ಜೋಡೋ ಬಂಜಾರಾ ಫೌಂಡೇಶನ್ ಸೇವಾ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜೋಡೋ ಬಂಜಾರಾ ಫೌಂಡೇಶನ್ ಸೇವಾ ಸಂಘದ ಯಾದಗಿರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ತಿರುಪತಿ ಶಂಕರ್ ಚವಾಣ್ ಹಾಗೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಘಟಕದ ಅಧ್ಯಕ್ಷರಾಗಿ ಶ್ರೀ ಧನರಾಜ್ ರಾಠೋಡ್ ಅವರನ್ನು ನೇಮಕ ಮಾಡಲಾಗಿದೆ.

ನೂತನವಾಗಿ ನೇಮಕಗೊಂಡ ಅಧ್ಯಕ್ಷರಿಗೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಶುಭಾಶಯ ಕೋರಿದರು. ಬಂಜಾರಾ ಸಮಾಜದ ಸೇವೆ, ಸಂಘಟನೆಯ ಬಲವರ್ಧನೆ ಹಾಗೂ ಸಮಾಜದ ಅಭಿವೃದ್ಧಿಗಾಗಿ ನೂತನ ಪದಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ಡಾ. ಅನಿಲ್ ಮಹಾರಾಜ್, ಜೂಡೋ ಬಂಜಾರಾ ಫೌಂಡೇಶನ್ ರಾಜ್ಯಾಧ್ಯಕ್ಷ ಡಾ. ಸುಭಾಷ್ ಚಂದ್ರ ರಾಠೋಡ್, ಪ್ರಧಾನ ಕಾರ್ಯದರ್ಶಿ ಖೇಮಸಿಂಗ್ ಆಡೆ, ಉಪಾಧ್ಯಕ್ಷ ಹೊಬುಸಿಂಗ್ ಚವಾಣ್, ರಾಜ್ಯ ಕಾರ್ಯದರ್ಶಿ ವಿನೋದ್ ಚವಾಣ್, ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಧತ್ತು ಪವಾರ್, ವಕೀಲ ವೆಂಕಟೇಶ್ ರಾಠೋಡ್, ಗೋಪಿನಾಥ್ ರಾಠೋಡ್, ಸುಧೀರ್ ರಾಠೋಡ್, ವಿಕಾಸ್ ಚವಾಣ್ (ಬಸವಂತಪುರ ತಾಂಡಾ), ವೆಂಕಟೇಶ್ ಚವಾಣ್, ಅವಿನಾಶ್ ಆಡೆ (ಗುಂಡಲಿ ತಾಂಡಾ) ಸೇರಿದಂತೆ ಮಾಧ್ಯಮದವರು ಹಾಗೂ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku