
ಅಭಿಶಾಳದಲ್ಲಿ ಕಾರ್ಯಕರ್ತರೊಂದಿಗೆ ಮನ್ ಬಾತ್ ವಿಕ್ಷಣೆ
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಪಾರಂಪರಿಕ ಸಂಗೀತ ಕಲೆಗಳು ಉಳಿಸುವ ನಿಟ್ಟಿನಲ್ಲಿ ದೇಶದ ಜನತೆ ಅದಕ್ಕೆ ಉತ್ತೇಜನ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದನ್ನು ಯುವ ಜನತೆ ಚಾಚು ತಪ್ಪದೇ ಪಾಲಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಹೇಳಿದರು.
ತಾಲೂಕಿನ ಅಭಿಶಾಳದ ಗ್ರಾಮದ ಬಿಜೆಪಿ ಕಾರ್ಯಕರ್ತ ಮಹಾದೇವರೆಡ್ಡಿ ಅವರ ನಿವಾಸದಲ್ಲಿ ಭಾನುವಾರ ಪ್ರಧಾನಿ ಮೋದಿ ಅವರ 136ನೇ ಮನ್ ಬಾತ್ ವಿಕ್ಷೀಸಿ ಅವರು ಮಾತನಾಡಿದರು.
ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ನೆನದ ಮೋದಿ ಅವರು ಹೇಳಿದಂತೆಯೇ ಕಲಾಂ ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಮುದ್ನಾಳ ಹೇಳಿದರು.

ಆ.15ರ ಸ್ವಾತಂತ್ರೋತ್ಸವ ಇದು ಅಪಾರ ಜನರ ತ್ಯಾಗ ಬಲಿದಾನದ ಪ್ರತೀಕವಾಗಿದೆ. ಅಂದು ಮನೆ, ಮನೆಯಲ್ಲೂ ತಿರಂಗಾ ಧ್ವಜ ಕಟ್ಟುವ ಮೂಲಕ ದೇಶಪ್ರೇಮ ಮೆರೆಯುವಂತೆಯೇ ಪ್ರಧಾನಿ ಮೋದಿ ಅವರು ಕರೆ ನೀಡಿದಂತೆ ಅಂದು ಎಲ್ಲರೂ ತಮ್ಮ,ತಮ್ಮ ಮನೆಗಳ ಮೇಲೆ ತಿರಂಗಾ ಧ್ವಜಗಳನ್ನು ಕಟ್ಟುವ ಮೂಲಕ ದೇಶಾಭಿಮಾನ ಹೆಚ್ಚಿಸೋಣ ಎಂದರು.
ಈ ಸಂದರ್ಭದಲ್ಲಿ ಶ್ರೀ ಮದೇವರೆಡ್ಡಿ ಗೌಡ ಅಭಿಶಾಳ, ಶ್ರೀ ಶರಣುಗೌಡ ಅಥಿತ್ಯ ಪಾಟೀಲ್, ಶ್ರೀ ಅಮ್ಮಣಗೌಡ ಅನುಸೂಗುರು, ಶ್ರೀ ದೇವು ಮುತ್ಯಾ, ಶ್ರೀ ಸಂತೋಷಗೌಡ ಹಿಟಿಗಿ, ಶ್ರೀ ದುರ್ಗುಪ್ಪ ಅರಿಜನ್, ಶ್ರೀ ದರೇಶ್ ಚಪ್ಪರ ಮನಿ, ಶ್ರೀ ಚಂದ್ರಮ್ಮ ಅರಿಜನ್, ಶ್ರೀ ಭಾಷ ನಡಲ್ ಮನಿ, ಶ್ರೀ ನಾಭಿ ಸಾಬ್ ದೊಡ್ಡಮನಿ, ಶ್ರೀ ಸೈದಾಪ್ಪ ನಾಟೇಕಾರ, ಶ್ರೀ ಚಾಂದ್ ಸಾಬ್ ದೊಡ್ದಮನಿ, ಶ್ರೀ ಮುನ್ನಬಾಯಿ, ಶ್ರೀ ಅಮೀನ್ ರೆಡ್ಡಿ ಕದರಪೂರ್, ಶ್ರೀ ಶಶಿಕುಮಾರ್ ಸೂಗುರಳ್, ಶ್ರೀ ದೇವದ್ರಯ್ಯ ಸ್ವಾಮಿ, ಶ್ರೀ ಶರಣಪ್ಪ ಪೂಜಾರಿ ಅನುಸೂಗುರು, ಶ್ರೀ ಜಲಾಲ್ ಸಾಬ್ ಮಮ್ಮಣಗೇರಿ ಇನ್ನಿತರರು ಉಪಸ್ಥಿತರಿದರು.












Leave a Reply