ಯಾದಗಿರಿ : ನಮ್ಮ ದೇಶ ಕೃಷಿ ಪ್ರಧಾನವಾದ ದೇಶ, ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ, ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆಯಾ ವ್ಯಾಪ್ತಿಯಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರ ಜೀವನಾಡಿಯಾಗಿವೆ ಎಂದು ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿ ಪಾಟೀಲ್ ಹೇಳಿದರು.
ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ೧೧ಕ್ಕೆ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಸಂಘವು ರೈತರಿಗೆ ೨.೨೮ ಕೋಟಿ ರೂ. ಬೆಳೆ ಸಾಲ ನೀಡಿದೆ, ರೈತರು ಕೂಡ ಪ್ರಾಮಾಣಿಕವಾಗಿ ಸಕಾಲದಲ್ಲಿ ಎಲ್ಲರೂ ಸಾಲ ಮರು ಪಾವತಿಸಿದ್ದಾರೆ, ಸಂಘಕ್ಕೆ ೭ ಲಕ್ಷ ರೂ. ಲಾಭ ಬಂದಿದೆ ಎಂದು ತಿಳಿಸಿದರು.
ಸಂಘದಿAದ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ೨.೨೩ ಕೋಟಿ ರೂ. ಸಾಲ ನೀಡಿ, ಅವರ ವ್ಯಾಪಾರ ಅಭಿವೃದ್ಧಿಗೆ ಸಹಕರಿಸಲಾಗಿದೆ, ಅಲ್ಲದೇ ಸಂಘದಲ್ಲಿ ಗ್ರಾಹಕರಿಂದ ೧.೧೦ ಕೋಟಿ ರೂ. ಮುದ್ದತ್ ಠೇವಣಿ ಹಣ ಸಂಗ್ರಹಿಸಲಾಗಿದೆ, ಸಂಘದ ಆಡಳಿತ ಕಛೇರಿ ನವೀಕರಣಗೊಳಿಸಲಾಗಿದೆ, ನ್ಯಾಯಬೆಲೆ ಅಂಗಡಿ ಮೂಲಕ ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆ ಮಾಡಲಾಗುತ್ತಿದೆ ಎಂದರು.
ಈ ವರ್ಷ ಮುಂಗಾರುಮಳೆ ದುರ್ಬಲವಾಗಿರುವುದರಿಂದ ರೈತಾಪಿವರ್ಗ ಸಂಕಷ್ಟದಲ್ಲಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘದಿAದ ಹೆಚ್ಚಿನ ಆರ್ಥಿಕ ಸಾಲ ನಿರೀಕ್ಷೆಯಲ್ಲಿದ್ದಾರೆ, ನಾವು ಆಡಳಿತ ಮಂಡಳಿಯವರು ರೈತರ ನಿಯೋಗದೊಂದಿಗೆ ಕೆವೈಡಿಸಿಸಿ ಕೇಂದ್ರ ಬ್ಯಾಂಕ್ ಕಲಬುರಗಿ ಅಧಿಕಾರಿಗಳನ್ನು ಭೇಟಿಯಾಗಿ ಸಂಘಕ್ಕೆ ಹೆಚ್ಚಿನ ಆರ್ಥಿಕ ಸಹಾಯ ನೀಡಲು ಮನವಿ ಮಾಡುತ್ತೇವೆ ಎಂದು ವಿವರಿಸಿ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಹಾಗೂ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಾಲ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೆಓಎಫ್ ಅಧ್ಯಕ್ಷ ಶರಣಪ್ಪ ಸೋಮಣ್ಣೋರ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘವೂ ಉತ್ತಮ ಆರ್ಥಿಕ ವಹಿವಾಟು ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಅತ್ಯತ್ತಮ ಸಂಘವಾಗಿ ಪ್ರಗತಿಯತ್ತ ಸಾಗುತ್ತಿದೆ, ಸಂಘವೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ, ವ್ಯಾಪಾರಸ್ಥರಿಗೆ, ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಬೇಕು, ಅಂದಾಗ ಮಾತ್ರ ಸಂಘದ ಸೌಲಭ್ಯಗಳು ಎಲ್ಲರಿಗೂ ತಲುಪಿ ಸಂಘದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಸಂಘದ ನಿರ್ದೇಶಕ ಅಮೀನರಡ್ಡಿ ಬಿಳ್ಹಾರ ಮಾತನಾಡಿ, ಗ್ರಾಮ ಹಾಗೂ ಸುತ್ತಮುತ್ತಲಿನ ಆರ್ಥಿಕ ಸಂಪನ್ಮೂಲ ವ್ಯಕ್ತಿಗಳು ಸಂಘದಲ್ಲಿ ತಮ್ಮ ಹಣವನ್ನು ಜಮಾ ಮಾಡಬೇಕು, ಇದರಿಂದ ಸಂಘದ ಆರ್ಥಿಕ ಚಟುವಟಿಕೆಗಳ ವೇಗ ಹೆಚ್ಚಿಸಲು ಅನುಕೂಲವಾಗುತ್ತದೆ ಎಂದರು.
ಸAಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಕುಮಾರ ಪುಟಗಿ, ಸಂಘದ ವಾರ್ಷಿಕ ವರಧಿ ಲೆಕ್ಕಪತ್ರ ವಾಚಿಸಿದರು.
ಸಮಾರಂಭದಲ್ಲಿ ಸಂಘದಲ್ಲಿ ಠೇವಣಿ ಮಾಡಿದ ಗ್ರಾಹಕರನ್ನು, ಪಿಗ್ಮಿದಾರರನ್ನು, ಮಹಿಳೆಯರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಖಂಡಪ್ಪನೋರ, ಮಾಜಿ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ್, ನಿರ್ದೇಶಕರಾದ ಬೋಜಣ್ಣಗೌಡ ಯಡ್ಡಳ್ಳಿ, ಬಸವರಾಜ ಕೋಡ್ಲಾ, ಸಾಬರಡ್ಡಿ ತಮ್ಮಣ್ಣೋರ, ನರಸಪ್ಪ ಇದ್ಲಿ, ಸಾಯಿಬಣ್ಣ ಬೊಳೇರ್, ಅಮೃತರಡ್ಡಿ ಪಾಟೀಲ್, ಶರಣಪ್ಪ ಶಂಕ್ರಪ್ಪನೋರ, ಯಲ್ಲಮ್ಮ ತಮ್ಮಣ್ಣೋರ, ಭೀಮವ್ವ ಸಮನಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Reply