ಯಾದಗಿರಿ ಬರ ಘೋಷಣೆ ಫೈನಲ್ ಅಲ್ಲ; ಹಂತಹಂತವಾಗಿ ಬರ ಪೀಡಿತ ಪ್ರದೇಶಗಳ ಘೋಷಣೆ: ಸಚಿವ ಶರಣಪ್ರಕಾಶ ಪಾಟೀಲ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಇಲಾಖೆ ಮಾಹಿತಿ ಹಾಗೂ ಇನ್ನಿತರ ಮೂಲಗಳಿಂದ ಒಂದನೆ ಪಟ್ಟಿಯ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿರುವುದು ಫೈನಲ್ ಅಲ್ಲ, ಇನ್ನು ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಂಭವ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯ ಶಹಾಪುರ ಮಾತ್ರ ಘೋಷಣೆಯಾಗಿರುವ ಕುರಿತು ಜಿಲ್ಲೆಯ ರೈತರು ಆತಂಕ ಪಡುವ ಅಗತ್ಯವಿಲ್ಲ, ಮಧ್ಯಂತರ ಬೆಳೆ ಹಾಗೂ ಸಕಾಲದ ಬೆಳೆಯ ಹಾನಿ ಒಳಗೊಂಡ ವರದಿ ಸಲ್ಲಿಕೆಯಾದ ನಂತರ ಗುರುಮಠಕಲ್ ಸೇರಿದಂತೆ ಯಾದಗಿರಿ ತಾಲೂಕು ಒಳಗೊಂಡ ಇತರೆ ಪ್ರದೇಶಗಳನ್ನು ಬರ ಪೀಡಿತವೆಂದು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು.

ಕಂದಾಯ ಸಚಿವರು ರಾಜ್ಯದ ರೈನ್ ಲೀಜ್ (ಮಳೆ ಸಾಂದ್ರತೆ) ನೋಡಿ ಪ್ರದೇಶಗಳ ಪಟ್ಟಿ ಮಾಡಲಾಗಿದೆ. 101 ತಾಲೂಕುಗಳನ್ನು ಹೊರತಪಡಿಸಿ ಆಯಾ ತಾಲೂಕವಾರು ಬರ ಘೋಷಣೆ ಮಾನದಂಡ ಪ್ರಕಾರ ಹಂತಹಂತವಾಗಿ ಬರ ಪೀಡಿತ ಘೋಷಣೆ ಮಾಡಲಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

You Might Also Like

Leave a Reply

Your email address will not be published. Required fields are marked *

Suddi Belaku