ಕ್ರಿಯಾ ಯೋಜನೆ ರೂಪಿಸಿ ವಿಬಿ-ಜಿ ರಾಮ್- ಜಿ’ ಯಡಿ ನಿರಂತರ ಕೆಲಸ ನೀಡಿ – ದೇವರ ಮನಿ ಕರೆ

Posted by

ಸುದ್ದಿ ಬೆಳಕು ವಾರ್ತೆ

ವಡಿಗೇರಾ: ನಿಗದಿ ಗುರಿಗೆ ಅನುಸಾರವಾಗಿ ಕ್ರಿಯಾ ಯೋಜನೆ ರೂಪಿಸಿ, ಗ್ರಾಮೀಣ ಭಾಗದಲ್ಲಿ ವಿಕಾಸಿತ ಭಾರತ -(VB-G RAM-G) ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್‌ ಗ್ರಾಮೀಣ ಯೋಜನೆಯಡಿ, ಜನರು ಗುಳೆ ಹೋಗುವುದನ್ನು ತಡೆಗಟ್ಟಲು ನಿರಂತರ ಕೂಲಿ ಕೆಲಸ ಒದಗಿಸಲು ಅಧಿಕಾರಿಗಳಿಗೆ ಜಿಪಂ ಪಿಡಿ ಸಿ.ಬಿ ದೇವರ ಮನಿ ತಿಳಿಸಿದರು.

ತಾಲ್ಲೂಕ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಗುರುವಾರ(6) ಮಧ್ಯಾಹ್ನ ಹಮ್ಮಿಕೊಂಡಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಗೆ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರು ಶ್ರೀ ಸಿ.ಬಿ ದೇವರಮನಿ ರವರು ಚಾಲನೆ ನೀಡಿ ಮಾತನಾಡಿದರು. ಕಳೆದ ಜುಲೈ ತಿಂಗಳಿಂದ ಜಿಲ್ಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಯಲ್ಲಿದ್ದು, ತಾಲ್ಲೂಕಿನ 17 ಗ್ರಾಮ ಪಂಚಾಯತಿಗಳಲ್ಲಿ, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ರೂಪಿಸಿದ, ಕೃಷಿ ಹೊಂಡ, ಗೋ ಕಟ್ಟೆ, ಸಮಗ್ರ ಕೆರೆ ಅಭಿವೃದ್ಧಿ, ಚೆಕ್ ಡ್ಯಾಮ್, ಅರಣ್ಯಕರಣ ಸಸಿಗಳ ನಾಟಿ ಹಾಗೂ ವೈಯಕ್ತಿಕ ಜಾನುವಾರು ಶೇಡ್, ಕೋಳಿ ಶೇಡ್, ಹಂದಿ ಶೇಡ್ ಸೇರಿದಂತೆ ಮತ್ತು ತೋಟಗಾರಿಕೆ, ಪಶು ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಒಳಗೊಂಡು ಇತರ ಇಲಾಖೆಯ ಸಹಭಾಗಿತ್ವದಲ್ಲಿ 318 ಕಾಮಗಳಿದ್ದು, ವಿಬಿ-ಜಿ ರಾಮ್ ಜಿ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಳಿಸಲು ಸರ್ಕಾರ ಸೂಚಿಸಿದ್ದು. ಒಬ್ಬ ಕೂಲಿ ಕಾರ್ಮಿಕ‌ನಿಗೆ ದಿನಕ್ಕೆ 382 ರೂಪಾಯಿ ಅಂತೆ ಕೂಲಿ ನೀಡಲಾಗುತ್ತಿದ್ದು, ವಾರ್ಷಿಕ 125 ದಿನಗಳ ಕೆಲಸ ಮಾಡಬಹುದಾಗಿದೆ ಎಂದರು.

ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಜಾನುವಾರುಗಳಿಗೆ ಕುಡಿಯುವ ‌ನೀರಿನ ತೊಟ್ಟಿ ಸೇರಿದಂತೆ ಇತರ ಯೋಜನೆಗಳನ್ನು ಪಡೆಯಬಹುದಾಗಿದೆ. ಇನ್ನೂ ಎಲ್ಲಾ ಅವಶ್ಯಕ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ, ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ಒದಗಿಸುವ ಜೋತೆಗೆ, ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಿದಂತ್ತಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಶಶಿಧರ ಹಿರೇಮಠ ರವರು ಮಾತನಾಡಿ, ವಿಬಿ-ಜಿ ರಾಮ್ ಜಿ ಯೋಜನೆ ಗ್ರಾಮೀಣ ಭಾಗಕ್ಕೆ, ಕೂಲಿ ಕಾರ್ಮಿಕರಿಗೆ ಉಪಯೋಗವಾಗುವ ರೀತಿಯಲ್ಲಿ, ಜಿಲ್ಲಾ ಪಂಚಾಯತಯಿಂದ ನಿಗದಿ ಪಡಿಸಿದ ಗುರಿಗೆ ಅನುಸಾರವಾಗಿ ಪ್ರಗತಿ ಸಾಧಿಸಲು ಸೂಚಿಸಿದರು. ಗ್ರಾಮೀಣ ಭಾಗದ ಜನರು ಗುಳೆ ಹೋಗದಂತೆ ತಡೆಗಟ್ಟಲು ನಿರಂತರ ಉದ್ಯೋಗ ಖಾತರಿ ಕೆಲಸ ಒದಗಿಸಲು ಪಿಡಿಓ ರವರಿಗೆ ಸೂಚಿಸಿದರು. ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ನಿಗದಿ ಸಮಯಕ್ಕೆ ಕೆಲಸಕ್ಕೆ ಹಾಜರಾಗಿ ಕರ್ತವ್ಯದ ನಿಯಮ ಪಾಲಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಶ್ರೀ ಕಿರಾಣಬಾಬು, ಜಿಪಂ ಎಡಿಪಿಸಿ ಬನ್ನಪ್ಪ ಬೈಟಿಪಲ್ಲಿ, ಡಿಎಮ್ ಐಎಸ್ ರಾಘವೇಂದ್ರ ದೇವಾಪುರ, ಸಹಾಯಕ ಲೆಕ್ಕಾಧಿಕಾರಿ ಶರಣಬಸವ ಹಾಗೂ ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್ ಸೇರಿದಂತೆ ಪಿಡಿಓ ಗಳು, ಡಿಇಓ, ಟಿಎಇ, ಎನ್ ಆರ್ ಎಲ್ ಎಮ್ ಸಂಯೋಜಕರು, ಮಹಿಳಾ ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.

Leave a Reply

Your email address will not be published. Required fields are marked *

Suddi Belaku