ಆಧ್ಯಾತ್ಮಿಕ ಚಿಂತನೆಯಿಂದ ಜೀವನ್ಮುಕ್ತಿ ಸಾಧ್ಯ – ಗುರಣಗೌಡ ಅಭಿಪ್ರಾಯ

Posted by

ಹುಣಸಗಿ : ಆಧ್ಯಾತ್ಮಿಕ ಚಿಂತನೆಗಳಿಂದ ವ್ಯಕ್ತಿಯು ಜೀವನ್ಮುಕ್ತಿ ಸಾಧಿಸಬಹುದು ಎಂದು ಶಿಕ್ಷಕ ಗುರಣಗೌಡ ಹೊರಗಿನಮನಿ ತಿಳಿಸಿದರು. ಪಟ್ಟಣದಲ್ಲಿ ಹುಣಸಗಿ ತಾಲೂಕು ವಿಕ್ರಮಪುರ ಓದುಗರ ಬಳಗದ ವತಿಯಿಂದ ಆಯೋಜಿಸಿದ್ದ ಕಲ್ಲದೇವನಹಳ್ಳಿಯ ರೇವಣಸಿದ್ದಯ್ಯ ಹಿರೇಮಠ ರವರ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನಂಪ್ರತಿ ಸಾಂಸಾರಿಕ ಬದುಕಿನಲ್ಲಿ ಒಂದಷ್ಟು ಸಮಯವನ್ನು ಆಧ್ಯಾತ್ಮಿಕ ಚಿಂತನೆಗೆ ಮೀಸಲಿಡಬೇಕು. ರೇವಣಸಿದ್ದಯ್ಯ ರವರು ಅನುವಾದಿಸಿರುವ ಕೃತಿಗಳಾದ ವಿವೇಕ ಚೂಡಾಮಣಿ, ಪಂಚದಶಿ, ಕರಿಯು ಕನ್ನಡಿಯೊಳಗೆ, ಅನುಭವ ಮುಕುರ ಕೃತಿಗಳು ಶ್ರೇಷ್ಠ ಕೃತಿಗಳಾಗಿದ್ದು ಹೆಚ್ಚು ಪ್ರಚಾರ ಇಲ್ಲದಿರುವುದು ಬೇಸರದ ಸಂಗತಿ ಎಂದರು. ವಿಕ್ರಮಪುರ ಓದುಗರ ಬಳಗದ ಸಂಚಾಲಕ ಮಹೇಶ ಸ್ಥಾವರಮಠ ಮಾತನಾಡಿ, ಓದುವ ಹವ್ಯಾಸ ಬೆಳೆಸುವದು, ಸ್ಥಳೀಯ ಲೇಖಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಬಳಗ ಮಾಡಲಿದೆ ಎಂದರು. ಮೊಬೈಲ್ ಬಳಕೆ ಕಡಿಮೆ ಮಾಡಿ, ಪುಸ್ತಕಗಳನ್ನು ಹೆಚ್ಚು ಬಳಸೋಣ ಎಂದರು.

ಕಾರ್ಯಕ್ರಮದಲ್ಲಿ ಶಿವಕುಮಾರ ಬಂಡೋಳಿ, ವೆಂಕಟಗಿರಿ ದೇಶಪಾಂಡೆ, ನಾಗನಗೌಡ ಪಾಟೀಲ, ರಾಘವೇಂದ್ರ ಜಹಾಗಿರದಾರ, ಡಾ. ಬಸವರಾಜ ಚಂದಾ, ಸೋಮನಗೌಡ ಬಳವಾಟ, ಸಹಾಯಕ ಗ್ರಂಥಪಾಲಕ ಬಸನಗೌಡ ಪಾಟೀಲ, ಬಾಲಪ್ಪ ಕುಪ್ಪಿ, ಮಾಹಾದೇವಿ ಬೇನಾಳಮಠ, ಜ್ಯೋತಿ ಹಿರೇಮಠ, ಬಾಪುಗೌಡ ಮೇಟಿ, ಯಂಕನಗೌಡ ಅರಕೇರಿ, ಚಂದ್ರಕಾಂತ, ರವಿ ಭಂಟನೂರ, ಸಿದ್ದನಗೌಡ ಬಿರಾದಾರ, ಮಹಾಂತೇಶ ಮುರಾಳ ಸೇರಿದಂತೆ ಸಾಹಿತ್ಯಾಸಕ್ತರು ಹಾಜರಿದ್ದರು. ಶಿವಲೀಲಾ ಹಾದಿಮನಿ ಪ್ರಾರ್ಥಿಸಿದರು, ಸವಿತಾ ಬೆಳ್ಳಿ ಸ್ವಾಗತಿಸಿದರು. ಅಕ್ಕಮಹಾದೇವಿ ದೇಶಮುಖ ನಿರೂಪಿಸಿದರು. ವೀರೇಶ ಹಡಪದ ವಂದಿಸಿದರು.

Leave a Reply

Your email address will not be published. Required fields are marked *

Suddi Belaku