ಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಮರಿಗಳ ರಕ್ಷಣೆ – ಆರೋಗ್ಯ ಇಲಾಖೆ ನೌಕರನ ಮಾನವೀಯತೆ ಮೆಚ್ಚುಗೆ

Posted by

ಸುದ್ದಿ ಬೆಳಕು ವಾರ್ತೆ

ಇಳಕಲ್: ಭಾರಿ ಮಳೆಯಿಂದ ಗಟಾರದಲ್ಲಿ ಕೊಚ್ಚಿ ಹೋಗುತ್ತಿದ್ದ ನವಜಾತ ನಾಯಿಮರಿಗಳನ್ನು ರಕ್ಷಿಸಿ ಆರೋಗ್ಯ ಇಲಾಖೆಯ ನೌಕರ ಶಂಕರ ಮಠಪತಿ ಮಾನವೀಯತೆ ಮೆರೆದ ಘಟನೆ ಇಳಕಲ್ ನಗರದಲ್ಲಿ ನಡೆದಿದೆ.

ಭಾರಿ ಮಳೆಗೆ ಜಲಾವೃತವಾದ ರಸ್ತೆಗಳು

ಇಳಕಲ್ ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ರಸ್ತೆಗಳು ನೀರಿನಿಂದ ಜಲಾವೃತವಾಗಿದ್ದವು. ಸಾಯಿ ಬಡಾವಣೆಯಲ್ಲಿ ವಾಸಿಸುವ ಆರೋಗ್ಯ ಇಲಾಖೆಯ ನೌಕರ ಶಂಕರ ಮಠಪತಿ ಅವರು ಮಧ್ಯರಾತ್ರಿ ನಾಯಿಮರಿಗಳ ಶಬ್ದ ಕೇಳಿ ಹೊರಗೆ ಬಂದಿದ್ದಾರೆ.

ಗಟಾರದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಮರಿಗಳು

ಹೊರಗೆ ಬಂದು ಪರಿಶೀಲಿಸಿದಾಗ, ಇತ್ತೀಚೆಗೆ ಜನ್ಮ ತಳೆದಿದ್ದ ನಾಯಿಮರಿಗಳು ಮಳೆಯ ನೀರಿನ ರಭಸಕ್ಕೆ ಗಟಾರದಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ.

ತಕ್ಷಣ ಮಾನವೀಯತೆ ಮೆರೆದ ಶಂಕರ ಮಠಪತಿ ಅವರು ನಾಯಿಮರಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಆರೈಕೆ ಮಾಡಿದ್ದಾರೆ.

ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

ಶಂಕರ ಮಠಪತಿ ಅವರ ಈ ಮಾನವೀಯ ಕಾರ್ಯಕ್ಕೆ ಸಾಯಿ ಬಡಾವಣೆಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೂಕ ಪ್ರಾಣಿಗಳ ಜೀವ ಉಳಿಸಿದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku