ಯಾದಗಿರಿಯಲ್ಲಿ ವಿಷಕಾರಿ ದುಬೈ ಮರಗಳ ತೆರವು ಆರಂಭ: ಜಯ ಕರ್ನಾಟಕ ಮನವಿಗೆ ಅರಣ್ಯ ಇಲಾಖೆ ಸ್ಪಂದನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರ ಸೌಂದರೀಕರಣ ಹೆಸರಲ್ಲಿ ಸರ್ಕಾರದ ಬೊಕ್ಕಸ ಹಾಳು ಮಾಡಿ ಮುಖ್ಯ ರಸ್ತೆ ವಿಭಜಕ ಮದ್ಯದಲ್ಲಿ ನೆಟ್ಟಿದ್ದ ವಿಷಕಾರುವ ದುಬೈ ಗಿಡಗಳನ್ನು ನೆಲಸಮ ಮಾಡುವ ಕಾರ್ಯಕ್ಕೆ ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಕಾರ್ಯಾರಂಭ ಮಾಡಿದೆ.

ಇಲ್ಲಿನ ಗಂಜ್ ವೃತ್ತದಿಂದ ಗಿಡಗಳ ತೆರವು ಪ್ರಾರಂಭವಾಗಿದ್ದು, ಶೀಘ್ರ ನಗರದ ಎಲ್ಲ ದುಬೈ ವಿಷ ವೃಕ್ಷಗಳ ಕಡಿದು ಹಾಕುವುದಾಗಿ ಇಲಾಖೆ ತಿಳಿಸಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿಎನ್. ವಿಶ್ವನಾಥ ನಾಯಕ ತಿಳಿಸಿದ್ದಾರೆ.

ಈ ಕುರಿತು ಗಿಡಗಳ ಕಟಾವು ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಹೇಳಿಕೆ ನೀಡಿರುವ ಅವರು, ಈ ವಿಷಯಕಾರುವ ದುಬೈ ಗಿಡಗಳನ್ನು ಸೌಂದರ್ಯಿಕರಣದ ಹೆಸರಿನಲ್ಲಿ ಸರ್ಕಾರವೇ ಬೊಕ್ಕಸದ ಹಣ ಹಾಳು ಮಾಡಿ ನೆಟ್ಟಿತ್ತು. ನಂತರ ನಮ್ಮ ಸಂಘಟನೆ ಗಮನಕ್ಕೆ ಬಂದ ಕೂಡಲೇ ಇಲಾಖೆಗೆ ಒತ್ತಾಯ ಮಾಡಿದ್ದನ್ನು ಪರಿಗಣಿಸಿದ ಅರಣ್ಯ ಇಲಾಖೆ ಈ ವಿಷವೃಕ್ಷಗಳ ಕಡಿತಕ್ಕೆ ಮುಂದಾಗಿರುವುದು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಆಮ್ಲಜನಕ ಕೊಡುವ ಜನ ಆರೋಗ್ಯದ ಹಿತ ದೃಷ್ಟಿಯಿಂದ ನಗರದ ಸೌಂದರ್ಯಿಕರಣ ಮಾಡಬೇಕು ಆದರೆ ಸಂಬAಧಿಸಿದ ಇಲಾಖೆಯವರು ಅದ್ಯಾವ ಕಾರಣಕ್ಕೆ ವಿಷ ವೃಕ್ಷಗಳನ್ನು ನೆಟ್ಟು ಜನರಿಗೆ ಅನ್ಯಾಯ ಮಾಡಿದರೋ ಗೊತ್ತಿಲ್ಲ. ಆದರೆ ನಮ್ಮ ಸಂಘಟನೆ ಮನವಿ ಮಾಡಿದ ಕೂಡಲೇ ಅರಣ್ಯ ಅಧಿಕಾರಿಗಳು ತಡವಾಗಿಯಾದರೂ ಮಹತ್ವದ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ, ಮತ್ತು ಇದು ಜಯ ಕರ್ನಾಟಕ ಸಂಘಟನೆ ಸಾರ್ವಜನಿಕgರು ಕನ್ನಡಿಗರ ಆರೋಗ್ಯಕರ ಹಿತದೃಷ್ಟಿಯಿಂದ ಮಾಡಿದ ಕೆಲಸಕ್ಕೆ ಸಂದ ಗೌರವ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ. ಎನ್. ವಿಶ್ವನಾಥ್ ನಾಯಕ್ ಹೇಳಿದರು.

ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಲ್ಲಿ, ರಸ್ತೆ ವಿಭಜಕಗಳು ಸೇರಿದಂತೆ ಅಲ್ಲಲ್ಲಿ ನೆಟ್ಟಿರುವ ಗಿಡಗಳ ಬಗ್ಗೆ ಈ ಹಿಂದೆ ಜಯ ಕರ್ನಾಟಕ ಸಂಘಟನೆಯು ಹಲವು ಬಾರಿ ಸಂಬAಧಪಟ್ಟ ಅರಣ್ಯ ಅಧಿಕಾರಿ ವರ್ಗಗಳ ಕಚೇರಿಗಳಿಗೆ ತೆರಳಿ ವಿಷಕಾರಿ ದುಬೈ ಗಿಡಗಳನ್ನು ನೆಡುವುದನ್ನು ಖಂಡಿಸಿ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿತ್ತು ಇಂತಹ ಗಿಡಗಳು ಮಾಲಿನ್ಯ ಹರಡಿ ವಿಷಕಾರಿ ಅಶುದ್ಧ ಗಾಳಿಯನ್ನು ಸ್ವಚ್ಚ ಪರಿಸರಕ್ಕೆ ಹರಡಿ ಇದರಿಂದ ಸಾರ್ವಜನಿಕರು ವಿಷಕಾರಿ ಗಿಡಗಳಿಂದ ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಲಕ್ಷಣಗಳಿಂದ ಕೂಡಿದೆ ದುಬೈ ಗಿಡಗಳನ್ನು ನೆಡುವ ಕೆಲಸ ಅವೈಜ್ಞಾನಿಕವಾಗಿದೆ ಎಂದು ಮನವಿ ಮಾಡಲಾಗಿತ್ತು ಮತ್ತು ಈ ಸುದ್ದಿಯು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು ಎಂದರು.

ಬೇರೆ ರಾಜ್ಯಗಳಲ್ಲಿ ಇಂತಹ ಸಸಿಗಳಿಂದ ಅಸ್ತಮಾ, ಶ್ವಾಸಕೋಶಗಳ ಸಮಸ್ಯೆಗಳು ಸೇರಿದಂತೆ ಇನ್ನಿತರ ಅನಾರೋಗ್ಯಕರ ಸಮಸ್ಯೆಗಳು ಹುಟ್ಟಿಕೊಂಡು ಕ್ಯಾನ್ಸರ್ ಬರುತ್ತದೆ ಎಂದು ಈಗಾಗಲೇ ಸಾಬೀತಾಗಿದೆ ಎಂದು ಈ ಮೊದಲೇ ಗಮನಕ್ಕೆ ತಂದಿದ್ದು, ಜಿಲ್ಲೆಯ ಸುರಪುರ, ಶಹಾಪೂರ, ವಡಗೇರಾ,ಗುರುಮಠಕಲ್, ಹುಣಸಗಿ ನಗರಗಳಲ್ಲಿ ಹಾಗೂ ಮುಖ್ಯವಾಗಿ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಶೇ. 90 ರಷ್ಟು ಇದೇ ಗಿಡಗಳು ನೆಟ್ಟಿದ್ದಾರೆ.
ಅವುಗಳನ್ನು ಸಹಾ ಕಡಿದುಹಾಕುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡಬೇಕು, ಒಂದು ವೇಳೆ ಗಿಡಗಳನ್ನು ನೆಡುವುದೇ ಆದರೆ ಒಳ್ಳೆ ಆಮ್ಲಜನಕ ಕೊಡುವ ಸಸಿಗಳನ್ನು ಸುಂದರ ಹೂ,ಮತ್ತು ಹಣ್ಣು ನೀಡುವ ಸಸಿಗಳನ್ನು ನೆಡುವಂತೆ ಒತ್ತಾಯಿಸಿದರು.

ಈ ವೇಳೆಯಲ್ಲಿ ಗಸ್ತು ಅರಣ್ಯ ಪಾಲಕ ಲಿಂಗರಾಜ್ ದಳವಾಯಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಮಲ್ಲಿಕಾರ್ಜುನ ನಾಯಕ್ ದೇವದುರ್ಗ, ರಾಮಣ್ಣ ಬಾಗ್ಲಿ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

Suddi Belaku