
ಯಾದಗಿರಿ : ಜೈಲಿಗೆ ಬಂದ ಕೈದಿಗಳು ತಮ್ಮ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಇಲ್ಲಿಂದ ಬಿಡುಗಡೆಯಾದ ಮೇಲೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಪರಿವರ್ತನೆ ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಮರಿಯಪ್ಪ ಅವರು ಕಿವಿಮಾತು ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮಾದಕ ವಸ್ತು ಮುಕ್ತ ಭಾರತಕ್ಕಾಗಿ ಮಾದಕ ವಸ್ತು ಜಾಗೃತಿ ಮತ್ತು ಸ್ವಾಸ್ಥ್ಯ ಸಂಚರಣೆ ಯೋಜನೆ-2025’ (NALSA – Jagriti Scheme) ಅಡಿಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷೆಯು ಕೇವಲ ದಂಡನೆಯಲ್ಲ, ಅದು ವ್ಯಕ್ತಿಯನ್ನು ತಿದ್ದುವ ಒಂದು ಅವಕಾಶ. ಕೈದಿಗಳು ಮಾನಸಿಕವಾಗಿ ಬದಲಾಗಿ, ಸಮಾಜದ ಮುಖ್ಯವಾಹಿನಿಗೆ ಸೇರಲು ಸಿದ್ಧರಾಗಬೇಕು ಎಂದರು.
ದೇಶವನ್ನು ಮಾದಕ ವಸ್ತುಗಳ ಹಾವಳಿಯಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ವ್ಯಸನಮುಕ್ತ ಜೀವನವೇ ಸುಖೀ ಜೀವನಕ್ಕೆ ದಾರಿ ಎಂದು ಹೇಳಿದರು.
ಕೊರತೆಯಿಂದ ಯಾರು ಕೂಡ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರಾಧಿಕಾರವು ಸದಾ ನೆರವಿಗೆ ಇರುತ್ತದೆ ಎಂದು ತಿಳಿಸಿದರು.
ಮಾಡುವುದು ಸಹಜ ಆದರೆ ಮಾಡಿದ ತಪ್ಪನ್ನೇ ಮೆಲುಕು ಹಾಕುತ್ತಾ ಕೂರದೆ, ಅದನ್ನು ತಿದ್ದಿಕೊಂಡು ಹೊಸ ಜೀವನ ಆರಂಭಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮನೋವೈದ್ಯರಾದ ಡಾ.ಅಮೀತಗ ಕುಮಾರ್, ಅರೆಕಾಲಿಕ ಸ್ವಯಂ ಸೇವಕರಾದ ರಾಘವೇಂದ್ರ, ಯಾದಗಿರಿ ಕಾರಾಗೃಹ ಅಧೀಕ್ಷಕರಾದ ಎಸ್ ಎಸ್ ಪಾಟೀಲ್ ಇದ್ದರು.
You Might Also Like
- ಎಲ್ಲಾ ವರ್ಗದವರನ್ನು ಒಟ್ಟಿಗೆ ಕರೆದೊಯ್ಯುತ್ತೇವೆ: ಸ್ವಾತಂತ್ರ್ಯ ದಿನದಂದು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

- ಕರ್ನಾಟಕದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ– ಸಿಎಂ ಡಿ.ಕೆ. ಶಿವಕುಮಾರ್

- ಯಾದಗಿರಿಯ ಹುಲಿಗೆಪ್ಪ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

- ಯಾದಗಿರಿ: ಪೂರ್ವಿಕರ ತ್ಯಾಗದ ಪ್ರತೀಕವೇ ಸ್ವಾತಂತ್ರ್ಯ ದಿನ: ಬಿ.ಎನ್. ವಿಶ್ವನಾಥ್ ನಾಯಕ್

- ರಾಷ್ಟ್ರದ ಏಕತೆ, ಅಖಂಡತೆಗೆ ಬದ್ಧರಾಗೋಣ: ಬಿಜೆಪಿ ಜಿಲ್ಲಾಧ್ಯಕ್ಷ ವಿಭೂತಿಹಳ್ಳಿ ಕರೆ













Leave a Reply