
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ದೇಶ ಕಾಯುವ ಯೋಧನಿಗಿಂತ ಮಿಗಿಲಾದ ದೇವರಿಲ್ಲ, ಭಾರತಾಂಬೆಯ ರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುವುದು ಪ್ರತಿಯೊಬ್ಬ ಭಾರತೀಯನಿಗೂ ಸಿಗುವ ಅತ್ಯುನ್ನತ ಸೌಭಾಗ್ಯ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಧರ ಸಾಹುಕಾರ ಅವರು ನುಡಿದರು.
ದೇಶದ ರಕ್ಷಣಾ ಪಡೆಗೆ ಆಯ್ಕೆಯಾಗುವ ಮೂಲಕ ಯಾದಗಿರಿ ಮತಕ್ಷೇತ್ರದ ಗುಂಡಳ್ಳಿ ಗ್ರಾಮದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಎತ್ತಿ ಹಿಡಿದಿರುವ ವೀರಯೋಧ ಶ್ರೀ ಬೀರಪ್ಪ ತಂದೆ ತಿಪ್ಪಣ್ಣ ಗೋಡಿಹಾಳ ಅವರನ್ನು ಶ್ರೀಧರ ಸಾಹುಕಾರ ಅವರು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು, ಹಾಗೂ ಇಂತಹ ಸಾಹಸಿ ಪುತ್ರನನ್ನು ದೇಶ ಸೇವೆಗೆ ಧಾರೆ ಎರೆದ ಹೆತ್ತ ತಂದೆ-ತಾಯಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಹಾರೈಸಿದ ಶ್ರೀಧರ ಸಾಹುಕಾರ ಅವರು,
ನಮ್ಮ ಭಾಗದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಗಡಿ ಕಾಯುವ ಸಂಕಲ್ಪ ಮಾಡಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ದೇಶದ ಗಡಿ ಸುರಕ್ಷಿತವಾಗಿದ್ದರೆ ಮಾತ್ರ ನಾವಿಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ, ತನ್ನ ಸ್ವಾರ್ಥವನ್ನು ಬದಿಗಿಟ್ಟು, ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ ಹೊರಟಿರುವ ಬೀರಪ್ಪ ಅವರ ದೇಶಸೇವೆಯ ಪಯಣ ಇಂದಿನ ಯುವ ಪೀಳಿಗೆಗೆ ನಿಜವಾದ ಪ್ರೇರಣೆಯಾಗಿದೆ” ಎಂದು ಶ್ಲಾಘಿಸಿದರು, ಹಾಗೆ ಗ್ರಾಮದ ಯೋಧನ ಸ್ನೇಹಿತರು “ಭಾರತ್ ಮಾತಾ ಕೀ ಜೈ”, “ವೀರಯೋಧ ಬೀರಪ್ಪನಿಗೆ ಜಯವಾಗಲಿ” ಎಂಬ ಘೋಷಣೆಗಳೊಂದಿಗೆ ಯೋಧನಿಗೆ ಜೈಕಾರ ಹಾಕುತ್ತಾ, ಅವರ ಮುಂದಿನ ಯಶಸ್ವಿ ಸೇವಾ ಜೀವನಕ್ಕೆ ಶುಭ ಹಾರೈಸಿದರು..
ಈ ಸಂದರ್ಭದಲ್ಲಿ ಮಂಜುನಾಥ ಗುತ್ತೇದಾರ, ಮಲ್ಲು ಕೋಲಿವಾಡ, ಅರುಣ ಹೊರಮನಿ ಸಾಹುಕಾರ, ಅಮರೇಶ್ ನಾಲ್ವಡಗಿ, ಯಲ್ಲಪ್ಪ ಗುಂಡಗರ್ತಿ, ಮರೆಪ್ಪ ಬಲಕಲ್, ಭಾಷ ಕುರುಕುಂದಿ, ದುಳಪ್ಪಾ ಬಡಿಗೇರ, ಭೀಮು ಯಾದಗಿರಿ, ಮರೆಪ್ಪ ಕಟ್ಟಿಮನಿ, ಸಿದ್ದು ಬೈರಗೊಂಡ, ಸಿದ್ದು ವಿ, ಸೇರಿದಂತೆ ಗ್ರಾಮದ ಪ್ರಮುಖರು, ಮುಖಂಡರು ಹಾಗೂ ದೇಶಾಭಿಮಾನಿಗಳು ಉಪಸ್ಥಿತರಿದರು..












Leave a Reply