
ಸುದ್ದಿ ಬೆಳಕು ವಾರ್ತೆ
ಶಹಾಪುರ: ಸಮಾಜದ ಅಮೂಲ್ಯ ಆಸ್ತಿಯಾಗಿರುವ ಹಿರಿಯ ನಾಗರಿಕರ ರಕ್ಷಣೆ ಮತ್ತು ಅವರ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರೂ ಪ್ರಥಮ ರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕರ್ಯರ್ಶಿಗಳಾದ ಶ್ರೀಮತಿ ಸುಪ್ರಿಯಾ ನವಲೆ ಅವರು ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕ ಪಂಚಾಯತ ಶಹಾಪುರ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಇವರ ಆಶ್ರಯದಲ್ಲಿ ಆ.೦೭ರಂದು ಶಹಾಪುರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಹಿರಯ ನಾಗರಿಕರಿಗಾಗಿ ನಡೆದ ಕಾನೂನು ಅರಿವು ನೆರವು ಕರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರಿಗಾಗಿ ಪಾಲಕರ ಪೋಷಣೆ, ಸಂರಕ್ಷಣೆ ಮಾಡಲು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-೨೦೦೭ಅನ್ನು ಜಾರಿಗೊಳಿಸಿದೆ. ಹಿರಿಯ ನಾಗರಿಕರು ನಮಗೆ ಮರ್ಗರ್ಶಕರು, ಎಲ್ಲರೂ ಮನುಷತ್ವದ ಗುಣ ಬೆಳೆಸಿಕೊಂಡು ಹಿರಯರನ್ನು ಗೌರವಿಸಬೇಕು. ಮಕ್ಕಳಿಂದ ತಮ್ಮ ಜೀವನ ನರ್ವಹಣೆಯನ್ನು ಭಯಸುವುದು ಪಾಲಕರ ಕಾನೂನುಬದ್ಧ ಹಕ್ಕು. ಸಮಾಜವು ಕೂಡ ಹಿರಿಯ ನಾಗರಿಕರ ಬಗ್ಗೆ ಸಹಾನುಭೂತಿ ತೋರಬೇಕು ಎಂದರು,
ಮಕ್ಕಳಿಂದ ಪಾಲಕರ ನರ್ವಹಣೆಯ ಬಗ್ಗೆ ಸಮಸ್ಯೆಗಳಾದರೆ ಉಪವಿಭಾಗ ಅಧಿಕಾರಿಗಳಿಗೆ ದೂರು ನೀಡಬೇಕು. ಒಂದು ವೇಳೆ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ದಾನಪತ್ರದ ಮೂಲಕ ಮಕ್ಕಳಿಗೆ ರ್ಗಾಯಿಸಿದ್ದು, ಮಕ್ಕಳು ಪಾಲಕರ ನರ್ವಹಣೆಯನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ದಾನಪತ್ರವನ್ನು ರದ್ದುಪಡಿಸಿ ಆಸ್ತಿಯನ್ನು ಮರಳಿ ಪಾಲಕರ ಹೆಸರಿಗೆ ರ್ಗಾಯಿಸಬಹುದಾಗಿದೆ. ಪಾಲಕರು ಯಾವುದೇ ಕಾರಣಕ್ಕೂ ತಮ್ಮ ಜೀವನಮಾನದ ಗಳಿಕೆಯನ್ನು ಕಳೆದುಕೊಂಡು ಇನ್ನೊಬ್ಬರ ಮುಂದೆ ಕೈಯೊಡ್ಡಬಾರದು ಎಂದು ಹೇಳಿದರು.
ಶಹಾಪುರ ತಾಲೂಕ ಪಂಚಾಯಿತಿ ಕರ್ಯನರ್ವಾಹಕ ಅಧಿಕಾರಿಗಳಾದ ಶ್ರೀ ಬಸವರಾಜ ಶರಭೈ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಹಿರಿಯರಿಗೆ ಪ್ರೀತಿ, ಸಹಾನುಭೂತಿ ಸಿಗುತ್ತಿಲ್ಲ, ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಹಿರಿಯರ ಕಡೆಗಣನೆ ಸಾಮಾನ್ಯವಾಗಿದೆ, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದನ್ನು ತಡೆಗಟ್ಟುವುದು ಯುವ ಪೀಳಿಗೆಯ ಜವ್ದಾರಿಯಾಗಿದೆ. ವಯಸ್ಸಾದವರಿಗೆ ಪ್ರೀತಿ ವಿಶ್ವಾಸ ಹಾಗೂ ಗೌರವ ನೀಡಿದರೆ ಅವರ ಜೀವನ ನೆಮ್ಮದಿಯಾಗಿ ಇರಲಿದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀ ಶರಣಪ್ಪ ಪಾಟೀಲ್ ಅವರು ಮಾತನಾಡಿ, ಹಿರಿಯ ನಾಗರಿಕರ ರಕ್ಷಣೆ, ಪಾಲನೆ ಪೋಷಣೆ ನಮ್ಮೆಲ್ಲರ ರ್ತವ್ಯ ಹಿರಿಯ ನಾಗರಿಕರಿಗೆ ರ್ಥಕ ದೈಹಿಕ, ಮಾನಸಿಕ ಮತ್ತು ವೈದ್ಯಕೀಯ ಆರೋಗ್ಯದ ಅಗತ್ಯತೆ ಇತರರಿಗಿಂದ ಹೆಚ್ಚಿರುತ್ತವೆ. ಹೀಗಾಗಿ, ಹಿರಿಯ ನಾಗರಿಕರ ಸಮಸ್ಯೆಗಳನ್ನು ರ್ಥ ಮಾಡಿಕೊಳ್ಳುವ ಜತೆಗೆ ಅವರ ಅವಶ್ಯಕತೆಗಳನ್ನು ಪೂರೈಸಿ ಗೌರವಯುತ ಬದುಕು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಿರಿಯ ನಾಗರಿಕರಿಗಾಗಿ ಜಾರಿಯಾಗಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕರ್ಯಗಾರಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಹೇಳಿದರು.
ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕ ಅಧ್ಯಕ್ಷ ಎನ್ ಸಿ ಪಾಟೀಲ ಅವರು ಮಾತನಾಡಿ, ೬೦ ರ್ಷ ದಾಟಿದ ಮೇಲೆ ಸಾಮಾನ್ಯವಾಗಿ ಸಮಾಜದಲ್ಲಿ ಅರಳು ಮರಳು ಎಂದು ಹಿರಯರನ್ನು ಗುರುತಿಸುತ್ತಾರೆ, ಆದು ಅರಳು ಮರಳು ಅಲ್ಲ, ಮರಳಿ ಅರಳಿದ ಯೌವನ. ಮಕ್ಕಳು ಮನೆಯಿಂದ ಹೊರ ಹಾಕುವ ಸಂರ್ಭದ ಬಗ್ಗೆ ಜಾಗೂರುಕರಾಗಿರಬೇಕು ಎಂದು ತಿಳಿಸಿದರು.
ಈ ವೇಳೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಸಿದ್ದಣ್ಣಗೌಡ, ಪ್ಯಾನಲ್ ವಕೀಲರಾದ ಶ್ರೀಮತಿ ಬಿ ಪಾತೀಮಾ, ವಕೀಲರಾದ ಶ್ರೀ ಸುಭಾಷ್ ರಾಂಪೂರಕರ್, ತಾಲೂಕ ಪುರ್ವಸತಿ ಕರ್ಯರ್ತ ನಾಗರಾಜ, ಗ್ರಾಮೀಣ ನಗರ ಪುರ್ವಸತಿ ಕರ್ಯರ್ತರು, ತಾಲೂಕ ಅಂಗವಿಕಲರ ಹೋರಾಟ ಸಮಿತಿ ಅಧ್ಯಕ್ಷ ಸಾಹೇಬ್ ಜಾನಿ, ಹಿರಿಯ ನಾಗರಿಕರು, ವಿಕಲಚೇತನರು, ಎಪಿಡಿ ಸಂಸ್ಥೆಯ ಪ್ರತಿನಿಧಿಗಳು ಹಾಗೂ ತಾಲೂಕ ಪಂಚಾಯಿತಿ ಸಿಬ್ಬಂದಿ ಇದ್ದರು.











Leave a Reply