
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದು, ಸಮಾನತೆಯ ತಳಹದಿಯ ಮೇಲೆ ನಮ್ಮ ರಾಷ್ಟ್ರ ನಿರ್ಮಾಣವಾಗಿದೆ ಎಂದು ವೈ ದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ,ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಭಾರತ ಸಾವಿರಾರು ವರ್ಷಗಳ ನಾಗರಿಕತೆ ಹೊಂದಿರುವ , ಪುಣ್ಯ ಭೂಮಿಯಾಗಿದೆ.ಅನೇಕ,ಸಂತರು, ಶರಣರು ಆಗಿಹೋದ ರಾಷ್ಟ್ರ ನಮ್ಮದಾಗಿದೆ. ಇಂತಹ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ತಮ್ಮ ಅಮೂಲ್ಯ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಜವಾಹರಲಾಲ್ ನೆಹರು
ಸರದಾರ ವಲ್ಲಭಭಾಯಿ ಪಟೇಲ್, ಮೌಲಾನಾ ಆಜಾದ್, ಸುಭಾಷ್ ಚಂದ್ರ ಬೋಸ್,ಭಗತ್ ಸಿಂಗ್, ಚಂದ್ರಶೇಖರ್ ಆಜಾದ್,ರಂತಹ ಹೋರಾಟಗಾರರು ಸರ್ವಸ್ವವನ್ನು ಸಮಾಜದ
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದಾರೆ ಎಂದರು.

ಬಡವರಿಗೆ ನ್ಯಾಯ ಒದಗಿಸಲು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಒದಗಿಸಿದ್ದಾರೆ.ಸಮಾನತೆ ತಳಹದಿಯ ಮೇಲೆ ರಾಷ್ಟ್ರ ನಿರ್ಮಾಣಕ್ಕೆ ನೆರವಾಗಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ. ಸಂವಿಧಾನ ಸರ್ವರ ಹಿತ ಕಾಪಾಡಿದೆ.ಕಳೆದ ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ದೇಶದಲ್ಲಿ ಕಂಡಿದ್ದೇವೆ.ಈ ದಿಸೆಯಲ್ಲಿ ರಾಜ್ಯ ಸರ್ಕಾರ ಜನರಿಗೆ ನೆಮ್ಮದಿ ಬದುಕು ನೀಡಲು ಪಂಚಗ್ಯಾರಂಟಿ ಜಾರಿಗೊಳಿಸಿ ಪ್ರತಿ ವರ್ಷ 52000 ಕೋ.ರೂ ಗಳನ್ನು ಬಡಜನರ ಮನೆಬಾಗಿಲಿಗೆ ತಲುಪಿಸುತ್ತಿದೆ.ಬಡವರ,ರೈತರ ಹಾಗೂಜನ ಸಾಮಾನ್ಯರ ನೆಮ್ಮದಿ ಬದುಕಿಗೆ ನೆರವಾಗಿದೆ ಎಂದು ಹೇಳಿದರು.
ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಮೊದಲ 100 ದಿನಗಳಲ್ಲಿ ಆಡಳಿತ, ಅಭಿವೃದ್ದಿಗೆ ಮಹತ್ವ ನೀಡಿದೆ. ಸುಮಾರು 45 ಯೋಜನೆಗಳನ್ನು ಘೋಷಣೆ ಮಾಡಿದೆ.
ಮುಖ್ಯಮಂತ್ರಿಗಳ ರೈತ ಚೈತನ್ಯ – Digital Agri-tech mission,ಮೂಲಕ ರೈತರಿಗೆ ಚೈತನ್ಯ ನೀಡುವ ಕಾರ್ಯ ಮಾಡುತ್ತಿದೆ.
ರೈತ ಮಿತ್ರ / ಬಡವರ ಬಂಧು – ಯೋಜನೆ ಮೂಲಕ
ಒಂದು ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಮೊತ್ತದಲ್ಲಿ ಶೇ 50 ರ ಸಬ್ಸಿಡಿಯಲ್ಲಿ ಒದಗಿಸಲು ನಿರ್ಣಯಿಸಿದೆ.
ಕೃಷಿ ತೋಟಗಾರಿಗೆ ಮತ್ತು ಸಂಬಂಧಿತ ವಲಯ ರಫ್ತು ಉತ್ತೇಜನ ನೀಡುತ್ತಿದೆ.

ಒಣ ಭೂಮಿ ಕೃಷಿ ನೀತಿ,
ಕರ್ನಾಟಕ ಪ್ರೋಟಿನ್ ಮಿಷನ್,
ಗ್ರಾಮಾನುಭವ – ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯದಂತಹ ವಿನೂತನ ಯೋಜನೆ ನೀಡಿದೆ.
ಯುವ ಯುಗ ಆರಂಭಗೊಂಡಿದೆ. ಯುವ ಕರ್ನಾಟಕ ನಿರ್ಮಾಣದ ದಿಸೆಯಲ್ಲಿ
ಭಾರತ್ ಜೋಡೋ ಯುವಕ ಸಂಘ ಮಿಷನ್ (BJYS) – ಯೋಜನೆ ಘೋಷಿಸಿದ್ದು, ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 6000, ನಗರ ಪ್ರದೇಶಗಳಲ್ಲಿ 4000 ಸಂಘಗಳ ಸ್ಥಾಪನೆ ; ವಾರ್ಷಿಕ ತಲಾ 10 ಲಕ್ಷ ಅನುದಾನದಂತೆ ವಾರ್ಷಿಕ 1000 ಕೋಟಿಗಳ ವೆಚ್ಚ ಮಾಡಿ, ಯುವಕರಲ್ಲಿ ಆರೋಗ್ಯ, ಕೌಶಲ್ಯ, ಸಾಮಾಜಿಕ ಸಾಮರಸ್ಯ ಉತ್ತೇಜನ ನೀಡಲು ಕ್ರಮ ಕೈಗೊಂಡಿದೆ.
ಉದ್ಯೋಗ ನಿಧಿ ಯೋಜನೆಯಡಿ 10 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಜಿಸಿ ನೇಮಕಗೊಳ್ಳುವ ಉದ್ಯೋಗಿಗಳಿಗೆ ಪ್ರತಿ ತಿಂಗಳು ತಲಾ ರೂ. 2500 ರ ಪ್ರೋತ್ಸಾಹ ಧನ. ಇದಕ್ಕಾಗಿ ಪ್ರತಿ ವರ್ಷ 300 ಕೋಟಿ ವೆಚ್ಚ. ಮಾಡಲಾಗುತ್ತಿದೆ.

ಯುವ ಉದ್ಯೋಗ ಸೇತು – ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ.
ಉದ್ಯೋಗ ಸಂಯೋಜಿತ ITI – 100 ಸರ್ಕಾರಿ ITI ಗಳನ್ನು ಕೈಗಾರಿಕೆಗಳೊಂದಿಗೆ ಲಿಂಕ್ ಮಾಡಿ 10,000 ಯುವಕರಿಗೆ ಉದ್ಯೋಗದ ಭರವಸೆ. ನೀಡಲಾಗಿದೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ದಾಖಲಾತಿಯಲ್ಲಿ ಮೀಸಲಾತಿ,
ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಹಬ್ – ಸರ್ಕಾರಿ ಮತ್ತು ಸಿ.ಎಸ್.ಆರ್ ಅನುದಾನದಿಂದ 1000 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ,
ಮುಖ್ಯಮಂತ್ರಿಗಳ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆಯಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ ಮತ್ತು ಕೌನ್ಸಲಿಂಗ್ ಸೇರಿದಂತೆ KPSC/UPSC ಪ್ರೀಲಿಮ್ಸ್ ರಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿ ವ್ಯವಸ್ಥೆ ಮಾಡಲಾಗುತ್ತದೆ.
ಕೈಗಾರಿಕರಣದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆ ಉತ್ತೇಜನ ಪ್ಯಾಕೇಜ್,
ತ್ವರಿತ ತೀರುವಳಿ ಮತ್ತು ಬಂಡವಾಳ ಹೂಡಿಕೆ – 25000 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮತಿ, ಉತ್ಕೃಷ್ಟ ದರ್ಜೆಯ Aerospace ಮತ್ತು Defence ನೀತಿ, ಡಿಜೀಟಲ್ ಕೈಗಾರಿಕೆ ಭೂ ಬ್ಯಾಂಕ್, ಜವಳಿ ನೀತಿ – ಬೆಂಗಳೂರು ಹೊರತುಪಡಿಸಿದ ಪ್ರದೇಶಗಳಲ್ಲಿ ಜವಳಿ ಉದ್ಯಮದ ಸ್ಥಾಪನೆ ಸೇರಿದಂತೆ ರೇಷ್ಮೆ ನೂಲು ಉದ್ಯಮಕ್ಕೆ ಕೈಗಾರಿಕೆ ಮಾನ್ಯತೆ ನೀಡಲಾಗುವುದು.
ಬಳ್ಳಾರಿ ಜೀನ್ಸ್ ಪಾರ್ಕ್, ಶ್ರಮಿಕ ನಿವಾಸ – ಕೆ.ಐ.ಎ.ಡಿ.ಬಿ ವತಿಯಿಂದ ರಿಯಾಯಿತಿ ದರದಲ್ಲಿ ಹೆಚ್ಚುವರಿ ಭೂಮಿ ನೀಡಿ ಉದ್ಯೋಗಿಗಳಿಗೆ ಕೈಗಾರಿಕೆ ಸಮಿಪದಲ್ಲಿಯೇ ವಸತಿ ನಿರ್ಮಾಣಕ್ಕೆ ಅವಕಾಶ,
ಕೃತಕ ಬುದ್ದಿಮತೆ ಚೌಕಟ್ಟು – ದೇಶದ ಎ.ಐ ರಾಜಧಾನಿಯಾಗಿ ರೂಪಿಸಲು ಹಲವು ಉಪ ಕ್ರಮಗಳು (6ನೇ ತರಗತಿಯಿಂದಲೇ ಎ.ಐ ಬಗ್ಗೆ ಪಠ್ಯಕ್ರಮ ಸೇರಿದಂತೆ), ಹಸಿರು ದತ್ತಾಂಶ ಕೇಂದ್ರ ನೀತಿ, ಕರ್ನಾಟಕ ಡ್ರೋನ್ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ, ವಿದ್ಯುತ್ ಚಾಲಿತ ವಾಹನಗಳ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ, ಎಲ್ಲರಿಗೂ ಆರೋಗ್ಯ – ಜಿಲ್ಲಾ ಮತ್ತು ತಾಲ್ಲೂಕು ಅಸ್ಪತ್ರೆಗಳ ಬಲವರ್ದನೆ ಮತ್ತು ಅವಶ್ಯ ಹುದ್ದೆಗಳನ್ನು 1 ವರ್ಷದಲ್ಲಿ ಭರ್ತಿ ಮಾಡುವ ಉದ್ದೇಶ ಹೊಂದಲಾಗಿದೆ.
100 ತಾಲ್ಲೂಕು ಅಸ್ಪತ್ರೆಗಳಲ್ಲಿ ರೋಗ ಪತ್ತೆಹಚ್ಚುವಿಕೆ, ಡೀಜಿಟಲ್ ಎಕ್ಸ್‌ರೇ ಮತ್ತು ಲ್ಯಾಬ್‌ಗಳ ವ್ಯವಸ್ಥೆ,
ಖಾಸಗಿ ಸಹಭಾಗಿತ್ವದಲ್ಲಿ ಕರ್ನಾಟಕ ವಿಶೇಷ ಆರೈಕೆ ತಂತ್ರಜ್ಞಾನ ಗ್ರಿಡ್ ಸ್ಥಾಪನೆ, ತಾಲ್ಲೂಕು ಅಸ್ಪತ್ರೆಗಳಲ್ಲಿ ಟೆಲಿ-ಐ.ಸಿ.ಯೂ ವ್ಯವಸ್ಥೆ, ಸರ್ಕಾರಿ ಅಸ್ಪತ್ರೆಗಳ ದತ್ತು ಯೋಜನೆ – ರಾಜ್ಯದ ಮೆಡಿಕಲ್ ಕಾಲೇಜುಗಳು CHC and PHC ಗಳಿಗೆ ಅವಶ್ಯಕ ಮಾನವ ಸಂಪನ್ಮೂಲ ಒದಗಿಸಲು ಉತ್ತೇಜನ ನೀಡಲು ಉದ್ದೇಶಿಸಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ – ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ ಅಸ್ಪತ್ರೆಗಳನ್ನು ಬಳಕೆ ಮಾಡಿಕೊಂಡು ಮೆಡಿಕಲ್ ಕಾಲೇಜುಗಳ ಸ್ಥಾಪನೆ.
ನಶೆ ಮುಕ್ತ ಕರ್ನಾಟಕ –
RISE Karnataka (Refuse, Inform, Support and Empower) ಯುವಕರಲ್ಲಿ ಜಾಗೃತಿ ಮೂಡಿಸಿ ತ್ಯಜಿಸುವಿಕೆ, ತಿಳಿಸು, ಬೆಂಬಲ ಮತ್ತು ಸಬಲೀಕರಣ ಉಪಕ್ರಮಗಳ ಮೂಲಕ ನಶೆ ಪದಾರ್ಥಗಳ ವ್ಯಸನ ಮುಕ್ತಗೊಳಿಸಲು ಕ್ರಮ ವಹಿಸಲಾಗುತ್ತಿದೆ.
ಬೇಡ ಬ್ರೋ ಅಭಿಯಾನ
ಶಾಲೆ ಕಾಲೇಜುಗಳ ವಿದ್ಯಾರ್ಥಿಗಳ ನಡವಳಿಕೆ, ಆರೋಗ್ಯಕರ ಜೀವನ ಶೈಲಿ ಉತ್ತೇಜನಕ್ಕೆ ಅಭಿಯಾನ.
ಆರೋಗ್ಯ ಸ್ಪಂದನ – ಪರಿಣಾಮಕಾರಿ ಮತ್ತು ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿ ತುರ್ತು ವೈದ್ಯಕೀಯ ಸೇವೆಗಳು ಸಕಾಲದಲ್ಲಿ ದೊರಕುವಂತೆ ಮಾಡುವುದು.
ಶುದ್ದ ಗಾಳಿ ಸ್ವಾಸ್ಥ ಕರ್ನಾಟಕ – ರಾಜ್ಯದಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಹಳೆಯ ಜನರೇಟರ್ ಮತ್ತು ಡೀಸೆಲ್ ವಾಹನಗಳಿಗೆ ರೆಟ್ರೋ ಫಿಟಿಂಗ್ ಉಪಕರಣಗಳ ಅಳವಡಿಕೆ.
ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ನೀತಿ, 5 ಪ್ರಮುಖ ಪ್ರವಾಸೋದ್ಯಮ ಯೋಜನೆಗಳು ,
ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ – ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳಲ್ಲಿ ಎ ದರ್ಜೆಯ ಐ.ಟಿ ಮೂಲಸೌಕರ್ಯ ಮತ್ತು ಇತರೆ ವ್ಯವಸ್ಥೆಗಳೊಂದಿಗೆ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
ಪ್ರಜಾಸೇವೆ ಇಲಾಖೆ – ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತ್ಯೇಕ ಇಲಾಖೆ ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸ್ಪಂದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸೇವೆ ಒನ್ – ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಒಂದು ಎ.ಐ ಚಾಲಿತ ಜಾಲತಾಣದ ಮೂಲಕ ಒದಗಿಸುವುದು.
ಕರ್ನಾಟಕ ಕೃತಕಬುದ್ದಿಮತೆ ಎಕ್ಸ್‌ಚೆಂಜ್, ಭೂ ಗ್ಯಾರೆಂಟಿ – ರಾಜ್ಯದ ಎಲ್ಲಾ ಕೃಷಿಯೇತರ ಸ್ವತುಗಳಿಗೆ ಇ-ಖಾತೆ ಸೇರಿದಂತೆ ಸಮಗ್ರ ಡೀಜಿಟಲ್ ಆರ್.ಟಿ.ಸಿ ಗಳು ಮತ್ತು ಅರ್ಹ ಬಿ-ಖಾತೆಗಳನ್ನು ಎ- ಖಾತೆಗಳಾಗಿ ಪರಿರ್ವತಿಸಿ ಭೂಮಾಲೀಕತ್ವದ ಹಕ್ಕುಗಳನ್ನು ಖಾತ್ರಿಪಡಿಸಿ ವ್ಯಾಜಗಳನ್ನು ಕಡಿಮೆ ಮಾಡಲಾಗುವುದು.
ಒನ್ ಬೆಂಗಳೂರು Mobility App – ಬೆಂಗಳೂರಿನ ಮೆಟ್ರೋ, ಬಿ.ಎಂ.ಟಿ.ಸಿ ಸೇರಿದಂತೆ ವಿವಿಧ ಸಮೂಹ ಸಾರಿಗೆಗಳ ಸಂಚಾರವನ್ನು ಏಕೀಕೃತ App ಮೂಲಕ ನಿರ್ವಹಣೆ.
ಕರ್ನಾಟಕ ಒನ್ Mobility App – ರಾಜ್ಯದ್ಯಂತ ವಿವಿಧ ಸಾರಿಗೆ ನಿಗಮಗಳ ಬಸ್ ಸಂಚಾರ ನಿರ್ವಹಣೆಗೆ ಏಕೀಕೃತ App, ಕರ್ನಾಟಕ ಮೊಬಿಲಿಟಿ ಗ್ರೀಡ್ ಮಿಷನ್ – ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ರಿಂಗ್ ರಸ್ತೆ, ಬೈಪಾಸ್ ಸೇರಿದಂತೆ ಸಂಚಾರ ದಟ್ಟಣೆ ಕಡಿಮೆ ಮಾಡುವ ಉಪಕ್ರಮಗಳನ್ನು ಕೈಗೊಳ್ಳಲು ಅಭಿವೃದ್ದಿ ವಲಯಗಳ ಅಧಿಸೂಚನೆ ಮಾಡಲಾಗುವುದು. ಇದರಿಂದ ನಗರಗಳ ಯೋಜಿತ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದರು.
ತೇಗದ ಸಿರಿ – ವಾಣಿಜ್ಯ ಮೌಲ್ಯವುಳ್ಳ ತೇಗ ಸೇರಿದಂತೆ ಇತರೆ ಮರಗಳನ್ನು ಜಮೀನಿ ಮಾಲೀಕರು, ಅವರ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಜಾಗಗಳಲ್ಲಿ ಬೆಳಸಲು ಪ್ರೋತ್ಸಾಹ. ಸದರಿ ಮರಗಳ ಮಾರಾಟದಿಂದ ಬರುವ ರಾಜಸ್ವದ ಶೇಕಡ 70 ರಷ್ಟು ಭೂ ಮಾಲೀಕರಿಗೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ಜಿ.ಕುಮಾರನಾಯಕ್, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ್ ಚಿಂಚನಸೂರ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ, ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್,ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಚಿವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯಿಂದ ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಲ್ಯಾಪ್ ಟಾಪ್ ಹಾಗೂ ಡಿಜಿಟಲ್ ಕ್ಯಾಮೆರಾ ವಿತರಿಸಿದರು. ಅತೀ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.












Leave a Reply