ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಫಾರ್ಮಾಸಿಸ್ಟ್ ಗಳು ಭವಿಷ್ಯದ ಆರೋಗ್ಯದ ಕಾಳಜಿ ವಹಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಫಾರ್ಮಾಸಿಸ್ಟ್ ಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಅಖಿಲ ಭಾರತೀಯ ಫಾರ್ಮಾಸಿಸ್ಟ್ ಸಂಘದ (ಎಐಪಿಎ) ರಾಷ್ಟ್ರೀಯ ಅಧ್ಯಕ್ಷರಾದ ಡಾ.ಬಿ.ಎಸ್.ದೇಸಾಯಿ ಅವರು ಹೇಳಿದ್ದಾರೆ.
ಅವರು ಮಂಗಳವಾರ ನಗರದ ಕನಕವೃತ್ತದ ಸಮೀಪದ ಡಿಎಚ್ ಓ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ದಿಂದ ಹಮ್ಮಿಕೊಂಡ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವೈದ್ಯರು ರೋಗ ನಿರ್ಣಯ ಮಾಡಿದರೆ ಆ ಚಿಕಿತ್ಸೆಯನ್ನು ಯಶಸ್ವಿಯಾಗಿಸಲು ಫಾರ್ಮಾಸಿಸ್ಟ್ ಗಳ ಪಾತ್ರ ಮುಖ್ಯವಾಗಿದೆ.ರೋಗಿಗಳಿಗೆ ಔಷಧಿಗಳ ಡೋಸ್ ತೆಗೆದುಕೊಳ್ಳುವ ಬಗ್ಗೆ ತಿಳಿಹೇಳುತ್ತಾರೆ.ರೋಗಿಗಳಿಗೆ ಔಷಧಿಗಳನ್ನು ನೀಡುವ ಫಾರ್ಮಾಸಿಸ್ಟ್ ಗಳು ಔಷಧಿಗಳನ್ನು ನೀಡುವ ಮುನ್ನ ಔಷಧಿಗಳ ಅವಧಿ ಮುಗಿಯುವ ಬಗ್ಗೆ, ಔಷಧಿಗಳ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿ ಯಾವುದೇ ತಪ್ಪು ಆಗದಂತೆ ಎಚ್ಚರಿಕೆಯಿಂದ ಔಷಧಿಗಳನ್ನು ನೀಡಬೇಕು. ಒಂದು ವೇಳೆ ತಪ್ಪು ಮಾಡಿದರೆ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬಿರಲಿದೆ.ಸರಕಾರಿ ಆಸ್ಪತ್ರೆ, ಕಚೇರಿಯಲ್ಲಿ ಕಾರ್ಯ ಮಾಡುವ ಫಾರ್ಮಾಸಿಸ್ಟ್ ಗಳು ತಾಳ್ಮೆಯಿಂದ ಕೆಲಸ ಮಾಡಬೇಕು. ಪ್ರೀತಿ ವಿಶ್ವಾಸದಿಂದ ತಮ್ಮ ಸೇವೆ ಮಾಡಬೇಕಿದೆ.ಇತ್ತಿಚೆಗೆ ಮೇಡಿಕಲ್ ಸರ್ಟಿಫಿಕೇಟ್ ದುರುಪಯೋಗವಾಗುತ್ತಿದೆ ಇದನ್ನು ಕಡಿವಾಣ ಹಾಕಬೇಕಿದೆ.ರಾಜ್ಯದಲ್ಲಿ ಔಷಧಿಗಳ ಸಂಗ್ರಹಿಸಲು ಸರಿಯಾದ ಔಷಧ ಉಗ್ರಾಣಗಳ ಅವಶ್ಯಕತೆ ಇದೆ ಎಂದರು.














Leave a Reply