ಇಳಕಲ್ : ಇಲ್ಲಿಗೆ ಸಮೀಪದ ಗೊರಬಾಳ ಗ್ರಾಮದ ಯುವಕ ಆನಂದಗೌಡ ಮಲ್ಲಿಕಾರ್ಜುನ ಪಾಟೀಲ್ (ರಾಂಪುರ) ಅವರು ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ 139ನೇ ರ‍್ಯಾಂಕ್ ಪಡೆಯುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.
ಬೀದರ್ ಪಶುವೈದ್ಯಕೀಯ ಕಾಲೇಜಿನ ವತಿಯಿಂದ ಪರೀಕ್ಷೆಗೆ ಹಾಜರಾಗಿದ್ದ ಆನಂದಗೌಡ, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜಂಟಿಯಾಗಿ ನಡೆಸಿದ ಐಸಿಎಆರ್–ಎಐಇಇಎ (ಪಿಜಿ) ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ದೇಶಕ್ಕೆ 139ನೇ ರ‍್ಯಾಂಕ್ ಗಳಿಸಿದ್ದಾರೆ.
ಆನಂದಗೌಡ ಅವರ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಆನಂದಗೌಡ ಅವರ ತಂದೆ ಮಲ್ಲಿಕಾರ್ಜುನ ಮಾತನಾಡಿ, ತಮ್ಮ ಮಗ ರಾಷ್ಟ್ರಮಟ್ಟದಲ್ಲಿ 139ನೇ ರ‍್ಯಾಂಕ್ ಪಡೆದಿರುವುದು ತುಂಬಾ ಸಂತಸ ತಂದಿದೆ. ಆತನ ಸಾಧನೆ ಇತರ ಯುವಕರಿಗೂ ಪ್ರೇರಣೆಯಾಗಿ, ಮಾದರಿಯಾಗಲಿ ಎಂದು ಹರ್ಷ ವ್ಯಕ್ತಪಡಿಸಿದರು.
Leave a Reply