
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಪ್ರತಿ ವರ್ಷದಂತೆ ಈ ವರ್ಷವೂ ನಡೆದ ತೆರಿಗೆ ಸಲಹೆಗಾರರ ಸಮ್ಮೇಳನದಲ್ಲಿ ಯಾದಗಿರಿ ಹಿರಿಯ ಸಲಹೆಗಾರರನ್ನು ಗುರುತಿಸಿ ಸನ್ಮಾನಗೈದ ವೇದಿಕೆಯ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ನಾಗಪ್ಪ ಮೊಗದಂಪೂರ್ ಇತ್ತೀಚಿಗೆ ಕೋಲಾರ ಜಿಲ್ಲೆ ಅಜ್ಜಪ್ಪನಹಳ್ಳಿಯಲ್ಲಿ 2026-27 ಸಾಲಿನ ರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಸತತವಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾದಗಿರಿ ಜಿಲ್ಲೆಯ ಹಿರಿಯರು ಹಾಗೂ ಖಜಾಂಚಿ ಆಗಿರುವ ಪ್ರವೀಣ್ ಕುಮಾರ್ ಅವರಿಗೆ ಈ ವರ್ಷದ ಹಿರಿಯ ನಾಗರಿಕರ ಸನ್ಮಾನ ಸಿಕ್ಕಿದ್ದು ಸಂತಸವಾಗಿದೆ ಹಲವು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ, ತೆರಿಗೆಗಾರರಿಗೆ ತಮ್ಮದೇ ಮಾರ್ಗದರ್ಶನ ನೀಡಿದ ಪ್ರವೀಣ್ ಕುಮಾರ್ ವಿಭೂತಿ ಅವರಿಗೆ ವೇದಿಕೆ ಗುರುತಿಸಿ ಸನ್ಮಾನ ನೀಡಿದ್ದು ಜಿಲ್ಲೆಗೆ ಸಂತಸದ ವಿಷವಾಗಿದೆ ಎಂದರು.
ಈ ವೇಳೆಯಲ್ಲಿ ಅರುಣ್ ಕುಮಾರ್ ಬೊಪ್ಲೆ,ಕಾರ್ಯದರ್ಶಿ ಆನಂದ ಕುಮಾರ್ ಜೈನ್ ಸೇರಿದಂತೆ ಇನ್ನಿತರ ಸದಸ್ಯರು ಭಾಗವಹಿಸಿದ್ದರು.











Leave a Reply