ವಿಎ, ಆರ್ ಐಗಳಿಗೆ 17 ಲ್ಯಾಪ್ ಟಾಪ್ ಗಳ ವಿತರಣೆ

Posted by

ಕಂದಾಯ ಇಲಾಖೆ ಕೆಲಸ ನಿಗದಿತ ಅವಧಿಯೊಳಗೆ ಮುಗಿಸಿ : ಶಾಸಕ ತುನ್ನೂರ ಸೂಚನೆ

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆಯೇ ಇ ಆಫೀಸ್, ಇ ಪಾವತಿ ಸೇರಿದಂತೆಯೇ ಇತರೇ ಕೆಲಸಗಳು ಗಣಕಿರಣದ ಮೂಲಕವೇ ಮಾಡಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಇಲ್ಲಿನ ಅವರ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ಸುಮಾರು 17 ಲ್ಯಾಪ್ ಟಾಪ್ ಗಳನ್ನು ವಿಎ, ಹಾಗೂ ಆರ್ ಐಗಳಿಗೇ ವಿತರಿಸಿ ಅವರು ಮಾತನಾಡಿದರು.
ಕಂದಾಯ ಸಚಿವ ಕೃಷ್ಣ ಬೈರೈಗೌಡ ಅವರು ತಮ್ಮ ಇಲಾಖೆಯಲ್ಲಿ ತಂತ್ರಜ್ಞಾನ ಅಳವಡಿಸುವ ಮೂಲಕ ದಾಖಲೆ,ಕೆಲಸಗಳು ಉತ್ತಮವಾಗಿ ನಡೆಯುವಂತೆಯೇ ಮಾಡಿದ್ದಾರೆ. ಕಾರಣ ಇಂದು ಲ್ಯಾಪ್ ಟಾಪ್ ಪಡೆದ ವಿಎ ಮತ್ತು ಆರ್ ಐ ಅವರುಗಳು ತಪ್ಪದೇ ಇದರ‌ ಮೂಲಕವೇ ಕೆಲಸಗಳನ್ನು ಮಾಡಬೇಕು. ನಿಗದತ ಅವಧಿಯೊಳಗೆ ಎಲ್ಲವೂ‌ ಮುಗಿಸಬೇಕೆಂದರು.
ಸರ್ಕಾರದಿಂದ ತಾಲೂಕಿನ ಕಂದಾಯ ಇಲಾಖೆಗೆ ಸಂಬಂಧಸಿದ ಕೆಲಸಗಳನ್ನು ಕೈಗೊಳ್ಳಲು ಸರ್ಕಾರದಿಂದ ಬಂದಿದ್ದ 17 ಲ್ಯಾಪ್ ಟಾಪ್ ಗಳನ್ನು ಶಾಸಕರ ಮೂಲಕ ವಿತರಿಸಲಾಗಿದೆ. ಇದರ ಬಳಗೆ ಬಗ್ಗೆ ಅವರಿಗೆ ತಿಳಿಸಲಾಗಿದೆ ಎಂದರು.
ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿ, ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವೈಕರಿ ಹೆಚ್ಚಿಸುವ ಮತ್ತು ಅವರು ಡಾಟಾ ಎಂಟ್ರಿ ಮಾಡಲು ಅನುಕೂಲದ ಹಿತದೃಷ್ಟಿಯಿಂದ ಲ್ಯಾಪ್‌ಟಾಪ್‌ಗಳನ್ನು ನೀಡಿದೆ. ಈ ಯೋಜನೆಯ ಸದುಪಯೋಗದೊಂದಿಗೆ ಜನರ ಸೇವೆಯನ್ನು ಅತಿ ವೇಗದಲ್ಲಿ ಮಾಡಲು ಮುಂದಾಗಬೇಕು ಎಂದರು.
ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಬೂದಿಹಾಳ, ಮಲ್ಲಿಕಾರ್ಜುನ ಈಟೆ, ಗಿರೀಶ ರಾಯಕೋಟಿ, ರಾಜಶೇಖರ ಪಾಟೀಲ್, ಬಸವರಾಜ ಮುಖಂಡರಾದ ಶರಣಗೌಡ ಬಬಲಾದ ಇದ್ದರು.

Leave a Reply

Your email address will not be published. Required fields are marked *

Suddi Belaku