ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ವಿಷಕಾರಿ ರಾಸಾಯನಿಕ ಸೋರಿಕೆ: ಮೂವರು ಕಾರ್ಮಿಕರ ದುರ್ಮರಣ, ಇಬ್ಬರ ಸ್ಥಿತಿ ಗಂಭೀರ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ವಿಷಕಾರಿ ರಾಸಾಯನಿಕ ಸೋರಿಕೆ ದುರಂತದಲ್ಲಿ ಹೊರರಾಜ್ಯದ ಮೂವರು ಕಾರ್ಮಿಕರು ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ರಾಸಾಯನಿಕ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದವರನ್ನು ತೆಲಂಗಾಣ ಮತ್ತು ಮಧ್ಯಪ್ರದೇಶ ಮೂಲದ ಕಾರ್ಮಿಕರೆಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರು ಆಂಧ್ರಪ್ರದೇಶ ಮೂಲದವರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ವಿವರ:

ಕಟ್ಲಾ ಗಣೇಶ್ (ತಂದೆ: ಕಾಡದೇವಪ್ಪ) – ಅಲಂಪಲ್ಲಿ ನಿವಾಸಿ, ಕೃಷ್ಣ, ಮಗನೂರು, ಮಹಬೂಬ್‌ನಗರ ಜಿಲ್ಲೆ, ತೆಲಂಗಾಣ.

ವಿಕ್ರಮ್‌ಸಿಂಗ್ ಗೊಂಡಾ (ತಂದೆ: ಮುನ್ನಾ ಸಿಂಗ್ ಗೊಂಡಾ) – ಕರಿಯಾ ಪೋಸ್ಟ್, ಜೋಬಿ ಕಲಾನ್, ಕಟ್ನಿ, ಮಧ್ಯಪ್ರದೇಶ.

ಸಂಜಯ್‌ಸಿಂಗ್ ಗೊಂಡಾ (ತಂದೆ: ಶಂಕರ್ ಸಿಂಗ್) – ಕರಿಯಾ ಪೋಸ್ಟ್, ಜೋಬಿ ಕಲಾನ್, ಕಟ್ನಿ, ಮುರವಾರಾ, ಮಧ್ಯಪ್ರದೇಶ.

ಗಾಯಾಳುಗಳ ವಿವರ:

ಮಂಚಾಲ ಹೇಮಂತ್ (ತಂದೆ: ಮಂಚಾಲ ಹನುಮಂತಪ್ಪ) – ಸಿಂಡಿಕೇಟ್ ನಗರ್, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ.

ಮಂಚಾಲ ಶಿವಕುಮಾರ್ (ತಂದೆ: ಮಂಚಾಲ ರಾಜಶೇಖರ್) – ಚೋಳಸಮುದ್ರಂ, ಕುದೇರು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ.

ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೈಗಾರಿಕಾ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕುರಿತು ತನಿಖೆ ಆರಂಭಿಸಿದ್ದಾರೆ.

You Might Also Like

Leave a Reply

Your email address will not be published. Required fields are marked *

↑
Suddi Belaku