ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಕೆಎಸ್‌ಎನ್ ಅಭಿಮಾನಿಗಳು

Posted by

ಸುದ್ದಿ ಬೆಳಕು ವಾರ್ತೆ

ಅರಕೇರಾ : ಮಾಜಿ ಸಚಿವರು ಹಾಗೂ ಕಲ್ಯಾಣ ಕರ್ನಾಟಕದ ಹೆಮ್ಮೆಯ ನಾಯಕರಾದ ಶ್ರೀ ಕೆ. ಶಿವನಗೌಡ ನಾಯಕರವರ 49ನೇ ಹುಟ್ಟುಹಬ್ಬದ ಅಂಗವಾಗಿ ಕೆ.ಎಸ್.ಎನ್. ಜನ ಕಲ್ಯಾಣ ಸಮಿತಿ ವತಿಯಿಂದ ಜಾಗೀರ ಜಾಡಲದಿನ್ನಿ ಹಾಗೂ ನಾಗಡದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್‌ಗಳನ್ನು ವಿತರಿಸಲಾಯಿತು.

ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆ.ಎಸ್.ಎನ್. ಅಭಿಮಾನಿಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ನಾಗರಿಕರಾಗಿ ಬೆಳೆಯುವಂತೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕೆ.ಎಸ್.ಎನ್. ಜನ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಸಾಹುಕಾರ್ ಹೆಗ್ಗಡದಿನ್ನಿ, ವೆಂಕೋಬ ತಾತ ಸಂಗಾಪೂರಮಠ,
ರಾಮೇಶ್ವರ ಸ್ವಾಮಿ ರೇಕಲಮರಡಿ, ಪ್ರಕಾಶ ಗೌಡ ಜಾಡಲದಿನ್ನಿ, ಮೌನೇಶ ನಾಯಕ ಹೆಗ್ಗಡದಿನ್ನಿ,ಗುರು ಸ್ವಾಮಿ, ಆಂಜಿನಯ್ಯ ನಾಯಕ,ಹನುಮನಗೌಡ, ಮರಕಂದಿನ್ನಿ ಹನುಮಂತ್ರಾಯ ದೊರೆ, ಹನುಮಂತ್ರಾಯ.ಬಿ‌. ಬಂಡೇಶ ಸೇರಿ ಕೆ.ಎಸ್.ಎನ್. ಅಭಿಮಾನಿಗಳು, ಶಾಲೆಯ ಶಿಕ್ಷಕ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಶಾಲಾ ಆಡಳಿತ ವಿಧ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

You Might Also Like

Leave a Reply

Your email address will not be published. Required fields are marked *

Suddi Belaku