ಯಾದಗಿರಿ ಬಂದ್ ಯಶಸ್ವಿ: 5 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲು ಸೆ.17ರ ಗಡುವು

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಜಿಲ್ಲೆಯ ಉಳಿದ 5 ತಾಲೂಕಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸುವದು ಹಾಗೂ ರಾಷ್ಟ್ರೀಯ ಬ್ಯಾಂಕ್ಗಳು, ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ನಡೆಸಿದ ಬಂದ್ ಯಶಸ್ವಿಯಾಗಿದೆ.
ಬೆಳಗ್ಗೆಯಿಂದಲೇ ಸರ್ವ ಸಂಘಟನೆಗಳ ಹೋರಾಟ ಸಮಿತಿ ಮುಖಂಡರು, ಬೈಕ್ ಗಳ ಮೇಲೆ ಸಂಚರಿಸಿ ಅನ್ನದಾತನಿಗೆ ಆದ ಅನ್ಯಾಯದ ವಿರುದ್ಧ ಸಂಪೂರ್ಣ ಬಂದ್ ಮಾಡಿ ಬೆಂಬಲಿಸುವAತೆ ಮಾಡಿದ ಮನವಿಗೆ ಅಂಗಡಿ ಮುಂಗಟ್ಟುಕಾರರು ವ್ಯಾಪಾರ ವಹಿವಾಟು ಬಂದ್ ಮಾಡಿ ಬೆಂಬಲ ಸೂಚಿಸಿದರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬೆಳಗ್ಗೆಯಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು.
ಮೈಲಾಪುರ ಅಗಸಿಯಿಂದ ಪ್ರಾರಂಭಗೊAಡ ಪಾದಯಾತ್ರೆ, ಗಾಂದಿ ವೃತ್ತ, ಬಾಬುಜಿ ವೃತ್ತ, ಕನಕ ವೃತ್ತ, ಅಂಬೇಡ್ಕರ್ ವೃತ್ತ, ಶಾಸ್ತಿç ವೃತ್ತ, ಸುಭಾಷ ವೃತ್ತಕ್ಕೆ ಆಗಮಿಸಿ ಬಹಿರಂಗ ಪ್ರತಿಭಟನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ನಾಯಕ ಸಮಾಜದ ಮುಖಂಡ ಮರೆಪ್ಪ ನಾಯಕ ಮೊಗದಂಪುರ ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ದೊರೆತು 8 ದಶಕಗಳು ಮುಗಿಯುತ್ತಾ ಬಂದರು ರೈತರ ಬದಕು ಮತ್ತು ಸಂಕಷ್ಟ ತಪ್ಪುತ್ತಿಲ್ಲ. ನಮ್ಮನ್ನು ಹಾಳುವಂತಹ ಸರ್ಕಾರಗಳು ದೇಶಕ್ಕೆ ಅನ್ನ ನೀಡುವ ರೈತರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವಂತಹ ಯೋಜನೆಗಳು ಕಟ್ಟು-ನಿಟ್ಟಾಗಿ ಕಾನೂನು ಮುಖಾಂತರ ಜಾರಿಗೆ ತರದೇ ಅನ್ಯಾಯ ಮಾಡಿವೆ. ರೈತರು ಬೆಳೆದ ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆಗಳು ನಿಗದಿ ಮಾಡದೇ ಸರ್ಕಾರಗಳು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವದು ಖಂಡನೀಯವಾಗಿದೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ, 17ನೇ ತಾರಿಖಿನೊಳಗಾಗಿ ಜಿಲ್ಲೆ ಬರ ಘೋಷಣೆ ಮಾಡದಿದ್ದಲ್ಲಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾಸ ಪಾಟೀಲ್ ರಿಗೆ ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಗುಡುಗಿದರು.
ಕೋಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ಮಳೆಯಿಲ್ಲದೇ ಜನ ರೈತರು ತತ್ತರಿಸಿದ್ದಾರೆ. ಆದರೆ ಸಚಿವ ಶಾಸಕರು, ಸಂಸದರು ಸರ್ಕಾರಿ ವಾಹನ ಭತ್ಯೆಗಳನ್ನು ಪಡೆದು ತಿರುಗುತ್ತಿದ್ದಾರೆ. ಆಗರ್ಭ ಶ್ರೀಮಂತರಿದ್ದರೂ ಸರ್ಕಾರದ ಭತ್ಯೆ ಬಳಸುವುದನ್ನು ಬಿಡಬೇಕೆಂದು ಆಗ್ರಹಿಸಿದರು.
ಜನಸೇನಾ ರಾಜ್ಯಾಧ್ಯಕ್ಷ ಮೈಲಾರಪ್ಪ ಜಾಗೀರದಾರ ಮಾತನಾಡಿ, ಜೂನ್ ಮೊದಲನೇ ವಾರದಲ್ಲಿ ಶೇ. 90% ರಷ್ಟು ಬಿತ್ತನೆ ಮಾಡಿದಂತಹ ರೈತರು ಜೂನ್ ಅಂತ್ಯ ಜುಲೈ ಮೊದಲನೇ ವಾರದವರೆಗೆ ಮಳೆ ಬಾರದೇ ತೇವಾಂಶದ ಕೊರತೆಯಿಂದ ಮಳೆ ಕೊರತೆಯಿಂದ ಉಳಿದ ಶೇ 50 % ರಷ್ಟು ಮೊಳಕೆ ಬಾರದೇ ಹಾನಿಯಾಗಿರುತ್ತದೆ. ರೈತರು ಸಂಕಷ್ಟಕ್ಕೆ ಸಿಲುಕಿ ಪುನಃ 2ನೇ ಬಾರಿ ಬಿತ್ತನೆ ಮಾಡಿದರು ಮಳೆಯ ಕೊರತೆಯಿಂದ ಪುನಃ ಮೊಳಕೆ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ. ಸಾಲ-ಸುಲ ಮಾಡಿದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ವಾಸ್ತವ ಅರಿತು ನೆರವಿಗೆ ಬಂದು ರೈತರ ರಾಷ್ಟಿçÃಕೃತ ಮತ್ತು ಸ್ಥಳಿಯ ಬ್ಯಾಂಕ್ ಸಾಲ ಮನ್ನ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಗಳ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನವರ ಮಾತನಾಡಿ, ಶೇ.85% ರಿಂದ 90% ರವರೆಗೆ ಬೆಳೆ ಹಾನಿಯಾಗಿದ್ದರೂ ಸರ್ಕಾರ ಉಳಿದ 5 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡದೇ ಅನ್ಯಾಯ ಮಾಡಿದೆ.
ಅಂತರ್ಜಲ ಛತ್ತಿದ್ದು, ಕುಡಿಯುವ ನೀರಿಗಾಗಿ ಅಹಕಾರಸುರುವಾಗಿದೆ. ಜನ-ಜನಾವಾರುಗಳಿಗೆ ತುಂಬಾ ತೊಂದರೆಯಾಗಿದ್ದು, ಈ ಭಾಗದ ರೈತ ಮತ್ತು ಕುಲಿಕಾರ್ಮಿಕರು ಕೆಲಸವಿಲ್ಲದೇ ಹೊಟ್ಟೆ ಪಾಡಿಗಾಗಿ ದಿನನಿತ್ಯ ಸಾವಿರಾರು ಜನರು ಬೆಂಗಳೂರು ಮತ್ತು ಮುಂಬೈ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ.
ಬರಗಾಲದ ವಾಸ್ತವ ಸ್ಥಿತಿಯ ಬಗ್ಗೆ ಮನುವರಿಕೆ ಮಾಡುವಲ್ಲಿ ಜಿಲ್ಲೆಯ ಶಾಸಕರುಗಳು, ಲೋಕಸಭಾ ಸದಸ್ಯರುಗಳು, ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು. ಕೂಡಲೇ ಸೆ. 17 ರೊಳಗಾಗಿ 5 ತಾಲ್ಲೂಕುಗಳು ಬರ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ಸಂಪೂರ್ಣ ಜಿಲ್ಲೆ ಬಂದ್ ಮಾಡಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದೇವರಾಜ ನಾಯಕ, ಕಾಂತು ಪಾಟೀಲ್, ಬಸವರಾಜ ಪಡುಕೋಟೆ, ಗೌರವಾದ್ಯಕ್ಷ ದೇವಿಂದ್ರಪ್ಪ ಎಚ್. ಯರಗೋಳ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ್, ಹಣಮಂತ ಇಟಗಿ, ರವಿಕೆ ಮುದ್ನಾಳ ವಿಜಯಕುಮಾರ ಸಿರಗೋಳ, ಭೀಮಾಶಂಕರ ಆಲ್ದಾಳ, ಅಶೋಕ ಐಕೂರ, ವಿಶ್ವಾರಾಧ್ಯ ದಿಮ್ಮೆ, ಮಹಾವೀರ ಲಿಂಗೇರಿ, ಸಿದ್ದರಾಜರಡ್ಡಿ ತಂಗಡಗಿ, ಎಸ್.ನಿಜಲಿಂಗಪ್ಪ ಪೂಜಾರಿ, ಭೀಮು ಪೂಜಾರಿ, ಕಾಶಿನಾಥ ನಾಟೇಕರ್, ಕ್ರಿಷ್ಣಮೂರ್ತಿ ಕುಲಕರ್ಣಿ, ಕಾಶಪ್ಪ ಹೆಗ್ಗಣಗೇರಾ, ಎಂ.ಡಿ. ತಾಜ್, ಶರಣಪ್ಪ ಜಾಕನಳ್ಳಿ, ಅಜಯಕುಮಾರ ಮಾಸನ್, ಬಂಗಾರು ಜೆಬಿ ರಾಠೋಡ, ಪೋಲಪ್ಪ ನಾರಾಯಣೋರ, ವಿಜಯ ಭಾರತ, ಬಸ್ಸುಗೌಡ ಚಟ್ನಳ್ಳಿ, ಮಹಾದೇವಪ್ಪ ಕಣೇಕಲ್, ರಾಜಶೇಖರ ಎದುರುಮನಿ, ಭೀಮರಾಯ ಯಲ್ಹೇರಿ, ಮಲ್ಲಿಕಾರ್ಜುನ ಸಾಂಗ್ಲಿಯಾನ, ಬೀರೇಶ ಚಿರತೆನೋರ, ಚಂದ್ರಕಲಾ ಗುತ್ತೇದಾರ, ಮಾಯಾ ನಾಯಕ, ಅನಿಲ್ ಕುಮಾರ ಕರಾಟೆ, ಶಿವರಾಜ ದಾಸನಕೇರಿ, ನಿಂಗಪ್ಪ ಬೀರನಾಳ, ಸಿದ್ದಲಿಂಗಪ್ಪ ನಾಯಕ, ಸಿದ್ದಪ್ಪ ಪೂಜಾರಿ, ದೀಪಕ್ ಒಡೆಯರ್, ಮಂಜುನಾಥ ಬಡಿಗೇರ, ಚಂದ್ರಶೇಖರ ಕಡೇಸೂರ, ಸಾಬು ಹೋರುಂಚಾ, ವೀರೇಶ ಕಡೇಚೂರ, ನಾಗೇಂದ್ರ ರಾಯಚೂರ, ಮಾರ್ಥಾಂಡಪ್ಪ ಮುಷ್ಟೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್ ಇವರಿಗೆ ಮನವಿ ಸಲ್ಲಿಸಲಾಯಿತು.

You Might Also Like

Leave a Reply

Your email address will not be published. Required fields are marked *

Suddi Belaku