ನಿಗದಿತ ಸಮಯದಲ್ಲಿ ಯೋಜನೆ ಗುರಿ ತಲುಪಿ-ಇಓ ಹಿರೇಮಠ.

Posted by

–

ತಿರುವಳಿ ಕಂಡಿಗಳು ನಿವಾರಸಿ ಅ್ಯಡ್ ಹಾಕ್ ಸಮಿತಿ ಸಭೆಯಲ್ಲಿ : ಇಓ ಶಶಿಧರ ಹಿರೇಮಠ ಸೂಚನೆ

ಸುದ್ದಿ ಬೆಳಕು ವಾರ್ತೆ

ವಡಗೇರಾ: ಸ್ಥಳೀಯ ಲೆಕ್ಕ ಪರಿಶೋಧನಾ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆ ಮತ್ತು ಕಂಡಿಕೆಗಳನ್ನು ನಿಗದಿ ಸಮಯದಲ್ಲಿ ಸರಿಪಡಿಸಲು ಹಾಗೂ ವಿಕಾಸಿತ ಭಾರತ ಜಿ ರಾಮ ಜಿ ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸಭೆಯಲ್ಲಿ ಇಓ ಶಶಿಧರ ಹಿರೇಮಠ ಹೇಳಿದರು.

ತಾಲ್ಲೂಕ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಶಶಿಧರ ಹಿರೇಮಠ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಅಡ್ ಹಾಕ್ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. 2014-15 ರಿಂದ 2024-25 ರವರೆಗಿನ ಸಾಮಾಜಿಕ ಲೆಕ್ಕ ಪರಿಶೋಧನೆ ವರದಿಯ ಆಕ್ಷೇಪಣೆ ಹಾಗೂ ವಸೂಲಾತಿ ಕಂಡಿಕೆಗಳ ಸಮಸ್ಯೆ ಪರಿಹರಿಸಿಕೊಳ್ಳಲು ಸಂಬಂಧಿಸಿದ ಪಿಡಿಓ ಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಸಭೆಯಲ್ಲಿ ಸೂಚಿಸಿದರು.

ಇದೇ ವೇಳೆ ಜುಲೈ ಒಂದರಿಂದ ಆರಂಭವಾದ ವಿಕಾಸಿತ ಭಾರತ ಗ್ಯಾರಂಟಿ-ರೋಜಗಾರ್ ಮತ್ತು ಅಜೀಕ ಮೀಷನ್ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಆಯಾ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು, ಇತರ ಕಾಮಗಾರಿಗಳು ಕೈಗೊಂಡು, ಗ್ರಾಮೀಣ ಭಾಗದಲ್ಲಿ ಮಳೆಯಿಲ್ಲದೆ ಜನರು ಗುಳೆ ಹೋಗುವುದನ್ನು ತಡೆಗಟ್ಟಲು ನಿರಂತರ ಎನ್ ಎಮ್ ಆರ್ ತೆಗೆದು ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಹೇಳಿದರು. ಜುಲೈ ಆರಂಭದಿಂದ 370 ರಿಂದ 382 ರೂಪಾಯಿ ಗೆ ಕಾರ್ಮಿಕರ ಕೂಲಿ‌ ಹಣ ಹೆಚ್ಚಿಸಿಲಾಗಿದೆ. ನೂತನ ಯೋಜನೆಯಡಿ 318 ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ನಿಗದಿತ ಸಮಯದಲ್ಲಿ ಯೋಜನೆ ಗುರಿ ತಲುಪಲು ಸಭೆಯಲ್ಲಿ ಸೂಚಿಸಿದರು. ಅಲ್ಲದೆ ಕರವಸೂಲಾತಿ ನಿಗದಿ ಗುರಿಯಂತೆ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕೆಲಸ ಮಾಡಬೇಕು, ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆಗೆ ಗ್ರಾಮದಲ್ಲಿ ಆದ್ಯತೆ ನೀಡಲು ಸಭೆಯಲ್ಲಿ ಮಾನ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾಉ) ಕಿರಾಣಬಾಬು, ಸಹಾಯಕ ಲೆಕ್ಕಧಿಕಾರಿ ಶರಣಬಸವ, ಪಿಡಿಓ ಗಳು, ಸ್ಥಳೀಯ ಲೆಕ್ಕಾ ಪರಿಶೋಧನೆ ಸಹಾಯಕ ಲೆಕ್ಕಾಧಿಕಾರಿಗಳು ಪ್ರಶಾಂತ, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಟಿಎಇ, ಟಿಎಎ, ಸೋಷಿಯಲ್ ಕೋರ್ಡಿನೆಟರ್ ಸಿದ್ದಲಿಂಗರಡ್ಡಿ, ಡಿಇಓ ಗಳು ಹಾಗೂ ತಾಪಂ, ಗ್ರಾಪಂ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

↑
Suddi Belaku