
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 22 : ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಅವಕಾಶ ಕಲ್ಪಿಸುವ ಉದ್ದೇಶದಿಂದ ಎನ್‌ಡಿಎ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿದೇಯಕವನ್ನು ಮಂಡಿಸಿದ್ದರೂ, ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಬೆಂಬಲಿಸದ ಹಿನ್ನೆಲೆಯಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ನೇತಾಜಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಮೂರ್ತಿ ಅನಪೂರ ಅವರು, ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ಗೌರವವಿದೆ ಎಂದು ಹೇಳಿಕೊಂಡರೂ, ವಾಸ್ತವದಲ್ಲಿ ಮಹಿಳೆಯರ ಏಳಿಗೆಯನ್ನು ಸಹಿಸದ ಮನೋಭಾವ ಹೊಂದಿವೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡದ ಮೂಲಕ ಅವರ ನಿಜವಾದ ನಿಲುವು ಬಹಿರಂಗವಾಗಿದೆ ಎಂದು ಟೀಕಿಸಿದರು.
ಪ್ರಸ್ತುತ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರ ಸಮಾನವಾಗಿ ಶ್ರಮಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರಲು ಮುಂದಾಗಿತ್ತು. ಆದರೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಮಹಿಳಾ ವಿರೋಧಿ ನಿಲುವು ತಾಳಿವೆ ಎಂದು ಹೇಳಿದರು.
ಹಿಂದೆ H. D. Deve Gowda ಪ್ರಧಾನಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತಂದು ಮಹಿಳಾ ಸಬಲೀಕರಣಕ್ಕೆ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದರು ಎಂದು ಸ್ಮರಿಸಿದರು.
ಎಲ್ಲಾ ಪಕ್ಷಗಳ ನಾಯಕರು ಕೂಡಿ ಚರ್ಚಿಸಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿದೇಯಕವನ್ನು ಜಾರಿಗೆ ತಂದು ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾರದಾ ಕಡೇಚೂರ, ಜಯಶ್ರೀ ಪೊಲೀಸ್ ಪಾಟೀಲ್, ನರ್ಮದಾ ಅವಂಗಪೂರ, ಪರಿಮಳ ಪಾಟೀಲ್, ಅಶ್ವಿನಿ ಹೊಸಮನಿ, ಸಾವಿತ್ರಮ್ಮ, ವಿಜಯಲಕ್ಷ್ಮಿ ಹತ್ತಿಕುಣಿ, ಇಂದಿರಾ ಕೊಳ್ಳಿ, ಶಶೀಕಲಾ ಬಿರಾದರ, ಸಂಗೀತಾ ಚವ್ಹಾಣ, ಅನುಸೂಯಾ ದಂತಾಪೂರ, ಸಿದ್ಲಿಂಗಮ್ಮ ಯಲ್ಹೇರಿ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಬಂದಪ್ಪ ಅರಳಿ, ವಿಶ್ವನಾಥ ಶಿರವಾರ, ಮಲ್ಲಣ್ಣಗೌಡ ಹಳಿಮನಿ, ಅಜಯರಡ್ಡಿ ಯಲ್ಹೇರಿ, ದೇವಿಂದ್ರಪ್ಪ ಸುರಪುರ, ಕುಮಾರಗೌಡ ಹುಣಸಗಿ, ಶರಣಗೌಡ ಹೊಸಳ್ಳಿ, ಈಶ್ವರ್ ರಾಠೋಡ, ಜಯೇಂದ್ರ ಚವ್ಹಾಣ, ವೆಂಕೋಬ ಕಂಚಗಾರಳ್ಳಿ, ಮಲ್ಲಿಕಾರ್ಜುನ ಮರಮಕಲ್, ಧರ್ಮೇಶ ಟಿ. ವಡಿಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.










Leave a Reply