ಗುರುಮಿಠಕಲ್ ಕರವೇ ತಾಲೂಕು ಘಟಕ ವಿಸರ್ಜನೆ: ಹೊಸ ಘಟಕ ರಚನೆಗೆ ಸಿದ್ಧತೆ

Posted by

–

ಸುದ್ದಿ ಬೆಳಕು ವಾರ್ತೆ

ಗುರುಮಿಠಕಲ್: ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗುರುಮಿಠಕಲ್ ತಾಲೂಕು ಅಧ್ಯಕ್ಷರಾದ ಶರಣಬಸ್ಸಪ್ಪ ಎಲ್ಹೆರಿ ಹಗೂ ಎಲ್ಲ ಪದಧಿಕಾರಿಗಳು ಸೇರಿದಂತೆ. ಇಂದಿನಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ.
ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಆದೇಶದ ಮೇರಗೆ
ಸಂಘಟನೆಯ ಶಿಸ್ತು, ನಿಯಮಾವಳಿ ಹಾಗೂ ಸಂಘಟನಾ ಹಿತಾಸಕ್ತಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದುವರೆಗೆ ತಾಲೂಕು ಘಟಕದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಹುದ್ದೆಗಳು ಹಾಗೂ ಜವಾಬ್ದಾರಿಗಳನ್ನು ಈ ಮೂಲಕ ರದ್ದುಪಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಗುರುಮಿಠಕಲ್ ತಾಲೂಕಿನಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಸಮರ್ಪಕವಾಗಿ ಸಂಘಟಿಸುವ ಉದ್ದೇಶದಿಂದ ಹೊಸ ತಾಲೂಕು ಘಟಕವನ್ನು ರಚಿಸಲಾಗುವುದು. ಹೊಸ ಘಟಕ ರಚನೆಯಾಗುವವರೆಗೆ ಯಾರೂ ತಮ್ಮನ್ನು ಕರವೇ ಗುರುಮಿಠಕಲ್ ತಾಲೂಕು ಘಟಕದ ಪದಾಧಿಕಾರಿ ಎಂದು ಅಧಿಕೃತವಾಗಿ ಪರಿಚಯಿಸಿಕೊಳ್ಳಬಾರದು.
ಕರ್ನಾಟಕ ರಕ್ಷಣಾ ವೇದಿಕೆಯ ತತ್ವ, ಸಿದ್ಧಾಂತ ಮತ್ತು ಸಂಘಟನಾ ಶಿಸ್ತಿಗೆ ಬದ್ಧರಾಗಿ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿಯಾಗಿದೆ.ಮುಂದಿನ ತಾಲೂಕು ಘಟಕ ರಚನೆ ಮಾಡುವವರೆಗೆ. ಉಸ್ತುವಾರಿಯನ್ನು .ತಾಲೂಕು ಅಧ್ಯಕ್ಷರಾದ ಮಲ್ಲು ಮಾಳಿಕೇರಿ ಅವರಿಗೆ ವಹಿಸಲಾಗಿದೆ. ಎಂದು ಪತ್ರಿಕೆ ಪ್ರಕಟಣೆಯಲ್ಲಿ ಸಿದ್ದು ನಾಯಕ ಹತ್ತಿಕುಣಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದಗಿರಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku