ಯಾದಗಿರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ-ಮನೆ ಭೇಟಿ 97% ಪೂರ್ಣ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR 2025) ಕಾರ್ಯ ಯಾದಗಿರಿ ಜಿಲ್ಲೆಯಲ್ಲಿ ವೇಗವಾಗಿ ಸಾಗಿದ್ದು, ಬಿಎಲ್‌ಒಗಳ ಮನೆ-ಮನೆ ಭೇಟಿ ಕಾರ್ಯವು ಜೂನ್ 30ರ ವೇಳೆಗೆ 97.08 ಶೇಕಡಾ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 10,53,236 ಮತದಾರರು ಇದ್ದು, ಇವರಿಗೆ ಎಣಿಕೆ ನಮೂನೆಗಳನ್ನು (Enumeration Forms) ವಿತರಿಸಲಾಗುತ್ತಿದೆ.

ಜಿಲ್ಲಾ ಚುನಾವಣಾ ಅಧಿಕಾರಿಗಳ ಮಾಹಿತಿ ಪ್ರಕಾರ, ಮನೆ-ಮನೆ ಭೇಟಿ ಹಾಗೂ ಎಣಿಕೆ ನಮೂನೆಗಳ ವಿತರಣೆ ಕಾರ್ಯ ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದೆ. ಈವರೆಗೆ ಒಟ್ಟು 5,84,651 ಎಣಿಕೆ ನಮೂನೆಗಳು ವಿತರಣೆಗೊಂಡಿದ್ದು, ಇದು 55.51 ಶೇಕಡಾ ಪ್ರಗತಿಯನ್ನು ಸೂಚಿಸುತ್ತದೆ.

ಈವರೆಗೆ 15,804 ಎಣಿಕೆ ನಮೂನೆಗಳು ಡಿಜಿಟಲೀಕರಣಗೊಂಡಿದ್ದು (1.50%), ಮತದಾರರು ಆನ್‌ಲೈನ್ ಮೂಲಕ ಸಲ್ಲಿಸಿರುವ ನಮೂನೆಗಳ ಸಂಖ್ಯೆ 362 (0.03%) ಆಗಿದೆ.

ಪರಿಷ್ಕರಣೆ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 228 ಎಎಸ್‌ಡಿಡಿಒಗಳು, 6 ಸಹಾಯಕ ನೋಂದಣಾಧಿಕಾರಿಗಳು, 54 ಶಾಖಾಧಿಕಾರಿಗಳು, 130 ಮುಖ್ಯ ಮತದಾರರು, 34 ಇ-ಗವರ್ನೆನ್ಸ್ ನೋಂದಾಯಿತ ಮತದಾರರು ಸೇರಿದಂತೆ ವಿವಿಧ ಹಂತದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜಿಲ್ಲಾ ಚುನಾವಣಾ ಆಡಳಿತವು ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಿ, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

Suddi Belaku