
ಸುದ್ದಿ ಬೆಳಕು ವಾರ್ತೆ
ವಡಗೇರಾ: ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ ಅವರ ಸ್ಮರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯಗಿದೆ ಎಂದು ತಹಸೀಲ್ದಾರ್ ಶ್ರೀಮತಿ ಮಂಗಳಾ.ಎಂ ಹೆಳಿದರು.ಪಟ್ಟಣದಲಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 80 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ನಂತರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇಂದಿನ ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಮಹಾನ್ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಅವರನ್ನು ಪ್ರತಿಯೊಬ್ಬರು ಪೂಜಿಸಿ ಗೌರವಿಸಬೇಕು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ನಮ್ಮ ದೇಶ ಶಾಂತಿಯ ಬಿಡು ಸಮಾಜದಲ್ಲಿ ಪ್ರತಿಯೊಬ್ಬರು ಸಹೋದರತ್ವದಿಂದ ಬಾಳಬೇಕು ಹೋರಾಟಗಾರರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಇದೇ ಸಮಯದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಸಂಶನೀಯ ಪತ್ರ ವಿತರಿಸಲಾಯಿತು.ವಿವಿಧ ಶಾಲಾಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ನಶಾ ಮುಕ್ತ ಜಿಲ್ಲೆಗಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಆಶಾ ಮತ್ತು ಅಂಗನವಾಡಿ ಶಿಕ್ಷಣ ಇಲಾಖೆಯವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ಶ್ರೀಧರ್ ಹಿರೇಮಠ, ಶಿರೇಸ್ತೆದಾರ ಸಂಗಮೇಶ ನಾಯಕ್,ಕಂದಾಯ ನಿರೀಕ್ಷಕ ಬಸಯ್ಯಸ್ವಾಮಿ,ಪಟ್ಟಣದ ಮುಖಂಡರು ಮಕ್ಕಳ ತಜ್ಞರಾದ ಡಾ.ಸುಭಾಷ್ ಕರಣಿಗಿ,ಸಿದ್ದಣ್ಣಗೌಡ ಕಾಡಂನೂರ್ ,ಬಾಶೂಮಿಯಾ ನಾಯ್ಕೋಡಿ,ಅಶೂಕ ಸಾಹು ಕರಣಗಿ ,ಮಲ್ಲುಗೌಡ ಪೊಲೀಸ್ ಪಾಟೀಲ್,ಡಾ.ಗಾಳೆಪ್ಪ ಪೂಜಾರಿ,ಬಸವರಾಜ ಸೊನ್ನದ,ಅಶೋಕ್ ಮುಸ್ತಾಜೀರ್,ಡಾ.ಮರೇಪ್ಪ ನಾಟೇಕಾರ,ಹಣಮಂತರಾಯ ಜಡಿ ,ಪ್ರಮೋದ್ ಸ್ವಾಮಿ,ಬಸವರಾಜ್ ನೀಲಹಳ್ಳಿ,ಮರೇಪ್ಪ ಜಡಿ,ಯಂಕಪ್ಪ ಬಸಂತಪುರ,ಶರಣು ಇಟಗಿ,ರುಕ್ಮುದ್ದಿನ್ ದೇವದುರ್ಗ,ಶರಣು,ಸುದೇಪ್ಪ ನೀಲಹಳ್ಳಿ,ಅಬ್ದುಲ್ ಚಿಗನೂರ,ಬಸವರಾಜ್ ಕೊಲ್ಕರ್,ಹೊನ್ನಪ್ಪ,ಮಲ್ಲು ಮಾಗನುರ,ಫಕೀರ ಅಹ್ಮದ್,ತಿಮ್ಮಣ್ಣ,ಬಸನಗೌಡ ಜಡಿ,ಬಸವರಾಜ ಇಟಗಿ,ಮಲ್ಲಣ್ಣ ನೀಲಳ್ಳಿ,ಶರಣು ಮಾತಪಳ್ಳಿ,ಗಂಗಾಧರ್ ವಿಶ್ವಕರ್ಮ,ಅಬ್ದುಲ್ ಖತಾಲಿ,ವಿದ್ಯಾಧರ್ ಜಾಕಾ,ಸಿರಾಜುದ್ದೀನ್ ಕಲ್ಮನಿ,ಉಸ್ಮನ್ ಭಾಷ ತಡಬಿಡಿ, ಬಸವರಾಜ್ ಇಟಗಿ,ದೇವು ಜಡಿ,ಸತೀಶ್,ಶರಿಫ್ ಕುರಿ,ಶಿವಪ್ಪ,ಗುರು ನಾಟೇಕಾರ,ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಅಯ್ಯಪ್ಪ ಬಡಿಗೇರ,ಮುದುಕಪ್ಪ,ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಶ್ರೀದೇವಿ ಹಿರೇಮಠ,ಶ್ರೀಮತಿ ಶಾಂತಾ ಸಜ್ಜನ್,ಮೀನಾಕ್ಷಿ ಮುಸ್ತಾಜೀರ,ತಹಸೀಲ್ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ವಿವಿಧ ಸಂಘಟನೆಯ ಮುಖಂಡರು,ಪಟ್ಟಣದ ಸಾರ್ವಜನಿಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು












Leave a Reply