ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಯುವ ಉಪಾಧ್ಯಕ್ಷರಾಗಿ ಮಹೇಶರಡ್ಡಿ ಮುದ್ನಾಳ ನೇಮಕ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ, ಏಪ್ರಿಲ್ 24 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಾಡಿನ ಹೆಸರಾಂತ ಮನೆತನಗಳಲ್ಲಿ ಒಂದಾಗಿರುವ ಮುದ್ನಾಳ ಮನೆತನ ಯುವ ನಾಯಕರಾಗಿರುವ ಮಹೇಶರಡ್ಡಿ ವಿ.ಮುದ್ನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಹಾಸಭಾದ ಉಗಮ, ಬೆಳವಣಿಗೆಯಲ್ಲಿ ಮುದ್ನಾಳ ಮನೆತನದ ದೊಡ್ಡಕೊಡುಗೆ ಇದ್ದು, ಮಾಜಿ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಲಿಂ.ವಿಶ್ವನಾಥರಡ್ಡಿ ಮುದ್ನಾಳ ಹಾಗೂ ಮಾಜಿ ಶಾಸಕ ಲಿಂ.ವೆಂಕಟರಡ್ಡಿ ಮುದ್ನಾಳ ಅವರು ಹಲವು ದಶಕಗಳ ಕಾಲ ಮಹಾಸಭಾದ ಸಂಘಟನೆಯಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ್ದನ್ನು ನೆನಪಿಸಿ, ತಾವೂ ಕೂಡಾ ಮಹಾಸಭಾದ ಸಂಘಟನೆ ಒತ್ತು ನೀಡಿ,ಸಮಾಜ ಬೆಳೆಸಬೇಕೆಂದು ಖಂಡ್ರೆಯವರು ಮಹೇಶರಡ್ಡಿ ಮುದ್ನಾಳ ಅವರಿಗೆ ಹೇಳಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷದ ಸಂಘಟನೆ, ಜನಪರ ಕೆಲಸ,ಹೋರಾಟಗಳನ್ನು ಮಾಡುತ್ತಿರುವ ಮಹೇಶರೆಡ್ಡಿ ಮುದ್ನಾಳ ಅವರ ಹೆಗಲಿಗೆ ಈ ಹೊಸ ಮತ್ತು ರಾಷ್ಟ್ರಮಟ್ಟದ ಹೊಣೆಗಾರಿಕೆ ವಹಿಸಿದ್ದು,ಅವರ ಅಭಿಮಾನಿಗಳಲ್ಲಿ ಮತ್ತು ಸಮಾಜದ ಅಪಾರ ಜನರಲ್ಲಿ ಸಂತಸ ಮೂಡಿಸಿದೆ.

You Might Also Like

Leave a Reply

Your email address will not be published. Required fields are marked *

Suddi Belaku