
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 25 : ಕ್ರೀಡೆಗಳು ಕೇವಲ ಗೆಲುವು-ಸೋಲಿನ ಆಟವಲ್ಲ, ಅದು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಹೆಚ್ಚಿಸಿ ಮತ್ತು ಪ್ರೀತಿ, ವಿಶ್ವಾಸ, ಸ್ನೇಹ ಸೌಹಾರ್ದತೆಯನ್ನು ಬೆಸೆಯುವ ಸಾಧನವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಶರಣಪ್ಪ ಮಾನೇಗಾರ ಯರಗೋಳ ಅವರು ಅಭಿಪ್ರಾಯಪಟ್ಟರು.
ಯಾದಗಿರಿ ತಾಲೂಕಿನ ಕೆ.ಹೊಸಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಕೆ. ಹೊಸಳ್ಳಿ ಪ್ರೀಮಿಯಮ್ ಲೀಗ್ ಜೆಡ್.ಪಿ ಸೀಜನ್ 01 ರ ಕ್ರೀಕೆಟ್ ಟೂರ್ನಮೆಂಟ್ ಆಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗುರುಮಠಕಲ್ ಕ್ಷೇತ್ರದಲ್ಲಿನ ಯುವಕರಲ್ಲಿನ ಕ್ರೀಡಾ ಉತ್ಸವ ಮತ್ತು ಮನೋಭಾವನೆಯನ್ನ ಅಭಿನಂದಿಸಿ ಸದಾ ಪ್ರೊತ್ಸಾಹಿಸುತ್ತೇನೆ. ಇಲ್ಲಿ ಹಲವಾರು ಗ್ರಾಮಗಳಿಂದ ವಿವಿಧ ತಂಡಗಳು ಬಂದಿದ್ದೀರಿ ಯಾರೂ ಕೂಡ ಆಟದಲ್ಲಿ ಅನ್ಯತ ಮನಸ್ತಾಪ ಮಾಡಿಕೊಳ್ಳದೇ ಒಬ್ಬರಿಗೊಬ್ಬರು ಅಣ್ಣತಮ್ಮ ಸೋದರರಾಗಿ ಧನಾತ್ಮಕವಾಗಿ ಆಡಬೇಕು.
ಯುವಕರು ಮೊಬೈಲ್ ಗೀಳಿನಿಂದ ಹೊರಬರಬೇಕು.
ಕ್ರೀಡೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರೆ ದೇಹದಲ್ಲಿನ ರೋಗಗಳನ್ನು ಕಡಿಮೆ ಮಾಡಿ, ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಯಾವುದೇ ಆಟದಲ್ಲಿ ಗೆಲುವು-ಸೋಲು ಸಹಜ. ಕೀಳರಿಮೆಯ ಭಾವನೆ ಬೇಡ ಎಂದರು.
ಪ್ರತಿಭೆ ಎನ್ನುವುದು ಯಾರ ಸ್ವತ್ತಲ್ಲ, ಅದು ಕಷ್ಟಪಟ್ಟು ಸಾಧಿಸಿದವರ ಸ್ವತ್ತಾಗಿರುತ್ತದೆ. ಯುವ ಪೀಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಮಾಡಿ ಉತ್ತರ ಕರ್ನಾಟಕ ಭಾಗದ ಮಹಿಳಾ ಕ್ರಿಕೆಟ್ ತಂಡದ ಪ್ರತಿಭಾನ್ವಿತೆ ಶ್ರೇಯಾಂಕ ಪಾಟೀಲ್ ರಂತೆ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತನ್ನಿ ಎಂದು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕ ಅಧ್ಯಕ್ಷ ಮಲ್ಲು ಮಾಳಿಕೇರಿ, ಮಲ್ಲಪ್ಪ ಪೂಜಾರಿ, ದೇವಿಂದ್ರಪ್ಪ ಮೋಟನಳ್ಳಿ, ಜೀವನಕುಮಾರ, ಗೂಳಪ್ಪ ಬೋಯಿನ್, ನಾಗಪ್ಪ ಬೋಯಿನ್, ಜಗಪ್ಪ ಕೋಟಾಗಿರಿ, ವೀರೇಶ್ ಸಜ್ಜನ್, ಈರಣ್ಣಗೌಡ ಯಾರಗೋಳ , ಯಂಕಯ್ಯ ಕಲಾಲ್ , ಸುಧೀರ್ ಕಂಬರ್, ಸಾಲುಮನ್ ನಡುವಿನಕೇರಿ, ಆನಂದ ನಾಟೇಕರ್, ಭೀಮಯ್ಯ ಕಲಾಲ್, ಸೈದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನೇಯ ಕಟ್ಟಿಮನಿ ರಾಂಪುರ, ಮಲ್ಲು ಸಾವೂರ್, ನಾಗಪ್ಪ ಸಜ್ಜನ್, ವೆಂಕಟೇಶ್ ಯಾದವ್ ಬದ್ದೇಪಲ್ಲಿ, ನಾಗಪ್ಪ ಸಜ್ಜನ್, ಭೀಮಯ್ಯ ದಾಸರಿ ಸಂಬರ, ಅನಿಲ್ ಕಂದಕೂರ,ಮಲ್ಲಪ್ಪ ಚಿಂತಕುಂಟ ಮಲ್ಲಪ್ಪ ಚಿಂತಕುಂಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










Leave a Reply