
ಸುದ್ದಿ ಬೆಳಕು ವಾರ್ತೆ
ಸೈದಾಪೂರ: ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಂಡು, ಅಗತ್ಯವಿದ್ದಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದು ಸೈದಾಪೂರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ವಿ. ನಾಯಕ ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಗೊಂದಡಗಿ, ಭೀಮನಳ್ಳಿ, ಬೆಳಗುಂದಿ, ಆನೂರ ಬಿ, ಆನೂರ ಕೆ, ಮಲ್ಹಾರ್, ಸಾವೂರ, ಹೆಗ್ಗಣಗೇರಾ ಹಾಗೂ ಸೈದಾಪೂರ ಇಂದಿರಾನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಎಸ್‌ಐಆರ್ ಹಾಗೂ ಬಿಎಲ್‌ಎ-2 ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಅಭಿಯಾನದ ವೇಳೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ, ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ಮತದಾರರಿಗೆ ಅಗತ್ಯ ದಾಖಲೆಗಳ ಕುರಿತು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಾಹಿತಿ ನೀಡಿದರು. ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಪ್ರತಿಯೊಬ್ಬ ಮತದಾರರ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಮತದಾನದ ಹಕ್ಕನ್ನು ಜಾಗೃತಿಯಿಂದ ಬಳಸಿಕೊಳ್ಳುವಂತೆ ಮನವಿ ಮಾಡಲಾಯಿತು.
ಅಭಿಯಾನದಲ್ಲಿ ಕಾರ್ಯಕರ್ತೆಯರಾದ ನಾಗಪ್ಪ ಸಜ್ಜನ್ ಕಡೆಚೂರು, ವಿಜಮ್ಮ ಮಲ್ಹಾರ್ ಹಾಗೂ ರಾಘವೇಂದ್ರ ಕೊಂಕಲ್ ಸಕ್ರಿಯವಾಗಿ ಪಾಲ್ಗೊಂಡು ಗ್ರಾಮಸ್ಥರಿಗೆ ಎಸ್‌ಐಆರ್ ಹಾಗೂ ಬಿಎಲ್‌ಎ-2 ಅರ್ಜಿಗಳ ಭರ್ತಿ, ದಾಖಲೆಗಳ ಸಲ್ಲಿಕೆ ಮತ್ತು ಮತದಾರರ ಪಟ್ಟಿಯ ಪರಿಶೀಲನೆ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಗೊಂದಡಗಿ ಗ್ರಾಮದ ಪುಂಡಲೀಕ ಪೂಜಾರಿ, ಭೀಮಣ್ಣ ದುಖಾನ್, ಮರಿಲಿಂಗಪ್ಪ ಈರಪ್ಪನ್ನೋರ್, ದೇವಪ್ಪ, ರೆಡ್ಡೆಪ್ಪ, ಕೃಷ್ಣಮ್ಮ, ಸಿದ್ದಪ್ಪಗೌಡ, ಬನ್ನಪ್ಪ, ಅಂಜಪ್ಪ; ಭೀಮನಳ್ಳಿ ಗ್ರಾಮದ ನಾಗಪ್ಪ, ರಮೇಶ, ನಾಗಪ್ಪ ಬೋಳಿ, ಬಸಪ್ಪ, ಮರೆಪ್ಪ, ಲಕ್ಷಣ; ಬೆಳಗುಂದಿ ಗ್ರಾಮದ ಹಂಪಣ್ಣಗೌಡ ಪೊಲೀಸ್ ಪಾಟೀಲ, ವಿಜಯ ಕಂದಳ್ಳಿ, ಶಾಂತಪ್ಪ, ತಿಮ್ಮರೆಡ್ಡಿ; ಆನೂರ ಬಿ ಗ್ರಾಮದ ಬಸವರಾಜ, ಗೋಕುಲಸಾಬ್; ಆನೂರ ಕೆ ಗ್ರಾಮದ ಸಂಪತ್ ಸಜ್ಜನ್, ಫಕೀರಸಾಬ್, ಪಂಪಣ್ಣಗೌಡ, ಇನೂಷ್ ಭಾಷಾ; ಮಲ್ಹಾರ್ ಗ್ರಾಮದ ಮಂಜುನಾಥ ಮೇತ್ರಿ, ವಿಜಮ್ಮ, ಸಿದ್ದಪ್ಪ ಗಿರಿಣಿ, ಸಿದ್ದು ನಾಯಕ, ಭೀಮರೆಡ್ಡಿ ಇಸ್ಲಾಕಾರ್, ರಾಧಮ್ಮ ಇಸ್ಲಾಕಾರ್, ಹಣಮಂತಿ ಮೀಟಗಾರ, ಮರೆಮ್ಮ ಮೀಟಗಾರ; ಸಾವೂರ ಗ್ರಾಮದ ಕಳಸಪ್ಪ, ಮಲ್ಲಪ್ಪ, ಹಣಮಂತ, ಬಸಪ್ಪ ಪೂಜಾರಿ, ಮರೆಪ್ಪ; ಹೆಗ್ಗಣಗೇರಾ ಗ್ರಾಮದ ತಾಯಪ್ಪ, ಲಕ್ಷ್ಮಣ, ಸಾಬಣ್ಣ, ಕಾಶಪ್ಪ ಹಾಗೂ ಸೈದಾಪೂರ ಇಂದಿರಾನಗರದ ಲಕ್ಷ್ಮೀ ವಿ., ಶಂಕ್ರಮ್ಮ, ಜೇಜಮ್ಮ, ಲಕ್ಷ್ಮೀ, ಮರೆಮ್ಮ, ಖೈರುನ್, ಪುತ್ಲಿ ಬಿ. ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.











Leave a Reply