ಯಾದಗಿರಿಯಲ್ಲಿ ಜೆಸ್ಕಾಂ ಇಎಚ್ ಟಿ, ಎಚ್ ಟಿ ಗ್ರಾಹಕರ ಕುಂದುಕೊರತೆ ಸಭೆ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಯಾದಗಿರಿ ಜಿಲ್ಲೆಯ ಎಲ್ಲಾ ಇಎಚ್ ಟಿ ಮತ್ತು ಎಚ್ ಟಿ ವಿದ್ಯುತ್ ಗ್ರಾಹಕರ ಕುಂದು,ಕೊರತೆ ಸಭೆಯು ಮಂಗಳವಾರ ಇಲ್ಲಿನ ಜೆಸ್ಕಾಂ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಜೆಸ್ಕಾಂ ಎಸ್ ಸಿ ಖಂಡೆಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಉದ್ಯಮಿಗಳು, ಕೈಗಾರಿಕಾ ಮಾಲಿಕರು ಮತ್ತು ಅನೇಕ ಗ್ರಾಹಕರು ಭಾಗವಹಿಸಿದ್ದರು.

ಈ ವೇಳೆ ವಿದ್ಯುತ್ ಸಂಪರ್ಕದಲ್ಲಿ ಆಗುತ್ತಿರುವ ತೊಂದರೇ ಮತ್ತು ಅಗತ್ಯ ಸೌಲಭ್ಯಗಳ ಬಗ್ಗೆ ಗ್ರಾಹಕರು ಅಧಿಕಾರಿಗಳ ಗಮನಕ್ಕೆ ತಂದರು.

ಯಾದಗಿರಿ ನಗರ, ಸುರಪುರ, ಕಡೆಚೂರ ಕೈಗಾರಿಕಾ ಪ್ರದೇಶ, ಶಹಾಪುರ ಸೇರಿದಂತೆಯೇ ವಿವಿಧಡೆ ಇಎಚ್ ಟಿ, ಎಚ್ ಟಿ ಲೈನ್ ಉಪಯೋಗಿಸುವ ಗ್ರಾಹಕರಿಗೆ ಬಹುತೇಕ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಅಗತ್ಯವಿರುವ ಕಡೆ ಬೇಕಾದ ಅನುಕೂಲ ಮಾಡಿಕೊಡಲಾಗುವುದೆಂದು ಸಂಬಂಧಪಟ್ಟ ಅಧಿಕಾರಿಗಳು ಗ್ರಾಹಕರಿಗೆ ತಿಳಿಸಿದರು.

ಸಭೆಯಲ್ಲಿ ಇಇ ರಾಘವೇಂದ್ರ , ಪ್ರಭಾರಿ ಇಇ ಸುರಪುರದ ರಾಜಶೇಖರ ಬಿಳವಾರ, ಉಪಲೆಕ್ಕ ನಿಯಂತ್ರಾಧಿಕಾರಿ ರಾಜು ಪತ್ತಾರ, ಲೆಕ್ಕಾಧಿಕಾರಿ ಬಸವರಾಜ, ಎಇಇಗಳಾದ ಮರೆಪ್ಪ ಖಡೇಕರ, ಮಾರ್ಕೇಂಡೆಶ್ವರ, ಮಹ್ಮದ್ ಶಫಿ, ಸುರೇಖಾ ಕಟ್ಟಿಮನಿ, ಎ.ಟಿ.ರಾಠೋಡ್ ಇದ್ದರು.

ಜಿಲ್ಲೆಯ ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್, ವಡಗೇರಾ, ಹುಣಸಗಿ ತಾಲೂಕುಗಳ ನೂರಾರು ಗ್ರಾಹಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

↑
Suddi Belaku