ವೀರನಿಕೇತನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಹಣಮಂತರಡ್ಡಿ ಮುದ್ನಾಳ ಅವರಿಂದ ಧ್ವಜಾರೋಹಣ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದ ವೀರನಿಕೇತನ (ರಡ್ಡಿಸಾಬ್ ಗೋದಾಮು) ಆವರಣದಲ್ಲಿ ಶನಿವಾರ ಬಸವ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಹಣಮಂತರಡ್ಡಿ ಮುದ್ನಾಳ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಬೆಂಬಲವೇ ನಮ್ಮ ಮುದ್ನಾಳ ಅಭಿಮಾನಿ ಬಳಗದ ಶಕ್ತಿಯಾಗಿದೆ. ನಮ್ಮ ಕುಟುಂಬದ ಮೇಲಿನ ನಿಮ್ಮೆಲ್ಲರ ಅಭಿಮಾನಕ್ಕೆ ನಮ್ಮ ಕುಟುಂಬದ ಎಲ್ಲ ಸದಸ್ಯರು ಯಾವಾಗಲೂ ಚಿರಋಣಿಯಾಗಿರುತ್ತೇವೆ” ಎಂದು ನೆರೆದಿದ್ದ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ರಾಚಣ್ಣಗೌಡ ಮುದ್ನಾಳ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಪ್ರಮುಖರಾದ ಖಂಡಪ್ಪ ದಾಸನ, ಶರಣಗೌಡ ಬಾಡಿಯಾಳ, ಲಿಂಗಪ್ಪ ಹತ್ತಿಮನಿ, ರಾಮರೆಡ್ಡಿಗೌಡ ಹೆಡಗಿಮದ್ರಿ, ಬಸವರಾಜ ಚಿಕ್ಕಬುದುರ, ಡಾ. ಶರಣರೆಡ್ಡಿ ಕೊಡ್ಲಾ, ಬಸವರಾಜಪ್ಪ ಮೊಟ್ನಹಳ್ಳಿ, ರಾಜಶೇಖರಯ್ಯ ಸ್ವಾಮಿ, ರಮೇಶ ದೊಡ್ಡಮನಿ, ರವಿ ಭಾಪೂರೆ, ಚನ್ನಬಸರೆಡ್ಡಿ ಠಾಣಗುಂದಿ, ನಿಂಗಪ್ಪ ತಳಕ, ಶಂಕರ್ ಗೋಸಿ, ಶಾಂತಗೌಡ ಪಗ್ಲಾಪುರ, ಸುರೇಶ ಹಾಲಕಳ, ಗೋಪಾಲ ದಾಸಂಕೇರಿ, ಸುಭಾಷ್ ಮಾಲಿಕೇರಿ, ದೇವಿದ್ರಪ್ಪ ಯರಗೋಳ, ಹಾಗೂ ಮಹಿಳಾ ಮುಖಂಡರಾದ ಶ್ರೀಮತಿ ಸುನಿತಾ ಚವ್ಹಾಣ್, ಭೀಮಬಾಯಿ ಸೆಂಡಗಿ, ವಿಜಯಲಕ್ಷ್ಮಿ, ಶಕುಂತಲ ಉಪಸ್ಥಿತರಿದ್ದರು.

ಜೊತೆಗೆ ಮುದ್ನಾಳ ಹಾಗೂ ವೆಂಕಟರೆಡ್ಡಿ ಅವರ ಅಪಾರ ಅಭಿಮಾನಿಗಳು, ಎಂ.ಆರ್.ಎಂ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಿದರು.

You Might Also Like

Leave a Reply

Your email address will not be published. Required fields are marked *

Suddi Belaku