
ಸುದ್ದಿ ಬೆಳಕು ವಾರ್ತೆ
ಯಾದಗಿರಿ: “ಮಹನೀಯರ ತ್ಯಾಗ ಮತ್ತು ಬಲಿದಾನಗಳಿಂದ ಲಭಿಸಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ದೇಶದ ಏಕತೆ ಹಾಗೂ ಅಖಂಡತೆಗೆ ನಾವೆಲ್ಲರೂ ಸದಾ ಬದ್ಧರಾಗಿರಬೇಕು,” ಎಂದು ಬಿಜೆಪಿ ಯಾದಗಿರಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ಕರೆ ನೀಡಿದರು.
ಭಾರತದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. “ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಲ್ಲೂರು ಮಲ್ಲಪ್ಪ, ವಿಶ್ವನಾಥರೆಡ್ಡಿ ಮುದ್ನಾಳ್, ವಿದ್ಯಾಧರ ಗುರೂಜಿ ಸೇರಿದಂತೆ ಅನೇಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ದೇಶದ ಮುಕ್ತಿಗಾಗಿ ಜೈಲುವಾಸ ಅನುಭವಿಸಿ ಅಪಾರ ತ್ಯಾಗ ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿದ ಮಹಾನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನವೂ ಇಂದೇ ಆಗಿರುವುದು ಅತ್ಯಂತ ಸ್ಮರಣೀಯ ಕ್ಷಣ,” ಎಂದು ಸ್ಮರಿಸಿದರು. ಇದೇ ವೇಳೆ ಸಂಗೊಳ್ಳಿ ರಾಯಣ್ಣ ಸೇರಿದಂತೆ ನಾಡಿನ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಹಿರಿಯ ಮುಖಂಡ ವೆಂಕಟರೆಡ್ಡಿ ಮುದ್ನಾಳ್ (ರಾಚಣಗೌಡ), ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ಮುಖಂಡರಾದ ಶರಣಭೂಪಾಲರೆಡ್ಡಿ ನಾಯ್ಕಲ್, ನಾಗರತ್ನ ಕುಪ್ಪಿ, ದೇವೇಂದ್ರನಾಥ ನಾದ, ಲಿಂಗಪ್ಪ ಹತ್ತಿಮನಿ, ರಾಜಶೇಖರ ವಡಿಗೇರಾ, ಸುನೀತಾ ಚವ್ಹಾಣ್, ಹಣಮಂತ ಇಟಗಿ, ತಿರುಪತಿರೆಡ್ಡಿ, ವೆಂಕಟರೆಡ್ಡಿ ಅಬ್ಬೇತುಮಕೂರು, ಮಲ್ಲಿಕಾರ್ಜುನ್ ಕಟ್ಟಿಮನಿ, ರಮೇಶ್ ದೊಡ್ಡಮನಿ, ಕಾಶಿರಾಯ, ಶಿವಣ್ಣ, ಸುರೇಶ್ ಚವ್ಹಾಣ್, ಅನಿಲ್ ಕರಾಟೆ, ಶಿವರಾಜ್ ದಾಸನಕೇರಿ, ಚಂದ್ರಶೇಖರ್ ಕಡೆಸೂರ, ಲಕ್ಷ್ಮೀಪುತ್ರ ಮಾಲಿಪಾಟೀಲ, ವಿಜಯಲಕ್ಷ್ಮಿ ನಾಯಕ, ಭೀಮ್‌ಬಾಯಿ, ರಮಾದೇವಿ ಕವಲಿ, ಶಕುಂತಲಾ ಗುಜ್ಜಲೂರ್, ಶ್ರೀಕಾಂತ್ ಸುಂಗುಲಕರ್ ಸೇರಿದಂತೆ ನಗರಸಭೆಯ ಮಾಜಿ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.












Leave a Reply