ಶಹಾಪುರದಲ್ಲಿ ಜಾಬ್ ಕಾರ್ಡ್ ಮೇಳ: ಅರ್ಹ ಕುಟುಂಬಗಳು ಸದುಪಯೋಗ ಪಡೆಯಲು ಕರೆ

Posted by

–

ಸುದ್ದಿ ಬೆಳಕು ವಾರ್ತೆ

ಶಹಾಪುರ: ಗ್ರಾಮೀಣ ಪ್ರದೇಶದಲ್ಲಿ ಜಾಬ್ ಕಾಡ್೯ ಪಡೆಯದ ಕುಟುಂಬಗಳಿಗೆ ಹೊಸ ಜಾಬ್ ಕಾಡ್೯ ಮಾಡಿಕೊಡಲು ಸರಕಾರ ಸೂಚನೆ ನೀಡಿದ್ದು, ಅದರ ಅನುಸಾರ ಗ್ರಾಮ ಪಂಚಾಯತಿಯಲ್ಲಿ ಒಂದು ತಿಂಗಳ ವರೆಗೆ ಜಾಬ್ ಕಾಡ್೯ ಮೇಳ ಅಭಿಯಾನ ಹಮ್ಮಿಕೊಂಡಿದೆ. ಯಾವ ಕುಟುಂಬ ಜಾಬ್ ಕಾಡ್೯ ಪಡೆದಿಲ್ಲ, ಆ ಕುಟುಂಬಗಳು ಈ ಜಾಬ್ ಕಾಡ್೯ ಮೇಳ ಅಭಿಯಾನದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ತಾಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಮಕಲ್ ಗ್ರಾಮದಲ್ಲಿ ಸೆ.02ರಂದು ವಿಬಿ-ಜಿ ರಾಮ್ ಜಿ ಯೋಜನೆಯಡಿ ಪ್ರಗತಿಯಲ್ಲಿದ್ದ ಗೋ ಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ PDO ಶ್ರೀಮತಿ ಲಕ್ಷ್ಮಿ ಪಾಟೀಲ ರವರು ಭೇಟಿ ನೀಡಿ, ಕಾಮಗಾರಿಯ ಪ್ರಗತಿ, ಭೌತಿಕ ಸ್ಥಿತಿ ಹಾಗೂ ಗುಣಮಟ್ಟ ವೀಕ್ಷಿಸಿ ಕೂಲಿಕಾರರ ಸಮಸ್ಯೆ ಆಲಿಸಿ, ಮಾತನಾಡಿದರು.

ಕಳೆದ ಆ.15ರಿಂದ ಸೆ. 15ರವರೆಗೆ ಗ್ರಾಮ ಪಂಚಾಯಿತಿಯಲ್ಲಿ ಜಾಬ್ ಕಾಡ್೯ ಮೇಳ ಅಭಿಯಾನ ನಡೆಯುತ್ತಿದೆ. ಇಲ್ಲಿಯವರೆಗೆ ಯಾವ ಕುಟುಂಬ ಜಾಬ್ ಕಾಡ್೯ ಪಡೆದುಕೊಂಡಿಲ್ಲ, ಅಂತಹ ಕುಟುಂಬಕ್ಕೆ ಹೊಸ ಜಾಬ್ ಕಾಡ್೯ ಮಾಡಿ ಕೊಡಲಾಗುತ್ತದೆ. ರೇಷನ್ ಕಾಡ್೯ನಲ್ಲಿದ್ದ 18ವರ್ಷ ಮೇಲ್ಪಟ್ಟ ಸದಸ್ಯರ, ಆಧಾರ ಕಾಡ್೯, ಬ್ಯಾಂಕ್ ಪಾಸ್ ಬುಕ್ ಹಾಗೂ ಎರಡು ಫೋಟೊಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು ಎಂದು ನಿಮ್ಮ ಮನೆಯ ಅಕ್ಕ-ಪಕ್ಕ ಹಾಗೂ ಗ್ರಾಮದವರಿಗೆ ತಿಳಿಸಿ ಎಂದು ಕೂಲಿಕಾರರಲ್ಲಿ ಮನವಿ ಮಾಡಿದರು.

ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕ್ ಮಿಷನ್ ಗ್ರಾಮೀಣ ಯೋಜನೆ ಜುಲೈ 1ರಿಂದ ಜಾರಿಗೆ ಬಂದಿದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಜಾಬ್ ಕಾಡ್೯ ಪಡೆದ ಕುಟುಂಬಕ್ಕೆ ಪ್ರತಿ ವರ್ಷ 125ದಿನ ದಿನಕ್ಕೆ 382 ರೂ.ಗಳ ಕೂಲಿ ದರದಲ್ಲಿ. ಅಕುಶಲ ಕೂಲಿ ಕೆಲಸ ನೀಡಲಾಗುತ್ತದೆ. ನಿಗದಿತ ಪ್ರಮಾಣದಲ್ಲಿ ಕೆಲಸ ಮಾಡಿದರೆ ಮಾತ್ರ ನಿಗದಿತ 382ರೂ ಕೂಲಿ ಪಾವತಿಸಲಾಗುವುದು. ಕಡಿಮೆ ಕೆಲಸ ಮಾಡಿದರೆ ಕಡಿಮೆ ಕೂಲಿ ಪಾವತಿಸಲಾಗುವುದು ಎಂದು ತಿಳಿಸಿದರು.

ಜಾಬ್ ಕಾಡ್೯ ಪಡೆದ ಕುಟುಂಬಕ್ಕೆ 5ಲಕ್ಷ ರೂ.ಗಳ ಮಿತಿಯ ವರೆಗೆ ವಿಬಿ-ಜಿರಾಮ್ ಜಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ. ಕೃಷಿ ಹೊಂಡ, ಕೊಳವೆ ಭಾವಿ ಜಲ ಮರುಪೂರ್ಣ ಘಟಕ, ಜಾನುವಾರು ಶೆಡ್, ಕುರಿ ಶೆಡ್, ಕೋಳಿ ಶೆಡ್, ಹಂದಿ ಶೆಡ್, ತೋಟಗಾರಿಕೆ ಹಾಗೂ ರೇಷ್ಮೆ ಬೆಳೆ ಸೇರಿದಂತೆ ಇತರೆ ಅಗತ್ಯವಾದ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ಪರಶುರಾಮ ಜೀನಕೇರಾ ಅವರು ಮಾಹಿತಿ ನೀಡಿದರು.

ಈ ವೇಳೆ ಯಾದಗಿರಿ ಜಿಪಂ ವಿಬಿ-ಜಿರಾಮಜಿ ಯೋಜನೆಯ ಐಇಸಿ ಸಂಯೋಜಕ ಪರಶುರಾಮ ಜಿನಕೇರಾ, ತಾಲೂಕ ಐಇಸಿ ಸಂಯೋಜಕ ಬಸಪ್ಪ, ಗ್ರಾಮ ಕಾಯಕ ಮಿತ್ರ ಮೊನಮ್ಮ, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾಯಕ ಬಂದುಗಳು ಹಾಗೂ ಕೂಲಿಕಾರರು ಇದ್ದರು.

Leave a Reply

Your email address will not be published. Required fields are marked *

↑
Suddi Belaku