ಯಾದಗಿರಿಯಲ್ಲಿ ‘ಮನ್ ಕೀ ಬಾತ್’ ಕಾರ್ಯಕ್ರಮ ವೀಕ್ಷಣೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 26 : ನಗರದ ವಾರ್ಡ್ ನಂ. ೨೧ರಲ್ಲಿ ಮಾಜಿ ನಗರಸಭೆ ಸದಸ್ಯೆ ವಿಜಯಲಕ್ಷ್ಮಿ ನಾನೇಕ್ ಅವರ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೧೩೩ನೇ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಾಯಿತು.

ಈ ಕಾರ್ಯಕ್ರಮವನ್ನು ಯಾದಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ವೆಂಕಟರಡ್ಡಿ ಮುದ್ನಾಳ ಅವರು ವೀಕ್ಷಿಸಿ, ಕಾರ್ಯಕ್ರಮದ ಸಂದೇಶಗಳನ್ನು ಗಮನಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ರುದ್ರಗೌಡ ಪಾಟೀಲ್, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಪ್ರಧಾನ ಕಾರ್ಯದರ್ಶಿ ರಮೇಶ್ ದೊಡ್ಡಮನಿ, ಉಪಾಧ್ಯಕ್ಷ ಜಿತೇಂದ್ರ ನವಿಲುಗರಿ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸುನೀತಾ ಚವ್ಹಾಣ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಭೀಮಾಬಾಯಿ ಸೆಂಡಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಅದೇ ರೀತಿ ವಿಜಯಲಕ್ಷ್ಮಿ ನಾನೇಕ್, ಗುಂಡಮ್ಮ ಗೊಂದೇನೂರು, ಚೆನ್ನವೀರಯ್ಯ ಸ್ವಾಮಿ, ಶ್ರೀಕಾಂತ ಸುಂಗುಲ್ಕರ್, ಯಲ್ಲಪ್ಪ ಜಮಾನೋರ್, ಬಸವರಾಜ ಅಕ್ಕನೂರ್, ಹನುಮಂತ ಬಗ್ಲಿ, ಚಂದಪ್ಪ ಬಗ್ಲಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ವೀಕ್ಷಿಸಿದರು.

ಕಾರ್ಯಕ್ರಮದ ಮೂಲಕ ದೇಶದ ಅಭಿವೃದ್ಧಿ, ಸಾಮಾಜಿಕ ಜಾಗೃತಿ ಹಾಗೂ ಜನಪರ ವಿಷಯಗಳ ಕುರಿತು ಪ್ರಧಾನಮಂತ್ರಿಗಳ ಸಂದೇಶವನ್ನು ಭಾಗವಹಿಸಿದವರು ಆಲಿಸಿದರು.

Leave a Reply

Your email address will not be published. Required fields are marked *

Suddi Belaku