
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 17 : ನಗರದ ಹಲವಾರು ವಾರ್ಡ್ಗಳಲ್ಲಿ ಜನರು ಅಗತ್ಯ ಮೂಲಭೂತ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದಾರೆ, ಕಾರಣ ಅಂತಹ ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ಕಾರಣ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ನಿಗಧಿತ ಅವಧಿಯೊಳಗೆ ಕೆಲಸ ಮುಗಿಸಿ ಜನರಿಗೆ ಅನುಕೂಲತೆ ಒದಗಿಸಿಕೊಡಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ವಾರ್ಡ ಸಂಖ್ಯೆ. ೪ರ ಭೋವಿವಾಡದಲ್ಲಿ ನಿರ್ಮಿತಿ ಕೇಂದ್ರದಿAದ ೯೦ ಲಕ್ಷ ರೂ. ವೆಚ್ಚದಲ್ಲಿ ಹಲವಾರು ವಾರ್ಡಗಳಲ್ಲಿ ನಿರ್ಮಾಣ ಮಾಡುತ್ತಿರುವ ನೆಲಗಟ್ಟಲುಗಳ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಇಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿ ಕಂಡುಬರುತ್ತಿದೆ, ಕಾರಣ ಜನರು ಜಾಗೃತರಾಗಿ ಸ್ವಚ್ಚತೆಗೆ ಆದ್ಯತೆ ನೀಡಿ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಸಲಹೆ ನೀಡಿದರು.
ನಗರದಲ್ಲಿ ಹಲವಾರು ವಾರ್ಡ್ಗಳಲ್ಲಿ ಇನ್ನೂ ಹೆಚ್ಚು ಕೆಲಸ ಮಾಡುವುದು ಅವಶ್ಯಕತೆಯಿದೆ, ನಾನು ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರನ್ನು ಭೇಟಿಯಾಗಿ ಹೆಚ್ಚಿನ ಅನುದಾನ ತರುವ ಮೂಲಕ ಅವಶ್ಯಕತೆ ಇರುವ ವಾರ್ಡ್ಗಳಲ್ಲಿ ಜನರ ಬೇಡಿಕೆಯಂತೆ ಕಾಮಗಾರಿ ಕೈಗೊಂಡು ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ನಂತರ ವಾರ್ಡ್ನ ಹಲವಾರು ಮಹಿಳೆಯರು ಸರ್ ಇಲ್ಲಿ ತುಂಬಿರುವ ಚರಂಡಿಗಳನ್ನು ನಗರಸಭೆಯವರು ಸರಿಯಾಗಿ ಸ್ವಚ್ಚಗೊಳಿಸುತ್ತಿಲ್ಲ, ಪರಿಣಾಮ ನಾವೇಲ್ಲರೂ ದುರ್ವಾಸನೆಯಲ್ಲಿ ಅನಿವಾರ್ಯವಾಗಿ ಜೀವನ ಕಳೇಯುತ್ತಿದ್ದೇವೆ, ಅಲ್ಲದೇ ಸರಿಯಾಗಿ ಕುಡಿಯಲು ನೀರು ಸಹ ಬರುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಕೂಡಲೇ ಶಾಸಕರು ನಗರಸಭೆ ಪೌರಾಯುಕ್ತರಿಗೆ ಕರೆ ಮಾಡಿ, ಈ ಭಾಗದ ಮೇಲುಸ್ತುವಾರಿ ವಹಿಸಿದ ಕಿರಿಯ ಆರೋಗ್ಯ ನಿರೀಕ್ಷಕ ಸಿದ್ದಾರ್ಥ, ಪರಿಸರ ಅಭಿಯಂತರ ಪ್ರಶಾಂತ ಅವರನ್ನು ಸ್ಥಳಕ್ಕೆ ಕರೆಯಿಸಿ, ತರಾಟೆಗೆ ತೆಗೆದುಕೊಂಡು ಚರಂಡಿಗಳ ಸ್ವಚ್ಚತೆಗೆ ಕ್ರಮ ಕೈಗೊಳ್ಳಲು ಸೂಚಿಸಿ, ಸರಿಯಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ನಿಂಗಪ್ಪ ಜಾಲಗಾರ, ರಿಯಾನ್ ಅಲಿ ತುಮಕೂರ, ಚಂದ್ರಕಾAತ ಮುನಿಯಪ್ಪನೋರ, ದೇವಿಂದ್ರಪ್ಪ ಹವಾಲ್ದಾರ, ಸಾಯಿಬಣ್ಣ ಬಾಡಿಯಾಳ, ದೇವು ಪಸ್ಪೂಲ್, ಸಾಬಣ್ಣ ಸುಣಗಾರ, ವೆಂಕಟೇಶ ಪುಟ್ಟಿ, ಮಲ್ಲಯ್ಯ ಕಸಬಿ, ವೆಂಕಟೇಶ ನಾಗುಂಡಿ, ಅಶೋಕರಡ್ಡಿ ಯಲ್ಹೇರಿ, ಶರಣಗೌಡ ಬಲಕಲ್, ವೆಂಕಟೇಶ ಕೋಟಿಮನಿ, ಚಂದ್ರು ಸುಣಗಾರ, ಶಿವಕುಮಾರ ಬೆಳಗುಂದಿ, ಮಲ್ಲು ಲಿಂಗೇರಿ, ಹಣಮಂತ್ರಾಯ ಮುಂಡರಗಿ, ಮಲ್ಲು ಪೂಜಾರಿ, ಇಂಜಿನಿಯರ್ ರವಿಕುಮಾರ ಕಂದಕೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.










Leave a Reply