
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಕೇಂದ್ರ ಸರ್ಕಾರದ ಸೂರ್ಯ ಘರ್ ಮುಪ್ತ್ ಬೀಜಿಲಿ ಯೋಜನೆಯು ಭಾರತದ ಪ್ರತಿಯೊಂದು ಹಳ್ಳಿ-ಹಳ್ಳಿಗೂ ಪ್ರತಿ ಮನೆ-ಮನೆಗೂ ತಲುಪಿಸುವ ಜವಾಬ್ದಾರಿ ಸ್ವಯಂ ಸೇವಾ ಸಂಸ್ಥೆಗಳಿಂದ ಸಾಧ್ಯವೆಂದು ಪೆವಾರ್ಡ್ ಕೆ ಜಿಲ್ಲಾಧ್ಯಕ್ಷ ಚಂದಪ್ಪ ಯಾದವ್ ತಿಳಿಸಿದರು.
ಕರ್ನಾಟಕ ನಗರ ಮತ್ತು ಗ್ರಾಮಾಬ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಪೆವರ್ಡ್ ಕೆ ಯಾದಗಿರಿ ಜಿಲ್ಲೆವತಿಯಿಂದ ಆಯೋಜಿಸಿದ ಜಿಲ್ಲಾ ಒಕ್ಕೂಟದ ಸಭೆಯು ಶ್ರೀಮತಿ ಸಿದ್ದಲಿಂಗಮ್ಮ ಮಣ್ಣೂರ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಮೂರ್ತಿ ರವರು ಮಾತನಾಡಿ ನಮ್ಮ ಸಂಸ್ಥೆಯು ಸುಮಾರು ಒಂದು ಸಾವಿರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟವಾಗಿದ್ದು, ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ಬಲವರ್ಧನೆ ಗೊಳಿಸಿದ್ದೇವೆ, ಇದರ ಮುಖ್ಯ ಉದ್ದೇಶ ವಿವಿಧ ರೀತಿಯ ಅನುದಾನಕ್ಕಾಗಿ ದಾಖಲಾತಿಗಳನ್ನು ನಿರ್ವಹಿಸಲು ಮಾರ್ಗದರ್ಶನ ನೀಡುವುದು, ಸಂಸ್ಥೆಗಳನ್ನು ಸ್ವಶಕ್ತ ಗೊಳಿಸುವುದೆ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಡಿಜಿಪ್ಲಿಕ್ – ಸೋಲಾರ್ ಕಂಪನಿಯ ಮುಖ್ಯಸ್ಥರಾದ ಸುಬ್ರಹ್ಮಣ್ಯ ರವರು ಸೋಲಾರ್ ಅಳವಡಿಸುವುದರಿಂದ ಜನಸಾಮಾನ್ಯರಿಗೆ ಆಗುವ ಲಾಭಾಂಶಗಳನ್ನು ವಿವರಿಸಿದರು. ಹಾಗು ಸ್ವಂತ ಆಸ್ತಿಯನ್ನು ಹೊಂದಿರುವ ಮನೆಮಾಲೀಕರಿಗೆ ಮೇಲ್ಚಾವಣಿಯ ಮೇಲೆ ಸೌರ ಶಕ್ತಿ ಫಲಕಗಳನ್ನು ಅಳವಡಿಸಲು ಹಣಕಾಸಿನ ನೆರವು ಹಾಗೂ ಸಬ್ಸಿಡಿಗಳನ್ನು ಒದಗಿಸುವ ಮೂಲಕ ವಿದ್ಯುತ್ ತಯಾರಿಕೆ ಹಾಗೂ ಬಳಸುವಿಕೆಯ ವೆಚ್ಚವನ್ನು ಸುಲಭವಾಗಿ ಕೈಗೆಟುಕುವಂತೆ ಮಾಡುವ ಯೋಜನೆ ಇದಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜೋನಲ್ ವ್ಯವಸ್ಥಾಪಕರಾದ ಪ್ರಕಾಶ್ ದೋಲೆ, ಯಾದಗಿರಿ ಜಿಲ್ಲಾ ವ್ಯವಸ್ಥಾಪಕರಾದ ಚಂದ್ರಪ್ಪ, ಶೋಭಾ ರಾಣಿ, ಭಾರತಾಂಬೆ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ್ ಬೆನಕನಹಳ್ಳಿ, ಅಂಬೇಡ್ಕರ್ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಮೈಲಾರಿ ಸೌಭಾಗ್ಯ ಸಂಸ್ಥೆಯ ಮರಿಲಿಂಗಪ್ಪ , ಚನ್ನಬಸವ ವಾಲಿ, ಯಲ್ಲಪ್ಪ, ಗೋವಿಂದ, ಯೇಸು, ಹಾಗೂ ವಿವಿಧ ಸಂಘ-ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಸದರಿ ಕಾರ್ಯಕ್ರಮವು ಮೈಲಾರಿ ನಿರೂಪಿಸಿ ಮಾಳಪ್ಪ ಯಾದವ್ ಸ್ವಾಗತಿಸಿ ಮರಿಲಿಂಗ ವಂದಿಸಿದರು.










Leave a Reply