ನಗರಸಭೆ ಪಕ್ಕದ ಕಸದ ತಿಪ್ಪೆ ತೆರವುಗೊಳಿಸಿ ನೈರ್ಮಲ್ಯ ಕಾಪಾಡಿ: ವಿಶ್ವನಾಥ ನಾಯಕ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ನಗರಸಭೆ ಕಾರ್ಯಾಲಯದ ಪಕ್ಕದಲ್ಲಿ ಕೂಡು ರಸ್ತೆಯ ಮೂಲೆಯ ಮೇಲೆ ಕಸವನ್ನು ತಂದು ಹಾಕುತ್ತಿದ್ದು, ಇದರಿಂದ ಅಲ್ಲಿನ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಕೆಟ್ಟ ವಾಸನೆಯಿಂದ ತೊಂದರೆ ಆಗುತ್ತಿದ್ದು, ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ, ಕೂಡಲೇ ಕ್ರಮ ಕೈಗೊಂಡು ನಗರಸಭೆಯ ಪಕ್ಕದಿಂದ ಡಿಸಿ ಕಚೇರಿಗೆ ತೆರಳುವ ರಸ್ತೆಯ ಕೂಡುರಸ್ತೆಯ ಮೂಲೆಯ ಮೇಲೆ ಎಲ್ಲರೂ ಕಸ ತಂದು ಹಾಕುತ್ತಿರುವುದರಿಂದ ಇಡಿ ಪ್ರದೇಶವೇ ಗಬ್ಬೆದ್ದು ನಾರುತ್ತಿದೆ.


ನಗರಸಭೆ ಕಾರ್ಯಾಲಯದ ಪಕ್ಕದ ರಸ್ತೆಯ ಅತ್ತಬದಿಯಲ್ಲಿ ಶಾಲೆಯ ಕಾಂಪೌಡ್ ಹತ್ತಿಕೊಂಡಿದೆ. ಇದಕ್ಕೊ ಹೊಂದಿಕೊAಡಿರುವ ಮೂಲೆಯಯ್ಲಿಯೇ ಕಸದ ರಾಶಿ ಹಾಕುತ್ತಿದ್ದು, ಆದರೆ ನಗರಸಭೆಯಿಂದ ಸದರಿ ಕಸವನ್ನು ವಿಲೇವಾರಿ ಮಾಡದೇ ಇರುವುದರಿಂದ ಕಸದ ರಾಶಿಯಿಂದ ಕೆಟ್ಟ ವಾಸನೆ ಬಂದು ಇಲ್ಲಿನ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದ್ದು, ಕೆಟ್ಟ ವಾಸನೆಯಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ರೋಗ ರೋಗ ಹರಡುವ ಭೀತಿ ಮತ್ತು ಆಶ್ರಿತ ರೋಗಗಳು ಹರಡುವ ಸಂಭವವಿದೆ.

ಕೂಡಲೇ ನಗರಸಭೆ ಕ್ರಮ ಕೈಗೊಂಡು ಸ್ವಚ್ಚತೆಗೊಳಿಸಿ. ಕಸದ ರಾಶಿ ಹಾಕದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಪೌರಾಯುಕ್ತ ಉಮೇಶ ಚವ್ಹಾಣ ಸೂಕ್ತ ಕ್ರಮದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮಗದಂಪೂರ, ಮುಖಂಡರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಗುತ್ತೇದಾರ, ಮಲ್ಲಿಕಾರ್ಜುನ ದೇವದುರ್ಗ, ತಾಲ್ಲೂಕು ಅದ್ಯಕ್ಷ ನರೇಶ ಹೊಸಳ್ಳಿ, ವಿಶಾಲ್ ಕೌಳೂರು, ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ನಾಗೇಶ ಗದ್ದಿಗಿ, ಸಿದ್ದು ಇಬ್ರಾಹಿಂಪೂರ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

Suddi Belaku