
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 18 : ಮಹಿಳೆಯರಿಗೆ ಪ್ರತಿಶತ 33 ಪ್ರತಿಶತ ಮೀಸಲಾತಿ ನೀಡುವ ಮಸೂದೆಯ ಸೋಲನ್ನು ಪ್ರತಿಪಕ್ಷಗಳು ಸಂಭ್ರಮಿಸಿದ್ದು ಖಂಡನೀಯ ಎಂದಿರುವ ರಾಜ್ಯ ಬಿಜೆಪಿ ಕಾರ್ಯಕಾರಿ ಸದಸ್ಯರಾದ ಮಹೇಶರೆಡ್ಡಿ ಮುದ್ನಾಳ್ ಅವರು, ದೇಶದ ಮಹಿಳೆಯರ ಬಗ್ಗೆ ಪ್ರತಿಪಕ್ಷಗಳಿಗೆ ಕಾಳಜಿ ಮತ್ತು ಹೂಸಿ ಗೌರವ ಬಯಲಾಗಿದೆ ಎಂದು ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು,ಮುಂದಿನ 2029 ರ ಚುನಾವಣೆಯಿಂದ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮೂಲಕ ಸಮಾನ ಹಕ್ಕು ನೀಡಲು ಮುಂದಾಗಿದ್ದರೇ ಪ್ರತಿಪಕ್ಷಗಳು ಇದಕ್ಕೆ ಸೋಲಾಗುವಂತೆಯೇ ನೊಡಿಕೊಳ್ಳುವ ಮೂಲಕ ತಮ್ಮ ನಿಜಬಣ್ಣ ಬಯಲು ಮಾಡಿಕೊಂಡಿದ್ದಾರೆಂದು ಅವರು ಜರಿದಿದ್ದಾರೆ. ಮಸೂದೆ ಅಂಗಿಕಾರದ ವೇಳೆ ಅವರು ನಡೆದುಕೊಂಡಿದ್ದು ಕಲ್ಪನೆಗೂ ಮೀರಿದ ಕೃತ್ಯವಾಗಿದೆ.
ಲೋಕಸಭೆಯಲ್ಲಿ ಮಹಿಳಾ ಕೋಟಾ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್, ಟಿಎಂಸಿ,ಡಿಎಂಕೆ ಮತ್ತು ಎಸ್‌ಪಿ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಇದನ್ನು ಮೊದಲ ಬಾರಿಗೆ ಅಲ್ಲ, ಪದೇ ಪದೇ ಮಾಡಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮನಃಸ್ಥಿತಿ ಮಹಿಳೆಯರ ಹಿತಾಸಕ್ತಿ ಅಥವಾ ದೇಶದ ಹಿತದ ಪರವಾಗಿಲ್ಲ ಎಂದು ಮುದ್ನಾಳ್ ಆರೋಪಿಸಿದರು.










Leave a Reply