ಶಿಕ್ಷಣವೇ ಶಕ್ತಿ: ಹಕ್ಕುಗಳಿಗಾಗಿ ಸಂಘಟಿತ ಹೋರಾಟಕ್ಕೆ ದೇವರಾಜ ನಾಯಕ ಕರೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 26 : ಬಂಜಾರ ಸಮಾಜದ ಯುವಕರು ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದ್ದು, ಸಂಘಟಿತ ಹೋರಾಟದಿಂದ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ದೇವರಾಜ ನಾಯಕ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಲಾದ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರವಾಗಿದ್ದು, ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿ ವಿನೋದ ನಾಯಕ ಮುದ್ನಾಳ, ಗೌರವ ಅಧ್ಯಕ್ಷರಾಗಿ ತೇಜರಾಜ ರಾಠೋಡ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಗುಂಡುರಾವ್ ಗೆದ್ದಲಮರಿ ನೇಮಕಗೊಂಡರು. ತಾಲೂಕು ಅಧ್ಯಕ್ಷರಾಗಿ ಮೇಘನಾಥ ಚವ್ಹಾಣ, ಯಾದಗಿರಿ ನಗರ ಅಧ್ಯಕ್ಷರಾಗಿ ಮಿಥುನ್ ರಾಠೋಡ, ಗುರುಮಠಕಲ್ ಅಧ್ಯಕ್ಷರಾಗಿ ಬಾಲು ರಾಠೋಡ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮಹೋನ್ ಚವ್ಹಾಣ (ಮಲ್ಹಾರ ತಾಂಡಾ), ವಡಗೇರಾ ತಾಲೂಕು ಅಧ್ಯಕ್ಷರಾಗಿ ಖೇಮ್ಮಣ್ಣ ಚವ್ಹಾಣ, ಗೌರವ ಅಧ್ಯಕ್ಷರಾಗಿ ತಿಮ್ಮಣ್ಣ ರಾಠೋಡ ಹಾಗೂ ಕಾರ್ಯಾಧ್ಯಕ್ಷರಾಗಿ ಕಾಮಣ್ಣ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಜರ್ನಾಥನ್ ರಾಠೋಡ, ವಾಸು ನಾಯಕ, ಯಂಕಪ್ಪ ರಾಠೋಡ, ರವಿ ಮುದ್ನಾಳ ಸೇರಿದಂತೆ ಹಲವು ಮುಖಂಡರು ಉಪಸ್ಥಿತರು.

You Might Also Like

Leave a Reply

Your email address will not be published. Required fields are marked *

Suddi Belaku