ್ಲೂ ಮಹಿಳೆಯರು ಪುರುಷರಿಗಿಗಂತ ಬುದ್ದಿವಂತರಾಗಿದ್ದಾರೆ. ಅವರು ಗುರಿ ಮುಟ್ಟಲು ಕಠಿಣ ಪರಿಶ್ರಮ ಹಾಕುತ್ತಾರೆ. ಈ ನಿಟ್ಟಿನಲ್ಲಿ ಡಾ.ಸಂಗಮ್ಮ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರು ಹಿರಿಯ ವೈದ್ಯರಾಗಿದ್ದು, ಅವರು ಇಂದಿನ ಯುವ ವೈದ್ಯರಿಗೆ ಮಾದರಿಯಾಗಿದ್ದಾರೆಂದರು.
ಸಂಘವು ಉತ್ತಮ ಕೆಲಸ ಮಾಡುತ್ತಿದೆ. ನಮ್ಮ ಸಹಕಾರ ಯಾವತ್ತು ಇರುತ್ತದೆ ಎಂದು ಶಾಸಕರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ ಪೂಜಾರಿ, ಸಂಘದ ವಾರ್ಷಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಅತಿಥಿಗಳಾಗಿ ಸ್ತ್ರೀರೋಗ ತಜ್ಞೆ ಡಾ.ಸಂಗಮ್ಮ ಡಾ.ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿದರು.

ಹಿರಿಯ ವೈದ್ಯ ಡಾ.ಸುಭಾಷ ಕರಣಗಿ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ. ಲಕ್ಷ್ಮೀ ಪಾಟೀಲ್ ಮಾತನಾಡಿದರು.
ಕಾರ್ಯಕ್ರಮ ನಿರೂಪಿಸಿದ ವೈದ್ಯ ಡಾ.ವೀರೇಶ ಜಾಕಾ, ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಇದೇ ವೇಳೆ ವೈದ್ಯರಾದ ಡಾ.ಭಗವಂತ ಅನವಾರ್, ಡಾ.ಸಿ.ಎಂ.ಪಾಟೀಲ್, ಡಾ.ಸುರೇಶರೆಡ್ಡಿ, ಡಾ.ಸುರೇಖಾ ಹಾಗೂ ಡಾ.ಶೈಲಜಾ ವರ್ಮಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಆರಂಭದಲ್ಲಿ ಡಾ.ಭಗವಂತ ಅನವಾರ್ ಅವರು ವೈದ್ಯರು ಮತ್ತು ರೋಗಿಗಳ ನಡುವೆ ನಡೆಯುವ ದೇಶಿ ಶೈಲಿಯ ಸಂಭಾಷಣೆ ಹಾಸ್ಯದ ಮೂಲಕ ಹೇಳಿ ಸಭಿಕರಿಗೆ ನಗೆಗಡಲಲ್ಲಿ ತೆಲಿಸಿದರು. ಡಾ.ಪ್ರಶಾಂತ ಬಾಸುತಕರ್ ಸೇರಿದಂತೆಯೇ ಇತರರಿದ್ದರು.

Leave a Reply

Your email address will not be published. Required fields are marked *

Suddi Belaku