
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಸುಕ್ಷೇತ್ರ ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠ ಸೂಗೂರು ಎನ್ ಗ್ರಾಮದಲ್ಲಿ ಜು.29ರಂದು ಗುರು ಪೂರ್ಣಿಮೆ ನಿಮಿತ್ತ ಗುರು ಸಮ್ಮಿಲನ ಹಾಗೂ ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ಪೂಜ್ಯಶ್ರೀ ಹಿರಗಪ್ಪ ತಾತನವರ ಪಾದಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ವಕ್ತಾರರಾದ ಈರಣ್ಣ ಬಲಕಲ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 5ಕ್ಕೆ ಶ್ರೀಗಳ ಪಾದಪೂಜೆ ನೆರವೇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ದರ್ಶನಾಶೀರ್ವಾದ ಪಡೆಯಬೇಕೆಂದು ಕೋರಿದ್ದಾರೆ.
ಶ್ರೀ ಭೋಜಲಿಂಗೇಶ್ವರರೆAಬ ಮಹಾಶರಣರು ಸೂಗೂರು ಎನ್ ಗ್ರಾಮದಲ್ಲಿ ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿ ಭಕ್ತರ ಜೀವನವನ್ನು ಉದ್ದರಿಸಿದ ಉದ್ಧಾರಕರು, ಯಾವುದನ್ನು ಬಯಸದೇ ನಿರಾಡಂಬರ ಜೀವನವನ್ನು ನಡೆಸಿದವರು.
ಹುಚ್ಚು ನಿಚ್ಚಳ ಮಾಡಿದವರು, ಅಂಗವಿಕಲತೆಯನ್ನು ಹೋಗಲಾಡಿಸಿದವರು, ಮಹಾರೋಗವನ್ನು ಕಳೆದವರು, ಭೂತ ಪಿಸಾಚಿಗಳನ್ನು ಓಡಿಸಿದವರು, ಮಾಟ ಮಂತ್ರವನ್ನು ತೊಲಗಿಸಿದವರು, ಉರಗವನ್ನು ಅಗ್ಗವನ್ನಾಗಿ ಮಾಡಿದವರು ಹೀಗೆ ಅನೇಕ ಪವಾಡಗಳನ್ನು ಮಾಡಿ ಭಕ್ತರ ಭಾಗ್ಯನಿಧಿಯಾಗಿ ಕಲಿಯುಗದ ಕಡೆಯ ಗಂಡನಾಗಿ ತ್ರಿಕಾಲ ಭವಿಷ್ಯವನ್ನು ಹೇಳಿದವರಾಗಿ ಸರ್ವವನ್ನು ಬಲ್ಲ ಸರ್ವಜ್ಞರಾಗಿ 25 ಫೆಬ್ರವರಿ 1993ನೇ ಇಸವಿಯಲ್ಲಿ ಶಿವರಾತ್ರಿಯ ಪಂಚಮಿ ದಿವಸ ಲಿಂಗದಲ್ಲಿ ಲೀನವಾದವರು.
ಅವರ ನಂತರ ಶ್ರೀ ಹಿರಗಪ್ಪ ತಾತನವರು ಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಶ್ರೀ ಭೋಜಲಿಂಗೇಶ್ವರರ ಅವತಾರರಾಗಿ ಭೂಮಿಯನ್ನು ಬೆಳಗುವ ಸೂಗೂರು ನಂದಾದೀಪವಾಗಿ ಭಕ್ತರಿಗೆ ಬೆಳಕನ್ನು ನೀಡುತ್ತಿದ್ದಾರೆ.
ಮಠದ ಉದ್ದಾರಕ್ಕಾಗಿ ಹಾಗೂ ಭಕ್ತರ ಏಳಿಗೆಗಾಗಿ ಸದಾ ತಮ್ಮ ದೇಹವನ್ನು ಗಂದದ ಕೊರಡಿನಂತೆ ಸವಿಸುತ್ತಾ ಬಂದವರಾಗಿದ್ದಾರೆ. ವೈಭವಪೂರಿತವಾದ ಜೀವನವನ್ನು ಬಯಸಿದವರಲ್ಲ ಸಾಮಾನ್ಯ ಶರಣರಂತೆ ಇದ್ದಾರೆ. ಆಧುನಿಕ ಕಾಲದಲ್ಲಿ ಭಕ್ತರ ಎದುರಿನಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ ಪುಣ್ಯಪುರುಷರು ಶ್ರೀ ಭೋಜಲಿಂಗೇಶ್ವರರ ಭವ್ಯ ಶಿಲಾಮಂದಿರ ನಿರ್ಮಾಣ ಮಾಡಿದ ಕಾಯಕಯೋಗಿಯಾಗಿದ್ದಾರೆ. ಪೂಜ್ಯರು ಶಿಕ್ಷಣ ವಸತಿ ಅನ್ನ, ಕೃಷಿ ಹೀಗೆ ಚತುರ್ಥ ಕಾಯಕದ ಸಲುವಾಗಿ ತಮ್ಮ ಕಾಯವನ್ನು ಸವಿಸುತ್ತಿದ್ದಾರೆ. ಅಷ್ಟೇಅಲ್ಲದೇ ಭಕ್ತರ ನೋವನ್ನುಂಡ ಸಂತರAತೆ ಇದ್ದಾರೆ.
ದುಖಃವನ್ನು ನಿವಾರಿಸುವ ಮಾತೆಯಂತೆ ರೋಗವನ್ನು ತೊಲಗಿಸುವ ವೈದ್ಯರಂತೆ ಕರ್ತವ್ಯ ನಿರತ ತಂದೆಯAತೆ ಅಜ್ಞಾನವನ್ನು ತೊಲಗಿಸುವ ಗುರುವನಂತೆ ಇದ್ದಾರೆ. ಇಂತಹ ಮಹಾಮಹಿಮರ ಪಾದಪೂಜೆಯನ್ನು ಶ್ರೀಗಳ ಅಪ್ಪಣೆಯ ಪ್ರಕಾರ ಹಾಗೂ ಸರ್ವಭಕ್ತರ ಪುಣ್ಯದ ಮಹಾಪಾದ ಪೂಜೆಯೂ ಜು.29ರಂದು ಅನೇಕ ಹರಗುರು ಚರಮೂರ್ತಿಗಳು ರಾಜಕೀಯ ಗಣ್ಯವ್ಯಕ್ತಿಗಳು ಪಾದಪೂಜೆಯಲ್ಲಿ ಭಾಗವಹಿಸುವರು.
ಸರ್ವಭಕ್ತರು ಭಾಗವಹಿಸಿ ಗುರುವಿನ ಕೃಪಾಕಟಾಕ್ಷವನ್ನು ಪಡೆಯಬೇಕೆಂದು ಶ್ರೀಮಠದ ಭಕ್ತರು ಕೋರಿದ್ದಾರೆ.











Leave a Reply