ಯಾದಗಿರಿಯಲ್ಲಿ ₹20 ಲಕ್ಷ ವೆಚ್ಚದ ಸಾರ್ವಜನಿಕ ಶೌಚಾಲಯ ಉದ್ಘಾಟನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಬೆಳೆಯುತ್ತಿರುವ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ವಿವಿಧಡೆ ಶೌಚಾಲಯಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಇಲ್ಲಿನ ವಾರ್ಡ 31ರ ಶಶಿಧರ ಕಾಲೋನಿಯಲ್ಲಿ ನಗರಸಭೆಯಿಂದ ನಗರೋತ್ಥಾನ ಹಂತ 3 ರಲ್ಲಿ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ನಿರ್ಸಗದ ಕರೆಗಳನ್ನು ಪೂರೈಸಿಕೊಳ್ಳುವುದು ಅತಿ ಅಗತ್ಯವಾಗಿದೆ. ನಗರ ಪ್ರದೇಶಗಳಲ್ಲಿ ಹೊರಗಿನಿಂದ ಬರುವ ಜನರು ಇದಕ್ಕಾಗಿ ಪರದಾಡುತ್ತಾರೆ. ಇದನ್ನು ತಪ್ಪಿಸಲು ವಿವಿಧ ಆಯ್ದ ಸ್ಥಳಗಳಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.
ಇದನ್ನು ಸರಿಯಾದ ರೀತಿಯಲ್ಲಿ ಮೆಂಟನ್ ಮಾಡಬೇಕೆಂದು ಶಾಸಕರು ಹೇಳಿದರು.
ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಮಾತನಾಡಿ, ಇಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ತಲಾ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ನೀರಿನ‌ ಅನುಕೂಲಕ್ಕಾಗಿ ಬೋರವೆಲ್ ಹಾಕಿಸಲಾಗಿದೆ. ಮೂತ್ರಕ್ಕೂ ವ್ಯವಸ್ಥೆ ಇದೆ ಎಂದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ನಗರಸಭೆ ಸಿಬ್ಬಂದಿಗಳಾದ ಪ್ರಶಾಂತ, ಶಂಭುಲಿಂಗ್ ನಾಗರಾಜ್, ಶರಣಮ್ಮ, ಮಂಜುನಾಥ, ಅರುಣ ಸೇರಿದಂತೆ ವಾರ್ಡ್ ಜನರು ಇದ್ದರು.

You Might Also Like

Leave a Reply

Your email address will not be published. Required fields are marked *

Suddi Belaku