
ಸುದ್ದಿ ಬೆಳಕು ವಾರ್ತೆ
ವಡಿಗೇರಾ: ಗ್ರಾಮೀಣ ಜನರಿಗೆ ಆಪತ್ತು ಬಾಂಧವ್ಯವಾಗಿರುವ ವಿಕಾಸಿತ ಭಾರತ ಫಾರ್ ಗ್ಯಾರಂಟಿ ಆ್ಯಂಡ್ ರೋಜಗಾರ್ ಮಿಷನ್ ಗ್ರಾಮೀಣ ಯೋಜನಯಿಂದ ಬಡವರ, ನಿರ್ಗತಿಕರ ದಾರದೀಪವಾಗಿದೆ ಎಂದು ತಾಲ್ಲೂಕು ಐಇಸಿ ಸಂಯೋಜಕ ದುರ್ಗೇಶ್ ಅವರು ಹೇಳಿದರು. ತಾಲ್ಲೂಕಿನ ಉಳ್ಳೆಸೂಗುರು ಗ್ರಾಮದಲ್ಲಿ ಐಇಸಿ ಚಟುವಟಿಕೆಯಡಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇದೇ ಜುಲೈ ಒಂದರಿಂದ ದೇಶದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಆರಂಭವಾಗಿದ್ದು, ಕೂಲಿ ಕಾರ್ಮಿಕರಿಗೆ ಬಹುಪಯೋಗ ಯೋಜನೆಗಳು ಒಳಗೊಂಡಿದ್ದು, ದಿನಕ್ಕೆ ಕೂಲಿ 370 ರಿಂದ 382ಕ್ಕೆ ಹೆಚ್ಚಿಸಲಾಗಿದ್ದು, ವಾರ್ಷಿಕ ಮಾನವ ದಿನಗಳ ಗುರಿ 100 ರಿಂದ 125 ದಿನಕ್ಕೆ ಹೆಚ್ಚಿಸಲಾಗಿದೆ, ಅಲ್ಲದೆ ಒಟ್ಟು 318 ಕಾಮಗಾರಿಗಳ ಒಳಗೊಂಡಿದ್ದು, ವೈಯಕ್ತಿಕ ಸಮುದಾಯ ಕಾಮಗಾರಿಗಳು ವಿಬಿ-ಜಿ ರಾಮ್ ಜಿ ಯೋಜನೆಯಡಿ ಸೇರಿಕೊಂಡಿದೆ ಎಂದರು.
ಜಾನುವಾರಗಳು ಶೇಡ್, ಕೋಳಿ ಶೇಡ್, ಕುರಿ ಶೇಡ್, ಚೆಕ್ ಡ್ಯಾಮ್, ಬೋಲ್ಡರ್ ಚೆಕ್, ನಮ್ಮ ಹೊಲ ನಮ್ಮ ದಾರೆ ಹಾಗೂ ಕೃಷಿಹೊಂಡ, ಗೋಕಟ್ಟೆ, ಇತರ ತೋಟಗಾರಿಕೆ, ರೇಷ್ಮೆ, ಸಾಮರ್ಥ್ಯವನ್ನು ಅರಣ್ಯ ಸೇರಿದಂತೆ ಇತರ ಇಲಾಖೆಗಳ ಒಳಗೊಂಡ ಕಾಮಗಾರಿಗಳನ್ನು ವಿಬಿ-ಜಿ ರಾಮ್ ಜಿ ಯೋಜನೆಯಡಿ ತೆಗೆದುಕೊಳ್ಳ ಬಹುದಾಗಿದೆ ಎಂದು ಗ್ರಾಮದ ಮಹಿಳೆಯರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ತಿಳಿಸಲಾಯಿತು. ಇದೇ ವೇಳೆ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರಿಂದ ಬೇಡಿಕೆ ಪಡೆದು ಗ್ರಾಪಂ ಗೆ ಸಲ್ಲಿಸಲಾಯಿತು. ಇನ್ನೂ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ವಿತರಿಸಿ ವ್ಯಾಪಕವಾಗಿ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು.
ಈ ವೇಳೆ ಟಿಐಇಸಿ ಸಂಯೋಜಕ ದುರ್ಗೇಶ್, ಎನ್ ಆರ್ ಎಲ್ ಎಮ್ ಸಂಯೋಜಕ ಪವಾನ್ ಕುಮಾರ್, ನಿಂಗರಾಜ್, ಜಿಕೆಮ್ ಸುಧಾ ಹಾಗೂ ಮಹಿಳಾ ಸಂಘದ ಸದಸ್ಯರು, ಕೂಲಿ ಕಾರ್ಮಿಕರು ಇದ್ದರು.











Leave a Reply